DL Cancellation: ಮಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಬಿಗ್ ಶಾಕ್ ; 222 ಡಿಎಲ್ ರದ್ದತಿಗೆ ಪ್ರಸ್ತಾವನೆ ಸಲ್ಲಿಕೆ !

Latest news Submission of proposal for cancellation of DL for traffic violation

DL Cancellation: ಮಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಬಿಗ್ ಶಾಕ್ ಇಲ್ಲಿದೆ. 222 ಡಿಎಲ್ ರದ್ದತಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಹೌದು, ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿರುವ ಮತ್ತು ಸಂಚಾರ ನಿಯಮ ಉಲ್ಲಂಘಿಸಿರುವ 222 ವಾಹನ ಚಾಲಕರ ಚಾಲನಾ ಪರವಾನಗಿ (ಡಿಎಲ್) ರದ್ದುಗೊಳಿಸಲು (DL Cancellation) ಮಂಗಳೂರು (mangalore) ಪೊಲೀಸ್ ಕಮೀಷನರ್ ಕಚೇರಿಯಿಂದ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಜುಲೈ 13ರಿಂದ 25ರವರೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿರುವ ಮತ್ತು ಸಂಚಾರ ನಿಯಮ ಪಾಲನೆ ಮಾಡದಿರುವ ಪ್ರಕರಣಗಳಲ್ಲಿ ಒಟ್ಟು 222 ಡಿಎಲ್ ಅಮಾನತುಪಡಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್.ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಟ್ಟು 222 ವಾಹನ ಚಾಲಕರ ಚಾಲನಾ ಪರವಾನಗಿ (ಡಿಎಲ್) ರದ್ದುಗೊಳಿಸಲು ಪ್ರಸ್ತಾವನೆ ಕಳುಹಿಸಲಾಗಿದ್ದು, ಅದರ ಪಟ್ಟಿ ಹೀಗಿದೆ. ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿರುವ 113, ಹೆಲ್ಮೆಟ್ ಇಲ್ಲದೆ ಸಂಚರಿಸಿರುವ 59, ಸೀಟ್ ಬೆಲ್ಟ್‌ ಇಲ್ಲದೆ ಪ್ರಯಾಣಿಸಿದ 17, ಸಾಗಾಟದ ವಾಹನಗಳಲ್ಲಿ ಪ್ರಯಾಣಿಕರ ಸಾಗಿಸಿರುವ 16, ಕೆಂಪು ಸಿಗ್ನಲ್ ಜಂಪಿಂಗ್ – 5, ವಾಹನ ಸಂಚಾರದಲ್ಲಿರುವಾಗಲೇ ಮೊಬೈಲ್ ಬಳಸಿರೋದು – 4, ಕಮರ್ಷಿಯಲ್ ವಾಹನಗಳಲ್ಲಿ ಹೆಚ್ಚಿನ ಪ್ರಯಾಣಿಕರ ಸಾಗಾಟ – 4, ದ್ವಿಚಕ್ರ ವಾಹನಗಳಲ್ಲಿ ಮೂವರು ಪ್ರಯಾಣ – 3, ಹಾಗೂ ಮದ್ಯಸೇವಿಸಿ ಚಾಲನೆ ಮಾಡಿರುವ – 1 ಪ್ರಕರಣಗಳಲ್ಲಿ ಚಾಲಕರ ಡಿಎಲ್ ರದ್ದು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಸುಪ್ರೀಂ ಕೋರ್ಟ್​ ರಸ್ತೆ ಸುರಕ್ಷತಾ ಸಮಿತಿಯ ನಿರ್ದೇಶನದಂತೆ ಪ್ರತಿನಿತ್ಯ ಭಾರತೀಯ ದಂಡ ಸಂಹಿತೆ 1860 ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆ-1988/2019 ಅಡಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರ ಡಿಎಲ್​​ಗಳನ್ನು ಅಮಾನತುಪಡಿಸಲು ಆದೇಶಿಸಿದೆ‌‌ ಎಂದು ವರದಿ ತಿಳಿಸಿದೆ.

 

ಇದನ್ನು ಓದಿ: ಸತ್ತವರ ಫೋಟೋ ಮನೆಯಲ್ಲಿ ಎಲ್ಲೆಂದರಲ್ಲಿ ನೇತು ಹಾಕಿದ್ದೀರಾ, ಹಾಗಿದ್ರೆ ಈ ಮಾಹಿತಿ ನಿಮಗಾಗಿ

Leave A Reply

Your email address will not be published.