Alcohol: ಭಾರತದ ಮದ್ಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸೇಲ್ ಆಗೋದು ಯಾವುದು ? ಸ್ಪಿರಿಟ್​​ಗಳ ರಾಜ ಯಾರು ಗೊತ್ತಾ ?!

Latest news Alcohol news Which is the highest selling liquor market in India

Alcohol: ಮದ್ಯಪಾನ (Alcohol) ಆರೋಗ್ಯಕ್ಕೆ ಹಾನಿಕಾರಕ. ಆದರೆ ಕೆಲವೊಂದು ಡ್ರಿಂಕ್ಸ್​ಗಳನ್ನು ಮಿತಿಯಲ್ಲಿ ಕುಡಿದರೆ ಆರೋಗ್ಯಕರ ಪ್ರಯೋಜನಗಳನ್ನು ಸಹ ಪಡೆಯಬಹುದು. ಹಾಗೆಯೇ ಬಿಯರ್ ಕುಡಿಯುವುದರಿಂದ ಕೂಡ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎನ್ನುತ್ತದೆ ಸಂಶೋಧನೆ. ಅಂದಹಾಗೆ ಭಾರತದ ಮದ್ಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸೇಲ್ ಆಗುವುದು ಬಿಯರ್.

ಆದರೆ, ಲಿಕ್ಕರ್ ಮಾರುಕಟ್ಟೆಯಲ್ಲಿ ವಿಸ್ಕಿಯೇ ಕಿಂಗ್. ಇತ್ತೀಚಿನ ವರ್ಷಗಳಲ್ಲಿ ವೈನ್ ಮತ್ತು ಜಿನ್ ಸೇವನೆಯು ಭಾರೀ ಹೆಚ್ಚಳವಾಗಿದೆಯಾದರೂ. ಭಾರತದಲ್ಲಿ ಆಲ್ಕೋಹಾಲ್ ಮಾರುಕಟ್ಟೆಯಲ್ಲಿ ವಿಸ್ಕಿ (Whiskey) ಪ್ರಾಬಲ್ಯ ಬಹಳ ಹೆಚ್ಚಾಗಿದೆ.
ಒಟ್ಟು ಲಿಕ್ಕರ್ ಸೇಲ್​ನಲ್ಲಿ ಶೇ. 66ರಷ್ಟು ವಿಸ್ಕಿಯೇ ಇದೆಯಂತೆ. ಅದರಲ್ಲೂ 750ರೂ ಒಳಗಿನ ವಿಸ್ಕಿ ಬಾಟಲ್​ಗಳಂತೂ ಬಹಳ ಹೆಚ್ಚಿನ ಮಟ್ಟದಲ್ಲಿ ಮಾರಾಟವಾಗುತ್ತವೆ. ಭಾರತದಲ್ಲಿ ಸ್ಪಿರಿಟ್ ಮಾರಾಟದ ಸುಮಾರು ಮೂರನೇ ಎರಡರಷ್ಟು ಭಾಗವನ್ನು ವಿಸ್ಕಿಯಿಂದ ಲೆಕ್ಕಹಾಕಲಾಗುತ್ತದೆ. ಸಂಶೋಧನೆಗಳ ಪ್ರಕಾರ, ಅತಿ ಹೆಚ್ಚು ವೋಡ್ಕಾ ಮತ್ತು ವೈನ್ ಅನ್ನು ಸೇವನೆ ಮಾಡುತ್ತಾರೆ ಎಂದು ಹೇಳಲಾಗಿದೆ. ಒಟ್ಟಾರೆ ಮದ್ಯ ಮಾರುಕಟ್ಟೆ ಪರಿಗಣಿಸಿದರೆ ಬಿಯರ್ ನಂಬರ್ ಒನ್ ಎನಿಸಿದೆ.

ಮದ್ಯ ಮಾರುಕಟ್ಟೆಯಲ್ಲಿ ಭಾರತ ವಿಶ್ವದಲ್ಲೇ ಐದನೇ ಸ್ಥಾನದಲ್ಲಿದೆ. ಇಲ್ಲಿಯದ್ದು 53 ಬಿಲಿಯನ್ ಡಾಲರ್ ಮಾರುಕಟ್ಟೆಯಾಗಿದೆ. ಇಂಪೋರ್ಟೆಡ್ ಆಲ್ಕೋಹಾಲ್ ಲಭ್ಯವಿದೆಯಾದರೂ ಭಾರತೀಯ ಸಂಸ್ಥೆಗಳು ತಯಾರಿಸಿದ ಮದ್ಯಗಳೇ ಅತಿಹೆಚ್ಚು ಸೇಲ್ ಆಗುವುದು. ಸ್ಪಿರಿಟ್​ಗಳ ಪೈಕಿ ವಿಸ್ಕಿ ಅತಿ ಹೆಚ್ಚು ಮಾರಾಟವಾಗುತ್ತದೆ. ಇದರಲ್ಲಿ ಭಾರತೀಯ ವಿಸ್ಕಿಯೇ ಹೆಚ್ಚು. ಭಾರತದ 10 ವಿಸ್ಕಿ ಬ್ರಾಂಡ್​ಗಳೇ ಶೇ. 85ರಷ್ಟು ಮಾರುಕಟ್ಟೆ ಪ್ರಾಬಲ್ಯ ಹೊಂದಿವೆ. ಅದರಲ್ಲೂ ಕಡಿಮೆ ಬೆಲೆಯ ವಿಸ್ಕಿಗೆ ಭಾರತದಲ್ಲಿ ಒಳ್ಳೆಯ ಡಿಮ್ಯಾಂಡ್ ಇದೆ.

ಮದ್ಯ ಮಾರುಕಟ್ಟೆಯಲ್ಲಿ 2022ರ ಮಾರಾಟ :-
ಸ್ಪಿರಿಟ್ಸ್: 36.75 ಕೋಟಿ ಕೇಸ್​ಗಳ
ಬಿಯರ್: 31.39 ಕೋಟಿ ಕೇಸ್​ಗಳು
ವಿಸ್ಕಿ: 24.2 ಕೋಟಿ ಕೇಸ್​ಗಳು
ಬ್ರಾಂಡಿ: 6.87 ಕೋಟಿ ಕೇಸ್​ಗಳು
ರಮ್: 4.6 ಕೋಟಿ ಕೇಸ್​ಗಳು
ಸಿದ್ಧ ಪೇಯ: 3.79 ಕೋಟಿ ಕೇಸ್​ಗಳು
ವೈನ್: 1.79 ಕೋಟಿ ಕೇಸ್​ಗಳು
ವೋಡ್ಕಾ: 87 ಲಕ್ಷ ಕೇಸ್​ಗಳು
ಜಿನ್: 17 ಲಕ್ಷ ಕೇಸ್​ಗಳು

Leave A Reply

Your email address will not be published.