ದಕ್ಷಿಣ ಕನ್ನಡ: ಸೌದೆ ಹೊರಲು ಹೋಗಿದ್ದ ವ್ಯಕ್ತಿ ಬೆನ್ನಟ್ಟಿದ ಕಣಜದ ಹುಳು, ವ್ಯಕ್ತಿ ಸಾವು

Latest news man died due to wasp bite while carrying firewood

Share the Article

ಪುತ್ತೂರು:ಕಟ್ಟಿಗೆಗಾಗಿ ಮನೆಯ ಪಕ್ಕದ ಗುಡ್ಡೆಗೆ ಹೋಗಿದ್ದ ವೇಳೆ ಕಣಜದ ಹುಳು ಕಡಿದು ಗಂಭೀರ ಗಾಯೊಗೊಂಡಿದ್ದ ಒಳಮೊಗ್ರು ಗ್ರಾಮದ ಕೈಕಾರ ನಿವಾಸಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೈಕಾರ ನಿವಾಸಿ ಮಾಯಿಲ ಎಂಬವರ ಪುತ್ರ ಗುರುವ(55ವ)ರವರು ಮೃತಪಟ್ಟವರು.ಅವರು ಜು.23ರಂದು ಮಧಾಹ್ನ ಕಟ್ಟಿಗೆಗೆಂದು ಮನೆ ಪಕ್ಕದ ಗುಡ್ಡೆಗೆ ಹೋದವರು ಅರ್ಧ ಗಂಟೆ ಬಿಟ್ಟು ಗುಡ್ಡೆಯಿಂದ ಓಡೋಡಿ ಬಂದಾಗ ಅವರ ಮುಖ,

ಕುತ್ತಿಗೆ, ಮೈಯೆಲ್ಲ ಯಾವುದೋ ನೊಣ ಕಚ್ಚಿ ಊದಿಕೊಂಡಿರುವುದು ಕಂಡು ಬಂದಿತ್ತು.ಈ ಕುರಿತು ಅವರ ತಾಯಿ ಮಾಯಿಲು ಅವರು ವಿಚಾರಿಸಿದಾಗ ಪಿಲಿಕುಡೊಲು ಕಚ್ಚಿರುವುದಾಗಿ ಗುರುವ ಅವರು ತಿಳಿಸಿದ್ದರು.ತಕ್ಷಣ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಅವರು ಮೃತಪಟ್ಟಿದ್ದಾರೆ.ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಇದನ್ನು ಓದಿ: SSLC-2nd PUC Supplementary Exams: SSLC, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ! ಇನ್ಮುಂದೆ ಎರಡು ಬಾರಿ ‘ಪೂರಕ ಪರೀಕ್ಷೆ’ ! 

Leave A Reply