Gruha lakshmi Scheme: ಗೃಹಲಕ್ಷ್ಮಿ ಯೋಜನೆ; ಮಹಿಳೆಯರೇ ಇತ್ತ ಗಮನಿಸಿ, ಆಧಾರ್‌ ಸಂಖ್ಯೆಗೆ ಮೊಬೈಲ್‌ ನಂಬರ್‌ ಲಿಂಕ್‌ ಮಾಡುವ ತಂತ್ರಾಂಶದ ಆವೃತ್ತಿಯಲ್ಲಿ ಬದಲಾವಣೆ!

Latest news Due to changed Aadhaar link version gruha Lakshmi scheme registration getting delayed

Gruha lakshmi Scheme: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ
(Gruha lakshmi Scheme) ಅರ್ಜಿ ಸಲ್ಲಿಕೆ ನಡೆಯುತ್ತಿದೆ. ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಮುಂದಾಗಿದ್ದಾರೆ. ಸದ್ಯ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ. ಇದೀಗ ಆಧಾರ್‌ ಸಂಖ್ಯೆಗೆ ಮೊಬೈಲ್‌ ನಂಬರ್‌ ಲಿಂಕ್‌ ಮಾಡುವ ತಂತ್ರಾಂಶದ ಆವೃತ್ತಿಯಲ್ಲಿ ಬದಲಾವಣೆ ಮಾಡಲಾಗಿದೆ. ಇದರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಜನರಿಗೆ ಹೊಸ ಸಮಸ್ಯೆ ಎದುರಾಗಿದೆ.

 

ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಬೇಕಿದ್ದರೆ ಯಜಮಾನಿ ಮಹಿಳೆಯ ಆಧಾರ್‌ ಕಾರ್ಡ್‌ಗೆ ಮೊಬೈಲ್‌ ನಂಬರ್‌ ಲಿಂಕ್‌ ಆಗಿರಬೇಕು. ರಾಜ್ಯದಲ್ಲಿ ಇನ್ನೂ ಸಾವಿರಾರು ಮಹಿಳೆಯರ ಆಧಾರ್‌- ಮೊಬೈಲ್‌ ನಂಬರ್‌ ಜೋಡಣೆಯಾಗಿಲ್ಲ. ಹಾಗಾಗಿ ಗ್ರಾಹಕರು ಅಂಚೆ ಕಚೇರಿಗೆ ತೆರಳಿ ಜೋಡಣೆ ಮಾಡಿಸಲಾರಂಭಿಸಿದ್ದಾರೆ. ಆದರೆ ಜುಲೈ 21 ರಿಂದಲೇ ಎಲ್ಲ ಗ್ರಾಮೀಣ ಅಂಚೆ ಕಚೇರಿಗಳಲ್ಲಿ ಮೊಬೈಲ್‌ ನಂಬರ್‌ ಜೋಡಣೆ ಸ್ಥಗಿತಗೊಳಿಸಲಾಗಿದೆ.

ಆ್ಯಂಡ್ರಾಯ್ಡ್‌ ಮೊಬೈಲ್‌ ಫೋನ್‌ಗಳ ಮೂಲಕ ಅಂಚೆ ಕಚೇರಿಗಳಲ್ಲಿ ಆಧಾರ್‌ ಸಂಖ್ಯೆಗೆ ಮೊಬೈಲ್‌ ನಂಬರ್‌ ಸೀಡಿಂಗ್‌ ಪ್ರಕ್ರಿಯೆ 2 ವರ್ಷಗಳಿಂದ ನಡೆಯುತ್ತಿದೆ. ಇನ್ನು ಕೂಡ ಈ ನಿಟ್ಟಿನಲ್ಲಿ ಶೇ.100 ಸಾಧನೆ ಸಾಧ್ಯವಾಗಿಲ್ಲ ಎಂಬುದು ಇದೀಗ ತಂತ್ರಾಂಶದ ವರ್ಶನ್‌ ಬದಲಾವಣೆ ಸಂದರ್ಭದಲ್ಲಿ ತಿಳಿದುಬಂದಿದೆ.

ಮೊಬೈಲ್‌ ನಂಬರ್‌ ಜೋಡಣೆ ಮಾಡುವ ತಂತ್ರಾಂಶದ ಹಳೆಯ ವರ್ಶನ್‌ನಲ್ಲಿ ಜೋಡಣೆ ಸಾಧ್ಯವಾಗುತ್ತಿಲ್ಲ‌. ಹಾಗಾಗಿ ಹೊಸ ವರ್ಶನ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದಾಗಿ ಆಧಾರ್‌- ಮೊಬೈಲ್‌ ನಂಬರ್‌ ಜೋಡಣೆಗೆ ಅಂಚೆ ಕಚೇರಿಗೆ ಹೋಗುವ ಮಹಿಳೆಯರು ವಾಪಾಸ್ಸಾಗುತ್ತಿದ್ದಾರೆ. ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಸಂದರ್ಭದಲ್ಲೇ ಅಖಿಲ ಭಾರತ ಮಟ್ಟದಲ್ಲಿ ತಂತ್ರಾಂಶ ಬದಲಾವಣೆಯಾಗಿರುವುದು ಸಮಸ್ಯೆಗೆ ಕಾರಣವಾಗಿದೆ.

ಆಧಾರ್‌ ಪ್ರಾಧಿಕಾರದವರು ಇಂದು ನಾಳೆಯೊಳಗೆ ಹೊಸ ವರ್ಶನ್‌ ಲಾಂಚ್‌ ಮಾಡುವ ಸಾಧ್ಯತೆ ಇದೆ. ನಂತರ ಮೊದಲಿನಂತೆ ಎಲ್ಲ ಗ್ರಾಮೀಣ ಅಂಚೆ ಕಚೇರಿಗಳಲ್ಲಿ ಆಧಾರ್‌- ಮೊಬೈಲ್‌ ನಂಬರ್‌ ಲಿಂಕ್‌ ನಡೆಯಲಿದೆ. ಆದರೆ ಹೊಸ ವರ್ಶನ್‌ ಎಲ್ಲ ಆ್ಯಂಡ್ರಾಯ್ಡ್‌ ಮೊಬೈಲ್‌ಗಳಿಗೆ ಹೊಂದಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದೆ. ಹೊಸ ವರ್ಶನ್‌ ಲಾಂಚ್‌ ಆದ ಬಳಿಕವಷ್ಟೇ ಇದರ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಇದನ್ನೂ ಓದಿ: Railway Recruitment : ನೀವು SSLC, ITI ಪಾಸಾಗಿದ್ದೀರಾ? ಹಾಗಾದರೆ ರೈಲ್ವೆ ಇಲಾಖೆಯಲ್ಲಿದೆ ನಿಮಗಾಗಿ ಸಾವಿರಕ್ಕಿಂತಲೂ ಅಧಿಕರ ಉದ್ಯೋಗಾವಕಾಶ!

Leave A Reply

Your email address will not be published.