Minority communities: ಅಲ್ಪಸಂಖ್ಯಾತರಿಗೆ ಹೊಡೀತು ಭರ್ಜರಿ ಲಾಟ್ರಿ- 1 ಲಕ್ಷ ರೂ. ಆರ್ಥಿಕ ನೆರವು ನೀಡಲು ಮುಂದಾದ ರಾಜ್ಯ ಸರ್ಕಾರ- ಈ ದಿನದಿಂದಲೇ ಜಾರಿ

politics Telangana government plans to provide financial assistance of 1 lakh to minority communities

Minority communities: ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನೇತೃತ್ವದ ತೆಲಂಗಾಣ ಸರ್ಕಾರವು(Telangana Government)ಅಲ್ಪಸಂಖ್ಯಾತ ಸಮುದಾಯಗಳಿಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲು ಚಿಂತನೆ ನಡೆಸುತ್ತಿದೆ.

ಹೌದು, ಅಲ್ಪಸಂಖ್ಯಾತಾರದ(Minority communities)ಅರ್ಹ ಕುಟುಂಬಗಳಿಗೆ ತೆಲಂಗಾಣ ಸರ್ಕಾರ 1 ಲಕ್ಷ ರೂಪಾಯಿಗಳಷ್ಟು ಆರ್ಥಿಕ ನೆರವು ನೀಡಲು ಮುಂದಾಗಿದೆ. ಸದ್ಯದಲ್ಲೇ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ(Assembly election)ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಮನವೊಲಿಕೆಗೆ ಮುಂದಾಗಿರುವ ಕೆ. ಚಂದ್ರಶೇಖರರಾವ್ ನೇತೃತ್ವದ ಆಡತಾತರೂಢ ಬಿ.ಆರ್.ಎಸ್.ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಅಂದಹಾಗೆ ಇತ್ತೀಚೆಗೆ ಹೈದರಾಬಾದ್‌(Hyderabad)ನಲ್ಲಿ ನಡೆದ ಅಲ್ಪಸಂಖ್ಯಾತ ಪ್ರತಿನಿಧಿಗಳ ಸಭೆಯಲ್ಲಿ ತೆಲಂಗಾಣ ಆರೋಗ್ಯ ಮತ್ತು ಹಣಕಾಸು ಸಚಿವ ಹರೀಶ್ ರಾವ್, ಅವರು ರಾಜ್ಯ ಸರ್ಕಾರದ ಈ ಹೊಸ ಚಿಂತನೆ ಬಗ್ಗೆ ತಿಳಿಯಪಡಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು 21 ರಿಂದ 55 ವರ್ಷ ವಯಸ್ಸಿನ ಒಂದು ಕುಟುಂಬದ ಒಬ್ಬ ವ್ಯಕ್ತಿಗೆ ಈ ಆರ್ಥಿಕ ನೆರವು ಸಿಗಲಿದೆ ಎಂದು ಹೇಳಿದ್ದರು. ಆದರೀಗ ಈ ಕುರಿತು ಸರ್ಕಾರ ಆದೇಶ ಹೊರಡಿಸಿದೆ.

ಇನ್ನು ಈ ಕುರಿತು ತೆಲಂಗಾಣ ಸರ್ಕಾರವು ಭಾನುವಾರ ಆದೇಶ ಹೊರಡಿಸಿದೆ. ಇದರ ಕುರಿತು ಪ್ರಕಟಣೆ ಹೊರಡಿಸಿರುವ ಸರ್ಕಾರವು ‘ಅಲ್ಪಸಂಖ್ಯಾತರಿಗೆ ಆರ್ಥಿಕ ಸಹಾಯವನ್ನು ವಿಸ್ತರಿಸುವ ನಿರ್ಧಾರವು ದೇಶದ ಅಲ್ಪಸಂಖ್ಯಾತ ಸಮುದಾಯಗಳ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಅನಾವರಣಗೊಳಿಸಿದೆ’ ಎಂದು ತಿಳಿಸಿದೆ.

 

ಇದನ್ನು ಓದಿ: Dakshina Kannada: ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಸಂಚಾರ, ಪದವಿ ಸೆಮಿಸ್ಟರ್ ಪರೀಕ್ಷೆ ಮುಂದೂಡದ ಹಿನ್ನಲೆ, 

Leave A Reply

Your email address will not be published.