Milk Price Hike: ಜನಸಾಮಾನ್ಯರಿಗೆ ಮತ್ತೆ ತಟ್ಟಿತು ಬೆಲೆ ಏರಿಕೆಯ ಬಿಸಿ ; ಹಾಲಿನ ದರ 3 ರೂ. ಏರಿಕೆ‌ – ಈ ದಿನದಿಂದಲೇ ಜಾರಿ !

Latest news milk product price hike Nandini Milk price hike

Nandini Milk price hike: ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ತರಕಾರಿಗಳ ಬೆಲೆ ಗಗನಕ್ಕೇರಿರುವ ಮಧ್ಯೆ ಇದೀಗ ಹಾಲಿನ ದರವೂ ಹೆಚ್ಚಳವಾಗಿದೆ. ನಂದಿನಿ ಹಾಲಿನ (Nandini Milk price hike) ದರ 3 ರೂ. ಏರಿಕೆಗೆ ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆ ಆಗಸ್ಟ್‌ 1 ರಿಂದ ಈ ಹೊಸ ದರ ಜಾರಿಗೆ ಬರಲಿದೆ.

ಈ ಹಿಂದೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಏರ್ಪಡಿಸಿದ್ದ ಹಾಲು ಒಕ್ಕೂಟಗಳು ಮತ್ತು ಕೆಎಂಎಫ್ (KMF) ಪದಾಧಿಕಾರಿಗಳ ಸಭೆಯಲ್ಲಿ  ಹಾಲಿನ ದರ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿ, ತೀರ್ಮಾನ ಕೈಗೊಳ್ಳಲಾಗಿತ್ತು. KMF ಪ್ರತಿ ಲೀಟರ್‌ ಹಾಲಿನ ದರದಲ್ಲಿ 5 ರೂ. ಹೆಚ್ಚಳ ಮಾಡುವಂತೆ ಪ್ರಸ್ತಾವ ಸಲ್ಲಿಸಿತ್ತು. ಕೊನೆಗೆ ಸರ್ಕಾರ 3 ರೂ. ಹೆಚ್ಚಳಕ್ಕೆ ಒಪ್ಪಿಗೆ ನೀಡಿತ್ತು. ಆದರೆ, ಇದಕ್ಕೆ ನಿನ್ನೆ ಸಂಪುಟ ಸಭೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹಾಗಾಗಿ ಆಗಸ್ಟ್ 1 ರಿಂದ ನಂದಿನಿ ಹಾಲಿನ ದರ ಹೆಚ್ಚಳ ಜಾರಿಗೆ ಬರಲಿದೆ.

ಪರಿಷ್ಕೃತ ಹಾಲಿನ ದರ:-
ಹೋಮೋಜಿನೈಸ್ಟ್ ಟೋನ್ಸ್ ಹಾಲು :40 ರೂ ದಿಂದ 43 ರೂ.
ಶುಭಂ ಹಾಲು: 45 ರೂ ದಿಂದ 48 ರೂ.
ಮೊಸರು: 47- 50 ರೂ.
ಟೋನ್ಸ್ ಹಾಲು: 39 ರೂದಿಂದ 42 ರೂ.
ಶುಭಂ ಹಾಲು (ಹಸಿರು): 45 ರೂದಿಂದ 48 ರೂ.
ಸ್ಪೆಷಲ್ ಹಾಲು (ಆರೆಂಜ್) : 45 ರೂ ದಿಂದ 48 ರೂ,
ಸಮೃದ್ಧಿ ಹಾಲು : 50 ರೂ ದಿಂದ 53 ರೂ.
ಸಂತೃಪ್ತಿ ಹಾಲು : 52 ರೂ ದಿಂದ 55 ರೂ. ಆಗಿದೆ

 

ಇದನ್ನು ಓದಿ: Coocking oil price: ಗ್ರಾಹಕರಿಗೆ ಸಿಹಿ ಸುದ್ದಿ ಮೇಲೆ ಸಿಹಿ ಸುದ್ದಿ! ಅಡುಗೆ ಎಣ್ಣೆ ಬೆಲೆ ಇಳಿಕೆ!!!!

Leave A Reply

Your email address will not be published.