Home News Madurai: ಮ್ಯಾರಥಾನ್ ಓಡಿದ 20ರ ಹರೆಯದ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ

Madurai: ಮ್ಯಾರಥಾನ್ ಓಡಿದ 20ರ ಹರೆಯದ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ

Madurai
image source: Istock

Hindu neighbor gifts plot of land

Hindu neighbour gifts land to Muslim journalist

Madurai: ಇಳಿವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೃದಯಾಘಾತದಿಂದಾಗುವ‌ ಸಾವಿನ ಪ್ರಕರಣಗಳು ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸುತ್ತಿದೆ. ಯುವಕರು ವ್ಯಾಯಾಮ, ನಡಿಗೆ, ಆಟವಾಡುವಾಗ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಪ್ರಕರಣಗಳು ಪದೇ ಪದೇ ಕೇಳಿಬರುತ್ತಿದೆ. ಅದರಲ್ಲಿಯೂ ಕ್ರೀಡಾ ಕ್ಷೇತ್ರದಲ್ಲಿದ್ದಿಯೂ ಸಹ ಸಂಪೂರ್ಣವಾಗಿ ದೇಹ ಫಿಟ್​ ಆಗಿದ್ದರೂ ಈ ರೀತಿ ಸಾವು ಸಂಭವಿಸುತ್ತಿರುವುದು ಆತಂಕ ಹೆಚ್ಚಿಸಿದೆ. ಇದೀಗ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡ 20 ವರ್ಷದ ವಿದ್ಯಾರ್ಥಿ ಹೃದಯಾಘಾತಕ್ಕೆ (heart attack) ಬಲಿಯಾದ ಘಟನೆ ಮಧುರೈನಲ್ಲಿ(Madurai) ನಡೆದಿದೆ.

20 ವರ್ಷದ ಎಂ ದಿನೇಶ್ ಕುಮಾರ್(M Dinesh Kumar) ಎಂಬ ವಿದ್ಯಾರ್ಥಿ ಮೃತಪಟ್ಟ ದುರ್ದೈವಿ. ತ್ಯಾಗರಾಜರ್ ಎಂಜಿನೀಯರ್ ಕಾಲೇಜಿನ ಅಂತಿಮ ವರ್ಷದ ಬಿಇ ಮೆಕಾನಿಕಲ್ ಎಂಜಿನಿಯರಿಂಗ್ ಓದುತ್ತಿದ್ದರು. 10 ಕಿಲೋಮೀಟರ್ ಓಟ ಮುಗಿಸಿದ ಬೆನ್ನಲ್ಲೇ ದಿನೇಶ್ ಕುಮಾರ್‌ ಅಸ್ವಸ್ಥಗೊಂಡು, ದಿಢೀರ್ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆ ದಾಖಲಿಸುವ ಮೊದಲೇ ವಿದ್ಯಾರ್ಥಿಯು ಸಾವನ್ನಪ್ಪಿದ್ದಾರೆ.

ಮಧುರೈ ಮೆಡಿಕಲ್ ಕಾಲೇಜು, ಫಿಟ್ನೆಸ್ ಹಾಗೂ ರಕ್ತದಾನ ಜಾಗೃತಿಗಾಗಿ ಉದಿರಂ 2023 ಮ್ಯಾರಥಾನ್ (Marathon) ಓಟವನ್ನು ಆಯೋಜಿಸಲಾಗಿತ್ತು. ಆಯೋಜಿಸಿದ ಈ ಮ್ಯಾರಾಥಾನ್ ಓಟದಲ್ಲಿ 4,500 ಮಂದಿ ಭಾಗವಹಿಸಿದ್ದರು. ಅತೀವ ಉತ್ಸಾಹದಿಂದ ಪಾಲ್ಗೊಂಡ ದಿನೇಶ್ ಕುಮಾರ್, 10 ಕಿಲೋಮೀಟರ್ ಮ್ಯಾರಥಾನ್ ಓಟ ಪೂರೈಸಿ ಕಾಲೇಜಿಗೆ ಮರಳಿದ್ದಾನೆ. ಆದರೆ ತೀವ್ರ ಅಸ್ವಸ್ಥಗೊಂಡ ಕಾರಣ ವಿಶ್ರಾಂತಿ ಕೊಠಡಿಗೆ ತೆರಳಿದ್ದಾನೆ. ಅಷ್ಟರಲ್ಲೇ ದಿನೇಶ್ ಕುಮಾರ್‌ಗೆ ತೀವ್ರ ಹೃದಯಾಘಾತ ಸಂಭವಿಸಿದ್ದು ದಿಢೀರ್ ಕುಸಿದು ಬಿದ್ದಿದ್ದಾನೆ.

ಅಲ್ಲೇ ಇದ್ದ ಇತರ ಸ್ಪರ್ಧಿಗಳು ತಕ್ಷಣವೇ ಪರಿಶೀಲಿಸಿ,‌ ಸ್ಥಳದಲ್ಲೇ ಇದ್ದ ಆಂಬುಲೆನ್ಸ್ ಮೂಲಕ‌ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು. ದಿನೇಶ್ ಕುಮಾರ್ ನ ಪ್ರಜ್ಞಾಹೀನಾ ಸ್ಥಿತಿ ಪೋಷಕರ ಆತಂಕ ಹೆಚ್ಚಿಸಿತ್ತು. ಇತ್ತ ವೈದ್ಯರು ಎಲ್ಲಾ ಪ್ರಯತ್ನ ಮಾಡಿದರೂ ದಿನೇಶ್ ಕುಮಾರ್ ಬದುಕುಳಿಯಲಿಲ್ಲ.

 

ಇದನ್ನು ಓದಿ: K-SET Exam: ರಾಜ್ಯ ಸರ್ಕಾರದ ಮಹತ್ವದ ಆದೇಶ : ಇನ್ಮುಂದೆ ‘KEA’ ಮೂಲಕ ನಡೆಯಲಿದೆ ‘K-SET’ ಪರೀಕ್ಷೆ‌ !