GruhaJyoti Yojana: ಗೃಹಜ್ಯೋತಿ ಯೋಜನೆ; ನೀವೇನಾದರೂ ಜೂ.25ರ ನಂತರ ನೋಂದಣಿ ಮಾಡಿಸಿದ್ದೀರಾ? ಹಾಗಾದರೆ ಈ ಮಾಹಿತಿ ನಿಮಗಾಗಿ!!!

Latest Karnataka news Congress guarantee countdown for official launch of gruha Jyoti scheme

GruhaJyoti Yojana: ರಾಜ್ಯದಲ್ಲಿ ಈವರೆಗೂ ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆಗೆ ಬಹುತೇಕ ಅರ್ಜಿ ಸಲ್ಲಿಕೆಯಾಗಿವೆ. ಜುಲೈ 25ರೊಳಗೆ ಅರ್ಜಿ ಸಲ್ಲಿಸಿದರೆ ಮಾತ್ರವೇ ಮುಂದಿನ ತಿಂಗಳ ಬಿಲ್‌ನಲ್ಲಿ ಉಚಿತ ವಿದ್ಯುತ್‌ ಶುಲ್ಕವು ಕಡಿತವಾಗಲಿದೆ ಎಂದು ಮಾಹಿತಿ ನೀಡಲಾಗಿತ್ತು.

 

ಅಂತೆಯೇ ಗೃಹಜ್ಯೋತಿ ಯೋಜನೆಯ (GruhaJyoti Yojana) ಅಧಿಕೃತ ಚಾಲನೆಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಸದ್ಯ ಆಗಸ್ಟ್ 1 ಮಂಗಳವಾರದಿಂದ ಉಚಿತ ವಿದ್ಯುತ್ ಬಿಲ್(Free Current bill) ಬರಲಿದ್ದು, ಇದು ಜುಲೈ ತಿಂಗಳಲ್ಲಿ ನೋಂದಣಿ ಮಾಡಿಸಿದ್ದವರಿಗೆ ಮಾತ್ರ ಜೀರೋ ಬಿಲ್(Zero bill) ಬರಲಿದೆ ಎಂದು ಮಾಹಿತಿ ನೀಡಲಾಗಿದೆ.

ಹೌದು, ಜುಲೈ 25ರವರೆಗೆ ಅರ್ಜಿ ಸಲ್ಲಿಸಿರುವವರಿಗೆ ಮಾತ್ರ ಗೃಹಜ್ಯೋತಿ ಲಾಭ ಸಿಗಲಿದ್ದು, ಜುಲೈ 25ರ ನಂತರ ನೋಂದಣಿ ಮಾಡಿದವರಿಗೆ ಆಗಸ್ಟ್ ತಿಂಗಳಿನಲ್ಲಿ ಉಚಿತ ಬಿಲ್ ಬರುವುದಿಲ್ಲ.

ಮುಖ್ಯವಾಗಿ ಆರ್.ಆರ್.ನಂಬರ್‌ನಲ್ಲಿರುವ ಹೆಸರು, ಆಧಾರ್ ಹೆಸರು ಮ್ಯಾಚ್ ಆಗ್ತಿಲ್ಲ. ಶೇ.25ರಷ್ಟು ಕರೆಂಟ್ ಮೀಟರ್ ಪೂರ್ವಿಕರ ಹೆಸರಿನಲ್ಲಿದೆ. ಮೃತಪಟ್ಟಿರುವವರ ಹೆಸರಿನಲ್ಲಿರುವ ಮೀಟರ್‌ಗಳೇ ಹೆಚ್ಚು. ಬಹುತೇಕ ಮಾಲೀಕರಿಗೆ ಮಾಲೀಕರ ಕಲಂನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯ ಆಗುತ್ತಿಲ್ಲ. ಇನ್ನು ಮೃತಪಟ್ಟ ಹಿರಿಯರ ಹೆಸರಿನಲ್ಲಿ ಮೀಟರ್ ಇರುವುದರಿಂದ ಗೃಹಜ್ಯೋತಿ ಯೋಜನೆಯ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದೆ ಎಂದು ತಿಳಿದು ಬಂದಿದೆ.

ಆದ್ದರಿಂದ ಇದುವರೆಗೆ 1,18,50,474 ಫಲಾನುಭವಿಗಳಿಂದ ಗೃಹಜ್ಯೋತಿಗೆ ಅರ್ಜಿ ಸಲ್ಲಿಕೆ ಆಗಿದ್ದು, ಎರಡೂವರೆ ಕೋಟಿ ಫಲಾನುಭವಿಗಳಲ್ಲಿ ಶೇ.60ರಷ್ಟು ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಶೇ.40ರಷ್ಟು ಜನ ಅರ್ಜಿ ಸಲ್ಲಿಸುವುದು ಬಾಕಿ ಇದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ಲಾಗಿನ್ ಐಡಿಯ ಕುರಿತು ಮಹತ್ವದ ಮಾಹಿತಿ! ತಪ್ಪದೇ ಓದಿ

Leave A Reply

Your email address will not be published.