Lucky plant in Shravana Masa: ಶ್ರಾವಣ ಮಾಸದಲ್ಲಿ ಈ ಐದು ಗಿಡಗಳನ್ನು ನೆಟ್ಟರೆ ನಿಮ್ಮ ಅದೃಷ್ಟ ಖುಲಾಯಿಸುತ್ತೆ
Latest news you will get good luck If you plant these five plants in the month of Shravana masa
Lucky plant in Shravana Masa: ಆಷಾಢ ಮಾಸದ ಕೊನೆಯ ಭಾಗ ಭೀಮನ ಅಮಾವಾಸ್ಯೆ ಮುಗಿದ ಕೂಡಲೇ ಶ್ರಾವಣ ಮಾಸ ಬರುತ್ತದೆ. ಶ್ರಾವಣ ಮಾಸವು ಹಿಂದೂ ಪಂಚಾಂಗದ ಐದನೇ ಮಾಸವಾಗಿದೆ. ಶ್ರಾವಣ ಮಾಸ ಎಂದರೆ ಹಬ್ಬಗಳ ಸಾಲು. ಈ ಮಾಸದಲ್ಲಿ ಶಿವನ ಆರಾಧನೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುವುದಲ್ಲದೆ, ಬೇಡಿದ್ದನ್ನು ಕೊಡುವ ಶಿವನ ಕೃಪೆ ಸಂಪೂರ್ಣ ಪ್ರಾಪ್ತವಾಗುತ್ತದೆ ಎಂಬುದು ನಂಬಿಕೆ. ವಾಸ್ತು ಶಾಸ್ತ್ರದ ಪ್ರಕಾರ, ಶ್ರಾವಣ ಮಾಸದಲ್ಲಿ ಕೆಲವು ಸಸ್ಯಗಳನ್ನು ನೆಡುವುದರಿಂದ ಮನೆಯಲ್ಲಿ ಸುಖ- ಸಮೃದ್ಧಿ ನೆಲೆಸುವುದಲ್ಲದೆ, ಹಣದ ಹರಿವನ್ನು ಹರಿಸುತ್ತವೆ ಎಂದು ಹೇಳಲಾಗುತ್ತದೆ. ಅಲ್ಲ, ಭಗವಾನ್ ಶಿವನಿಗೆ ಹಸಿರು ಸಸ್ಯಗಳೆಂದರೆ ತುಂಬಾ ಅಚ್ಚು ಮೆಚ್ಚು ಎಂತಲೂ ಹೇಳಲಾಗುತ್ತದೆ. ಹಾಗಾದರೆ ಆ ಸಸ್ಯಗಳ ಬಗ್ಗೆ (Lucky plant in Shravana Masa) ತಿಳಿಯೋಣ…
ಬಿಲ್ವ ಪತ್ರೆ: ಶಿವನಿಗೆ (lord Shiva) ಪ್ರಿಯವಾದ ವಸ್ತು ಬಿಲ್ವ ಪತ್ರೆ. ಪಾಪ ಪರಿಹಾರ ಮಾಡಲು, ಬೇಡಿಕೊಂಡಿದ್ದನ್ನು ಈಡೇರಿಸಲು, ಸಂಕಟ ಪರಿಹರಿಸುವ ಶಿವನ ಪಾದ ಕಮಲಗಳಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕು. ಒಂದೇ ಒಂದು ದಳ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಿ ಭಕ್ತರು ಏನೇ ಬೇಡಿಕೆ ಇಟ್ಟರೂ ಅವರ ಮನಾಭಿಲಾಷೆಗಳು ನೆರವೇರುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಲಕ್ಷ್ಮಿ ದೇವಿಯು (Goddess Lakshmi) ಬಿಲ್ವ ವೃಕ್ಷದಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬಿಲ್ವ ಪತ್ರೆ ಗಿಡ ನೆಟ್ಟು ಪೂಜಿಸುವವರಿಗೆ ಶಿವನ ಜೊತೆಗೆ ಮಾತಾ ಲಕ್ಷ್ಮಿಯ ಕೃಪೆಯೂ ಸಿಗುತ್ತದೆ ಹಾಗೂ ಆರ್ಥಿಕ ಸಂಕಷ್ಟಗಳಿಂದ ಪಾರಗಬಹುದು ಎಂಬ ನಂಬಿಕೆ ಇದೆ.
ತುಳಸಿ (Basil) : ಮನೆಯ ಮುಂದೆ ತುಳಸಿ ನೆಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ತುಳಸಿಯು ಔಷಧೀಯ ಗುಣಗಳನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯದಲ್ಲಿ ಸಂಪತ್ತಿನ ದೇವತೆ ಮಾತೆ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ. ಈ ಸಸ್ಯವನ್ನು ವಿಶೇಷವಾಗಿ ಶ್ರಾವಣ ಮಾಸದಲ್ಲಿ ನೆಡುವುದರಿಂದ ಲಾಭಗಳು ಅನೇಕವೆಂದು ಹೇಳಲಾಗುತ್ತದೆ. ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು ಮತ್ತು ಪ್ರದಕ್ಷಿಣೆ ಮಾಡಬೇಕು. ಈ ರೀತಿ ಮಾಡಿದರೆ ವೈವಾಹಿಕ ಜೀವನದಲ್ಲಿ ನೆಮ್ಮದಿ ನೆಲೆಸಿರಲು, ಸುಖ-ಸಮೃದ್ಧಿ, ಉತ್ತಮ ಸ್ವಾಸ್ಥ್ಯ, ಯಶಸ್ಸು ಮತ್ತು ಆರೋಗ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇದೆ.
ಬಾಳೆ ಗಿಡ(Banana plant) : ಶ್ರಾವಣ ಮಾಸದ ಏಕಾದಶಿ ಅಥವಾ ಗುರುವಾರದಂದು ಮನೆಯ ಹಿಂದೆ ಬಾಳೆ ಸಸಿಯನ್ನು ನೆಡವುದರಿಂದ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಾಳೆ ಗಿಡ ಮನೆಯ ಋಣಾತ್ಮಕತೆಯನ್ನು ಹೋಗಲಾಡಿಸುತ್ತದೆ. ಬಾಳೆಯನ್ನು ಮನೆಯ ಮುಂದೆ ನೆಡುವುದು ಉತ್ತಮವಲ್ಲವೆಂದು ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ಬಾಳೆ ಗಿಡವನ್ನು ನೆಡುವುದರಿಂದ ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುತ್ತವೆ. ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ವಿಷ್ಣುವಿನ ಜೊತೆಗೆ ಶಿವನ ಆಶೀರ್ವಾದ ಸಿಗುತ್ತದೆ. ಸಂತೋಷ, ಶಾಂತಿ, ತಂದುಕೊಡುತ್ತದೆ. ಅಲ್ಲದೆ ಬಾಳೆ ಮರಕ್ಕೆ ಹಳದಿ ದಾರವನ್ನು ಕಟ್ಟಿ, ಪ್ರದಕ್ಷಿಣೆ ಹಾಕುವುದರಿಂದ ವಿವಾಹ ಯೋಗ ಬೇಗ ಕೂಡಿ ಬರುತ್ತದೆ ಎಂದು ಹೇಳಲಾಗುತ್ತದೆ.
ಶಮಿ ಗಿಡ (Shami plant) : ಶಿವನಿಗೆ ಪ್ರಿಯವಾದ ಸಸ್ಯಗಳಲ್ಲಿ ಶಮಿ ಗಿಡವೂ ಒಂದು. ಶ್ರಾವಣ ಮಾಸದಲ್ಲಿ ಮನೆಗೆ ಶಮಿ ಗಿಡವನ್ನು ತರುವುದರಿಂದ ಅಂತಹ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗಿ ಸಂಪತ್ತಿನ ಸುರಿಮಳೆಯೇ ಆಗಲಿದೆ. ಮನೆಯ ಮುಖ್ಯ ದ್ವಾರದ ಎಡಭಾಗದಲ್ಲಿ ಇದನ್ನು ನೆಡುವುದು ಉತ್ತಮವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಈ ವೃಕ್ಷದ ಮುಂದೆ ಎಳ್ಳೆಣ್ಣೆಯ ದೀಪವನ್ನು ಹಚ್ಚುವುದರಿಂದ ಶನಿ ದೋಷ ನಿವಾರಣೆಯಾಗುವುದಲ್ಲದೆ, ಸ್ವಾಸ್ಥ್ಯಸಮಸ್ಯೆ ಇದ್ದಲ್ಲಿ ಸುಧಾರಣೆ ಕಂಡು ಬರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಿದ್ದಾರೆ.
ಎಕ್ಕ ಗಿಡ (White aak plant) : ವಾಸ್ತು ಶಾಸ್ತ್ರ ಪ್ರಕಾರ, ಎಕ್ಕ ಗಿಡವನ್ನು ಶ್ರಾವಣ ಮಾಸದಂದು ನೆಡೆಯುವುದರಿಂದ ಅನೇಕ ಲಾಭಗಳಿವೆ ಎಂದು ಹೇಳಿದ್ದಾರೆ. ಎಕ್ಕ ಗಿಡದಲ್ಲಿ ವಿಘ್ನ ವಿನಾಶಕ ಗಣಪತಿ ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ಎಕ್ಕದ ಹೂ ಶಿವನಿಗೆ ತುಂಬಾ ಪ್ರಿಯ. ಈ ಸಸ್ಯವನ್ನು ಶ್ರಾವಣ ಮಾಸದಲ್ಲಿ ಮನೆಯ ಮುಂದೆ ನೆಡುವುದರಿಂದ ಅಂತಹ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ಶಕ್ತಿ ತುಂಬುತ್ತದೆ ಎಂಬ ನಂಬಿಕೆ ಇದೆ.
ಇದನ್ನು ಓದಿ: Android Smartphone: ಈ ಸ್ಮಾರ್ಟ್ಫೋನ್’ಗಳು ಆಗಸ್ಟ್ 1ರಿಂದ ಕಾರ್ಯ ನಿರ್ವಹಿಸುವುದಿಲ್ಲ ; ನಿಮ್ಮ ಫೋನ್ ಕೂಡ ಇದೆಯಾ ನೋಡಿ !