Congress Guarantee Scheme : ಮತ್ತೊಂದು ಹೊಸ ‘ಗ್ಯಾರಂಟಿ’ ಜಾರಿಗೆ ಸಿದ್ಧತೆ ನಡೆಸಿದ ಸರ್ಕಾರ- ಈ ವರ್ಗದ ಜನರಿಗಂತೂ ಭರ್ಜರಿ ಲಾಟ್ರಿ

Latest Karnataka news Congress guarantee Yuva Nidhi scheme will be implemented from December says CM Siddaramaiah

Share the Article

Congress Guarantee Scheme: ಕಾಂಗ್ರೆಸ್ ಸರ್ಕಾರ(Congress Government)ತಾನು ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿಗಳನ್ನು(5 Guaranty)ಜಾರಿಗೊಳಿಸುವುದಾಗಿ ಘೋಷಿಸಿ, ಅಧಿಕಾರಕ್ಕೆ ಬಂದ ಬಳಿಕ ಇದೀಗ ನುಡದಂತೆ ನಡೆಯುತ್ತಿದೆ. ಈಗಾಗಾಲೇ 4 ಯೋಜನೆಗಳನ್ನು ಜಾರಿಗೊಳಿಸಿರುವ ಸರ್ಕಾರ ಇದೀಗ ಮತ್ತೊಂದು ಹೊಸ ಗ್ಯಾರಂಟಿ ಯೋಜನೆ(Congress Guarantee Scheme) ಜಾರಿಗೆ ಚಿಂತನೆ ನಡೆಸಿದೆ.

ಹೌದು, ಚುನಾವಣಾ ಪೂರ್ವದ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದರೆ ಶಕ್ತಿ ಯೋಜನೆ, ಗೃಹಲಕ್ಷ್ಮೀ(Gruhalakshmi), ಗೃಹಜ್ಯೋತಿ(Gruhajyoti), ಅನ್ನ ಭಾಗ್ಯ(Anna bhagya) ಯೋಜನೆ ಹಾಗೂ ವಿದ್ಯಾನಿಧಿ(Vidhyanidhi) ಯೋಜನೆಗಳನ್ನು ಜಾರಿಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿತ್ತು. ಅಂತೆಯೇ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೊದಲ 4 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ. ಇದೀಗ ಕೊನೆಯದಾಗಿ ಉಳಿದಿರುವ ಗ್ಯಾರಂಟಿಯಾದ ವಿದ್ಯಾನಿಧಿ ಯೋಜನೆ ಜಾರಿಗೆ ಸಿದ್ದರಾಮಯ್ಯ ಸರ್ಕಾರ ಚಿಂತನೆ ನಡೆಸಿದೆ.

ಯುವನಿಧಿ ಯೋಜನೆ ಎಂದರೇನು?
2022-23ನೇ ಸಾಲಿನಲ್ಲಿ ಯಾವುದೇ ವೃತ್ತಿಪರ ಕೋಸ್‌, ಪದವಿ, ಡಿಪ್ಲಮೋ ಪದವಿ ಪಡೆದವರಿಗೆ ಅನ್ವಯ. ಪದವಿ ಪಡೆದ 6 ತಿಂಗಳಲ್ಲಿ ಯಾವುದೇ ಉದ್ಯೋಗ ಸಿಗದೇ ಇದ್ದಲ್ಲಿ ಮುಂದಿನ 24 ತಿಂಗಳ ಅವಧಿಯಿಗೆ ಪದವೀಧರಿಗೆ ಮಾಸಿಕ 3000 ರು. ಮತ್ತು ಡಿಪ್ಲಮೋ ಪದವೀಧರರಿಗೆ ಮಾಸಿಕ 1500 ರು. ನಿರುದ್ಯೋಗ ಭತ್ಯೆ ನೀಡಲಾಗುವುದು.

ಡಿಸೆಂಬರ್ ನಲ್ಲಿ ಜಾರಿ:
ಅಂದಹಾಗೆ ಕಾಂಗ್ರೆಸ್ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಐದನೇ ಗ್ಯಾರಂಟಿಯಾಗಿ ‘ಯುವನಿಧಿ’ ಘೋಷಿಸಲಾಗಿತ್ತು. ಅದರಂತೆ 2022-23ರಲ್ಲಿ ಪದವೀದರರಾಗಿ ಹೊರಬಂದು ನಿರುದ್ಯೋಗಿಗಳಾದಲ್ಲಿ ಅವರಿಗೆ ಮೂರು ಸಾವಿರ ಭತ್ಯೆ, ಡಿಪ್ಲಮೋ ಪದವೀಧರರಿಗೆ ಒಂದೂವರೆ ಸಾವಿರ ರುಪಾಯಿ ಭತ್ಯೆ ನೀಡುತ್ತೇವೆ ಎಂದು ಹೇಳಿದ್ದರು. ಈ ಯೋಜನೆ ನಿರುದ್ಯೋಗಿಗಳಿಗೆ ಆಶಾದಾಯಕವಾಗಲಿದೆ. ಹೀಗಾಗಿ ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ‘ಯುವನಿಧಿ’ ಬಹುತೇಕ ಡಿಸೆಂಬರ್‌ನಿಂದ ಜಾರಿಯಾಗಲಿದೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah )ತಿಳಿಸಿದ್ದಾರೆ.

ಇದನ್ನೂ ಓದಿ: Benglore: ಯುವತಿಯನ್ನು ಕೂರಿಸಿಕೊಂಡು, ಬೈಕ್ ಓಡಿಸುತ್ತಲೇ ಹಸ್ತಮೈಥುನ ಮಾಡಿಕೊಂಡ ರ‍್ಯಾಪಿಡೋ ಚಾಲಕ! ಪೋಸ್ಟ್ ವೈರಲ್

Leave A Reply