PTCL Act: ಪರಿಶಿಷ್ಟ ಜಾತಿ – ಪಂಗಡದ ಜಾಗ ಖರೀದಿ ಮಾಡಿದವರಿಗೆ ಕಾಡಿದೆ ಭಯ, ಬಂದೇ ಬಿಡ್ತು ಹೊಸ ಕಾಯ್ದೆ !

Latest national news PTCL Act banning transfer of SC ST land Bill passed in the assembly check

PTCL Act: ರಾಜ್ಯ ಸರ್ಕಾರವು ಕಡೆಗೂ ಪಿಟಿಸಿಎಲ್ ಕಾಯ್ದೆ(PTCL Act) ಅರ್ಥಾತ್ ಜಮೀನು ಪರಭಾರೆ ನಿಷೇಧ (ತಿದ್ದುಪಡಿ) ಮಸೂದೆಗೆ ಜುಲೈ 18 ರ ಮಂಗಳವಾರ ನಡೆದ ವಿಶೇಷ ನಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಂದಕ್ಕೆ ದೀನ ದಲಿತರಿಗೆ ಸರ್ಕಾರದಿಂದ ಮಂಜೂರಾಗಿರುವ ಭೂಮಿಯನ್ನು ಮಾರುವಂತಿಲ್ಲ ಮತ್ತು ಇಂತಹ ಭೂಮಿಯನ್ನು ಖರೀದಿಸುವುದು ಅಷ್ಟು ಸುಲಭವೂ ಅಲ್ಲ. ಅಷ್ಟೇ ಅಲ್ಲದೆ, ಈ ತನಕ ನಿಯಮ ಮೀರಿ ಮಾರಾಟ ಅಥವಾ ಪರಭಾರೆ ಆಗಿರುವ ಆಸ್ತಿ ಮತ್ತೆ ಕೊಂಡು ಕೊಂಡವರ ಕೈ ತಪ್ಪುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಆಸ್ತಿ ಕೊಂಡವರಿಗೆ ಕಾದಿದೆ ಕಷ್ಟದ ದಿನಗಳು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸರ್ಕಾರದಿಂದ ಮಂಜೂರಾಗಿರುವ ಭೂಮಿ ಅವರ ಬಳಿಯಲ್ಲಿ ಉಳಿಯುತ್ತಿಲ್ಲ. ದಮನಿತ ವರ್ಗಗಳ ಬಳಿಯಲ್ಲಿಯೇ ಭೂಮಿ ಉಳಿಯಬೇಕೆಂಬ ಉದ್ದೇಶದಿಂದ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಭೂಮಿಗಳ ಪರಭಾರೆ ನಿಷೇಧ) ಅಧಿನಿಯಮ 1978 ತಿದ್ದುಪಡಿ ತರಲಾಗಿದ್ದು ಎಲ್ಲರಿಗೂ ತಿಳಿದೇ ಇದೆ. ತೀರ ಅನಕ್ಷರಸ್ಥರೂ, ಆರ್ಥಿಕವಾಗಿ ತೀರಾ ಹಿಂದುಳಿದಿದ್ದು ದಿನದ ಕೂಲಿ ದುಡಿದು ಬದುಕುತ್ತಿರುವವರೂ, ಆದ ಜನರು ಮೇಲ್ವರ್ಗದ ಜತೆ ಸಮಾಜದಲ್ಲಿ ಗೌರವದಿಂದ ಮತ್ತು ನೆಮ್ಮದಿಯಾಗಿ ಬದುಕಲಿ ಎಂದು ಸರ್ಕಾರವು ಒಂದಷ್ಟು ಕಠಿಣ ಕಾನೂನುಗಳನ್ನು ಹೊರತಂದಿದ್ದು ಅದರಲ್ಲಿ ಈ ಪಿಟಿಸಿಎಲ್ ಕಾಯ್ದೆ ಕೂಡ ಒಂದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರ ಅಭಿವೃದ್ಧಿಗಾಗಿ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡಿ, ಅವರನ್ನು ಕೃಷಿಕರನ್ನಾಗಿಸಿ ಆ ಮೂಲಕ ಸುಗಮ ಜೀವನ ನಡೆಸಬೇಕೆಂದು ಸರ್ಕಾರದ ಉದ್ದೇಶ ಸರ್ಕಾರದ್ದು.

ಆದರೆ ಒಂದು ಬಾರಿ ಈ ರೀತಿಯ ಜಾಗಗಳು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಮಂಜೂರಾದರೂ, ಅವರು ಅದನ್ನು ತಮ್ಮ ಅಜ್ಞಾನದಿಂದ ಮತ್ತು ಬದುಕಿನ ತೀರ ಅಗತ್ಯ ಅವಶ್ಯಕತೆಗಳಿಗಾಗಿ ಮಾರಿಕೊಳ್ಳುವುದು ಕಂಡುಬಂದಿತ್ತು. ಅಲ್ಲದೆ, ಬಲವುಳ್ಳ ವರ್ಗಗಳು, ಎಷ್ಟೋ ಬಾರಿ ಬಲವಂತವಾಗಿ ಆಸ್ತಿಯನ್ನು ಹೊಡೆದುಕೊಂಡು ಬಿಟ್ಟಿದ್ದವು. ಹೀಗೆ ಪುನಃ ಭೂ ರಹಿತರಾಗಿ ಮತ್ತೊಮ್ಮೆ ಕೃಷಿ ಭೂಮಿ ಬೇಕೆಂದು ಸರ್ಕಾರವನ್ನು ಒತ್ತಾಯಿಸದಿರಲಿ ಎಂಬ ಉದ್ದೇಶದಿಂದಾಗಿ ಸರ್ಕಾರವು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) ಅಧಿನಿಯಮ, 1978 ಅನ್ನು ಜಾರಿಗೊಳಿಸಿದೆ.

ಇದರಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಿದ ಜಾಗಗಳನ್ನು ಇಂತಿಷ್ಟು ವರ್ಷಗಳ ಕಾಲ ಯಾರಿಗೂ ಮಾರಾಟ ಮಾಡಬಾರದು ಎನ್ನುವುದು ಸರ್ಕಾರದ ನಿರ್ದಿಷ್ಟ ಕಾನೂನು. ಸ್ಪಷ್ಟವಾಗಿ ಹೇಳಬೇಕೆಂದರೆ, ಈ ರೀತಿ ಸರಕಾರದಿಂದ ಪಡೆದ ಜಾಗಗಳನ್ನು ಹದಿನೈದು ವರ್ಷಗಳ ಕಾಲ ಮಾರಾಟ ಮಾಡುವಂತಿಲ್ಲ. ಆ ನಂತರ ಮಾರಾಟ ಮಾಡಲು, ನಿಯಮದ ಕಲಂ 4(2)ದಂತೆ ಜಮೀನು ಮಾರಾಟ ಮಾಡಲು ಸರ್ಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಸರ್ಕಾರದಿಂದ ಮಂಜೂರಾಗಿರುವ ಭೂಮಿಯನ್ನು ಬೇರೆ ಬೇರೆ ಕಾರಣದಿಂದ ಮಾರಾಟ ಮಾಡಲಾಗಿದೆ. ಒಂದು ಲೆಕ್ಕಾಚಾರದ ಪ್ರಕಾರ 4,00,00 ಎಕರೆಯವರೆಗೆ ಈ ರೀತಿ ಮಾರಾಟ ಆಗಿದೆ. ಸಾವಿರಾರು ಕೇಸುಗಳು ಕೋರ್ಟಲ್ಲಿ ಇವೆ. ಹೀಗಾಗಿ ಈಗ PTCL ಕಾನೂನನ್ನು ಮತ್ತಷ್ಟು ಬಲಗೊಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದ್ದು, ದೀನ ದಲಿತರ ಸಹಾಯಕ್ಕೆ ಸರ್ಕಾರ ನಿಂತಿದೆ.

ಈಗ ಪರಿಶಿಷ್ಟ ಜಾತಿ ಮತ್ತು ಪಂಗಡದ ಜಾಗಗಳನ್ನು ನಿಯಮರಿಕೊಂಡ ವ್ಯಕ್ತಿಗಳಿಗೆ ಭಯ ಶುರುವಾಗಿದೆ. ಕಾರಣ ಮೂಲ ಮಂಜೂರಾತಿದಾರ ಅಥವಾ ಅವರ ಉತ್ತರಾಧಿಕಾರಿ (ಮಕ್ಕಳು ಯಾ ಮೊಮ್ಮಕ್ಕಳು) ಸರ್ಕಾರದ ಮುಂದೆ ಅರ್ಜಿ ಹಾಕಿಕೊಂಡು ಹಕ್ಕು ಮರುಸ್ಥಾಪನೆ ಮಾಡಿಕೊಳ್ಳಲು ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಅವಕಾಶ ಕಲ್ಪಿಸಿದೆ ಈಗ ಸಚಿವ ಸಂಪುಟದಲ್ಲಿ ಇಟ್ಟ ಕಾನೂನು. ಆದುದರಿಂದ ಈ ಹಿಂದೆ ಮಾಲೀಕರು ದುಡ್ಡು ಕೊಟ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಸಿಕೊಂಡಿದ್ದರು ಅದು ಮತ್ತೆ ಕೈತಪ್ಪುವ ಸಾಧ್ಯತೆ ಇದೆ. ರಾಜ್ಯ ಕಾನೂನು ಇಲಾಖೆಯ ಅಭಿಪ್ರಾಯದೊಂದಿಗೆ ಸಿದ್ಧವಾಗಿರುವ ಈಗಿನ ಪಿಟಿಸಿಎಲ್‌ ತಿದ್ದುಪಡಿ ಕಾಯ್ದೆ ಮೊನ್ನೆ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆಯಾಗಿತ್ತು. ಅದಕ್ಕೆ ಕಾನೂನು ಇಲಾಖೆ ಒಂದೆರಡು ಸಲಹೆಯನ್ನು ನೀಡಿದ್ದರಿಂದ ಮತ್ತಷ್ಟು ಚರ್ಚೆಯೊಂದಿಗೆ ಈ ಅಧಿವೇಶನದಲ್ಲಿ ಅಂಗೀಕಾರ ಆಗಲಿದೆ.

ಇದನ್ನೂ ಓದಿ: ಬೆಟ್ಟಗಳ ಸನ್ನಿಧಿಯಿಂದ ಇಳಿದು ಬಂದ ಮಹಾ ಮಳೆ, ಕುಕ್ಕೇ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ ; ಕುಕ್ಕೆಗೆ ಹೋಗುವ ಬದಲಿ ರಸ್ತೆ ಮಾರ್ಗ ಇಲ್ಲಿದೆ !

Leave A Reply

Your email address will not be published.