Aadhaar Card: ಆಧಾರ್ ನ್ನು ಪಡಿತರ ಚೀಟಿಗೆ ಲಿಂಕ್ ಮಾಡಿಸದ ಜನರಿಗೆ ಕೇಂದ್ರ ಸರಕಾರದಿಂದ ಬಂತು ಬಿಗ್ ಅಪ್ಡೇಟ್!
latest news Last Date of Linking with Aadhaar Card and Ration Card
Aadhaar Card: ಕೇಂದ್ರ ಸರ್ಕಾರ, ಆಧಾರ್ ಕಾರ್ಡ್ ಅನ್ನು ನಿಮ್ಮ ಪಡಿತರ ಚೀಟಿಗೆ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಿದ್ದು, ಸೆಪ್ಟೆಂಬರ್ 30 ರೊಳಗೆ ಆಧಾರ್ ಕಾರ್ಡ್ (Aadhaar Card) ಅನ್ನು ನಿಮ್ಮ ಪಡಿತರ ಚೀಟಿಗೆ ಲಿಂಕ್ ಮಾಡಬೇಕು ಎಂದು ಮಾಹಿತಿ ತಿಳಿಸಲಾಗಿದೆ.
ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವ ವಿಧಾನ:
ನಿಮ್ಮ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಪೋರ್ಟಲ್ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ನಂತರ ‘ಮುಂದುವರಿಯಿರಿ’ ಮೇಲೆ ಕ್ಲಿಕ್ ಮಾಡಿ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್ವರ್ಡ್
(ಒಟಿಪಿ) ಬರುತ್ತದೆ.
ಒಟಿಪಿ ನಮೂದಿಸಿ ಮತ್ತು ಪಡಿತರ ಚೀಟಿ ಆಧಾರ್ ಕಾರ್ಡ್ ಲಿಂಕ್ ಕ್ಲಿಕ್ ಮಾಡಿ
ಸದ್ಯ ಆಧಾರ್-ಪಡಿತರ ಚೀಟಿ ಲಿಂಕ್ ಪೂರ್ಣಗೊಳಿಸಲು 30 ಸೆಪ್ಟೆಂಬರ್ 2023 ರವರೆಗೆ ವಿಸ್ತರಿಸಲಾಗಿದೆ. ಆದ್ದರಿಂದ ಇನ್ನೂ ತಮ್ಮ ದಾಖಲೆಗಳನ್ನು ಲಿಂಕ್ ಮಾಡಲು ಜನರಿಗೆ ಸಮಯವಿದೆ. ಸೆಪ್ಟೆಂಬರ್ 30 ರೊಳಗೆ ಪಡಿತರ ಚೀಟಿಗೆ ಆಧಾರ್ ಅನ್ನು ಲಿಂಕ್
ಮಾಡಬಹುದು.
ಸೆಪ್ಟೆಂಬರ್ 30 ರ ಕೊನೆಯ ದಿನಾಂಕದ ನಂತರ ತಮ್ಮ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಲು ಯಾರಿಗೂ ಅನುಮತಿಸಲಾಗುವುದಿಲ್ಲ. ತಮ್ಮ ದಾಖಲೆಗಳನ್ನು ಲಿಂಕ್ ಮಾಡಿದ ಜನರು ಹಂತಗಳನ್ನು ಪೂರ್ಣಗೊಳಿಸಬೇಕು ಎಂದು ಕೇಂದ್ರ ಸರ್ಕಾರದ ಮೂಲಗಳು ಸೂಚನೆ ನೀಡಿದೆ.
ಅದಲ್ಲದೆ ಸಮೀಪದ ಪಡಿತರ ಕಚೇರಿಗೆ ನೀವು ಉಚಿತವಾಗಿ ಆಧಾರ್ ನಂಬರ್ ಲಿಂಕ್ ಮಾಡಬಹುದು. ಇದರ ಹೊರತು ಯುಐಡಿಐನ ವೆಬ್‌ಸೈಟ್ ಮೂಲಕ ರೇಷನ್ ಕಾರ್ಡ್ ಲಿಂಕ್ ಮಾಡಬಹುದು. ರಾಜ್ಯ ಪಿಡಿಎಸ್ ವೆಬ್‌ಸೈಟ್ ಮೂಲಕವೂ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು.
ಇದನ್ನು ಓದಿ: Snake wine: ಈ ವೈನ್ ವಿಷಕಾರಿ ಹಾವಿನಿಂದ ತಯಾರು ಮಾಡಲಾಗುತ್ತೆ! ನೀವು ಇದನ್ನು ಕುಡಿದಿದ್ದೀರಾ?