Uttar Pradesh: ಎರಡೂವರೆ ವರ್ಷದ ಹೆಣ್ಣು ಮಗುವಿಗೆ ನಾಯಿ ಕಡಿತ ; ನಂತರ ತನ್ನ ತಾಯಿ ಸೇರಿದಂತೆ 50 ಜನರನ್ನು ಕಚ್ಚಿ ಸಾವನ್ನಪ್ಪಿದ ಮಗು !

Latest new Two and a half year old girl died bitten by a dog in Uttar Pradesh

Uttar Pradesh: ಮನುಷ್ಯರಿಗೆ ನಾಯಿ ಕಚ್ಚಿದಾಗ ಅವರು ಇಂಜೆಕ್ಷನ್ ತೆಗೆದುಕೊಳ್ಳಬೇಕು ಇಲ್ಲಾಂದ್ರೆ ರೇಬಿಸ್ ಕಾಯಿಲೆ ಬರುತ್ತದೆ. ಆದರೆ, ಇಲ್ಲೊಂದು ಪ್ರಕರಣ ವಿಭಿನ್ನ ಹಾಗೂ ವಿಚಿತ್ರವಾಗಿದೆ. ಹೌದು, ಹೆಣ್ಣು ಮಗುವಿಗೆ ನಾಯಿ ಕಚ್ಚಿದ್ದು, ನಂತರ ಆಕೆ ಇತರ ಮನುಷ್ಯರನ್ನು ಕಚ್ಚಿ ಕೊನೆಗೆ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಜಲೌನ್ (Jalaun)​ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಇಲ್ಲಿಯ ಮಂಗಲ್​ ಕುಶ್ವಾಹ್​ ಎಂಬವರ ಮಗಳು ಎರಡೂವರೆ ವರ್ಷದ ಕಾವ್ಯಾ ಕುಶ್ವಾಹ್ ಕಳೆದ ತಿಂಗಳು ತನ್ನ ತಾಯಿಯ ತವರು ಹಿಡೋಖರ್​ಗೆ ಹೋಗಿದ್ದಳು. ಅಲ್ಲಿ ಆಟವಾಡುತ್ತಿದ್ದಾಗ ಬೀದಿನಾಯಿಯೊಂದು ಈ ಮಗುವನ್ನು ಕಚ್ಚಿತ್ತು. ಈ ಅವಘಡ ನಡೆದ ಎರಡನೇ ದಿನದಿಂದ ಮಗು ನಾಯಿಯಂತೆಯೇ ವರ್ತಿಸುವುದು ಮತ್ತು ಜನರಿಗೆ ಕಚ್ಚುವುದನ್ನು ಶುರುಮಾಡಿದ್ದಾಳೆ. ತನ್ನ ತಾಯಿಗೆ, ಕುಟುಂಬದವರಿಗೆ, ಸಂಬಂಧಿಕರಿಗೆ ಮತ್ತು ನೆರೆಹೊರೆಯವರಿಗೆ ಸೇರಿದಂತೆ ಈತನಕ 50ಕ್ಕೂ ಹೆಚ್ಚು ಜನರನ್ನು ಈಕೆ ಕಚ್ಚಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಲ್ಲದೆ, ನಾಯಿ ಕಚ್ಚಿದ ಪರಿಣಾಮ ಹೆಣ್ಣುಮಗು ದಿನದಿಂದ ದಿನಕ್ಕೆ ಅಸ್ವಸ್ಥವಾಗಿದೆ. ಮಗುವನ್ನು ಉಳಿಸಿಕೊಳ್ಳಲು ಕುಟುಂಬದವರು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಝಾನ್ಸೀ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಈ ಮಗುವಿನ ಸಾವಿನ ನಂತರ ಗ್ರಾಮಸ್ಥರು ಭಯಗೊಂಡು ಆ್ಯಂಟಿರೇಬಿಸ್​ ಇಂಜೆಕ್ಷನ್ (Anti Rabies Vaccine)​ ಪಡೆಯಲು ಸರ್ಕಾರಿ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ.

ಈ ಪ್ರಕರಣದ ಬಗ್ಗೆ ಮಾತನಾಡಿರುವ ಜಲೌನ್‌ನ ಮುಖ್ಯ ವೈದ್ಯಾಧಿಕಾರಿ ಡಾ. ಎನ್.ಡಿ. ಶರ್ಮಾ ಅವರು, ನಾಯಿಯಿಂದ ಕಚ್ಚಿಸಿಕೊಂಡ ಹೆಣ್ಣುಮಗು ಮನುಷ್ಯರನ್ನು ಕಚ್ಚಿದರೆ ರೇಬೀಸ್​ ಸೋಂಕು ಹರಡುವುದಿಲ್ಲ. ಆದರೆ ನಾಯಿ, ಕೋತಿ ಅಥವಾ ಇನ್ನಿತರೇ ಕಾಡುಪ್ರಾಣಿಗಳು ಮನುಷ್ಯರನ್ನು ಕಚ್ಚಿದರೆ ಆಗ ಮನುಷ್ಯರಿಗೆ ರೇಬೀಸ್ ಹರಡುತ್ತದೆ. ಆದರೂ ಜನರು ತಮ್ಮ ಸುರಕ್ಷತೆಗಾಗಿ ಇಂಜೆಕ್ಷನ್​ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

 

ಇದನ್ನು ಓದಿ: Belagavi District Court Recruitment 2023: ನೀವು ಪಿಯುಸಿ ಪಾಸ್ ಆಗಿದ್ದೀರಾ ? ಹಾಗಾದ್ರೆ ಇಲ್ಲಿದೆ ಉದ್ಯೋಗ, 52,000 ಸಂಬಳ- ತಕ್ಷಣ ಅರ್ಜಿ ಸಲ್ಲಿಸಿ ! 

Leave A Reply

Your email address will not be published.