Homeopathy: 50 ಸಾವಿರ ಹೂಡಿಕೆಯಿಂದ ಬರೋಬ್ಬರಿ 11,400 ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ ಹೋಮಿಯೋಪತಿ ವೈದ್ಯ !
latest news Homeopathy doctor built an empire of 11,400 crores from investment of 50 thousand
Homeopathy: ಬನ್ನಿ, ಜೆ. ರಾಮೇಶ್ವರ್ ರಾವ್ ಎಂಬ ಈ ಹೋಮಿಯೋಪತಿ(Homeopathy ) ವೈದ್ಯರನ್ನು ಒಂದು ಬಾರಿ ಭೇಟಿಯಾಗಿ ಬರೋಣ. ಅವರು ಬದುಕಿನಲ್ಲಿ ಆಯ್ಕೆ ಮಾಡಿಕೊಂಡ ವೃತ್ತಿ ಹೋಮಿಯೋಪತಿ ವೈದ್ಯರಾಗೋದು. ಬದುಕಿನಲ್ಲಿ ತುಂಬಾ ಕೆಳ ಮಧ್ಯಮ ವರ್ಗದಿಂದ ಬಂದು ಹೋಮಿಯೋಪತಿ ವೈದ್ಯ ವೃತ್ತಿಯನ್ನು ಪಡೆದು ಬದುಕನ್ನು ಸೆಟಲ್ ಮಾಡಿಕೊಂಡು ಬಿಡೋಣ ಎಂದು ಹೈದರಾಬಾದಿನ ಒಂದು ಪುಟ್ಟ ಮೂಲೆಯಿಂದ ಬಂದ ಈ ರಾಮೇಶ್ವರರ ಎಂಬ ಹುಡುಗ ಇವತ್ತು ಇಂದು ಬೃಹತ್ ವ್ಯಾಪಾರ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ಹೋಮಿಯೋಪತಿ ವೈದ್ಯರಾಗಿ ಬದುಕು ನಿರ್ವಹಿಸಲು ಬೇಕಾದಷ್ಟು ಆದಾಯ ಬಂದರೆ ಸಾಕು ಎನ್ನುವ ಮನಸ್ಥಿತಿಯ ಈ ಹುಡುಗ ಇವತ್ತು 11,400 ಕೋಟಿ ($ 1.4 ಬಿಲಿಯನ್) ನಿವ್ವಳ ಮೌಲ್ಯ ಹೊಂದಿರುವ ಕುಬೇರ.
ಓರ್ವ ಪುಟ್ಟ ರೈತನ ಮಗನಾಗಿ ವೃತ್ತಿ ಜೀವನ ಕೈಗೊಂಡ ಅವರು ಕಳೆದ ವರ್ಷ ಬಿಲಿಯನೇರ್ ಕ್ಲಬ್‌ಗೆ ಪ್ರವೇಶಿಸಿದ ಸಾಧನೆ ಅಗಾಧವಾದುದು. ಕೇವಲ 50,000 ರೂಪಾಯಿಗಳ ಬಂಡವಾಳದಿಂದ – ಬಂದರೆ ಬಂತು, ಹೋದರೆ ಹೋಯಿತು- ಎನ್ನುವ ಮನಸ್ಥಿತಿಯಲ್ಲಿ ಶುರು ಮಾಡಿದ ವ್ಯಾಪಾರ ಮೊದಲ ಪ್ರಯತ್ನದಲ್ಲಿಯೇ ಕುದುರಿಕೊಂಡಿತ್ತು.
ಯಾವುದೇ ಸವಲತ್ತುಗಳಿಲ್ಲದ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಜೂಪಲ್ಲಿ ರಾಮೇಶ್ವರ್ ರಾವ್ ಅವರು ಮೂಲಭೂತ ಶಿಕ್ಷಣವನ್ನು ಪಡೆಯಲು ಕಿಲೋಮೀಟರ್ ಗಟ್ಟಲೆ ನಡೆದು ಕೊಂಡು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಇಂತಹ ಸನ್ನಿವೇಶದಲ್ಲಿ ಕನಸು ಕಾಣುವುದು ಬಿಡಿ, ಕನಸು ಅನ್ನುವಂತಹ ಒಂದು ಇದೆ ಅನ್ನೋದೇ ತಿಳಿಯದ ಪರಿಸ್ಥಿತಿಯಲ್ಲಿ ಹುಡುಗ ಬೆಳೆಯುತ್ತಾನೆ. ಆದರೂ ಅದ್ಯಾಕೋ ಹುಡುಗನಿಗೆ ಚಿಕ್ಕಂದಿನಿಂದಲೇ ನಾನು ಹೋಮಿಯೋಪತಿ ಡಾಕ್ಟರ್ ಆಗಬೇಕೆಂಬ ಪುಟಾಣಿ ಕನಸು ಬಿದ್ದಿತ್ತು. ತನ್ನ ಇಷ್ಟದ ತನ್ನ ಇಷ್ಟದಂತೆ ಆತ ಆರಿಸಿಕೊಂಡ ವೃತ್ತಿ ಹೋಮಿಯೋಪತಿ ವೈದ್ಯರದ್ದು. ಆದರೆ ಯಾವತ್ತಿಗೂ ಅವರಿಗೆ ದುಡ್ಡು ಮಾಡಬೇಕು ಒಳ್ಳೆಯ ಬಿಸಿನೆಸ್ ಆಗಬೇಕು ಎನ್ನುವ ಆಸೆಯೇ ಇರಲಿಲ್ಲ. ಹಾಗೆ ರಾವ್ ಎಂಬ ಈ ಹುಡುಗ 1974 ರಲ್ಲಿ ಹೈದರಾಬಾದಿನ ಪಕ್ಕದ ಮಹಬೂಬ್‌ನಗರ ಜಿಲ್ಲೆಯ ತಮ್ಮ ಹಳ್ಳಿಯಿಂದ ಹೈದರಾಬಾದ್‌ಗೆ ಆಗಮಿಸುತ್ತಾರೆ. ಆಗಿನ್ನು ಆತ ಯುವಕ.
ಅಷ್ಟರಲ್ಲಿ ಜೀವನದ ದೊಡ್ಡ ತಿರುವುಗಳು ಮತ್ತು ಅನಿರೀಕ್ಷಿತ ಅವಕಾಶವು ಒದಗಿ ಬಂದಿತ್ತು. ಮೊತ್ತಮೊದಲಿಗೆ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕನಾಗಿ ಪ್ರಾರಂಭವಾಯಿತು. ಇದು ಅವರಿಗೆ ಆ ಅಜ್ಞಾತ ನಗರದಲ್ಲಿ ಒಂದಷ್ಟು ಜನರ ಪರಿಚಯ ಮತ್ತು ನೆಟ್‌ವರ್ಕ್ ನಿರ್ಮಿಸಲು ಸಹಾಯ ಮಾಡಿತು. ರಾವ್ ಅವರು ಅಂದಿನ ಹೈದರಾಬಾದಿನ ಒಂದು ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶವಾದ ದಿಲ್‌ಸುಖ್‌ನಗರ ಪ್ರದೇಶದಲ್ಲಿ ಬಂದು ನೆಲೆಸುತ್ತಾರೆ. ಅಲ್ಲಿ ತಮ್ಮ ಹೋಮಿಯೋಪತಿ ಕ್ಲಿನಿಕ್ ಅನ್ನು ಸ್ಥಾಪಿಸಿ ಅಭ್ಯಾಸವನ್ನು ಪ್ರಾರಂಭಿಸಿದರು. ತನ್ನ ಕನಸು ಈಡೇರಿದ ಖುಷಿಯಲ್ಲಿದ್ದರು ಜೆ. ನಾಗೇಶ್ವರ ರಾವ್. ಅಂತಹ ಒಂದು ದಿನ ಸಂಜೆ ಒಬ್ಬರು ಗೆಳೆಯರು ಬಂದು, ” ರಾವುಗಾರು ರಿಯಲ್ ಎಸ್ಟೇಟ್ ಚೇಸ್ತಾರಾ, ಚಾಲ ಲಾಭo ಉಂದಿ ” ಅನ್ನುತ್ತಾರೆ. ಅದ್ಯಾಕೋ ಅಂದು ಸಡನ್ನಾಗಿ, ಅಂಗಡಿಯ ಮುಂದೆ ನೇತು ಹಾಕಿದ್ದ ಲಾಟರಿ ಕೊಳ್ಳುವ ಮನಸ್ಸಾಗುವಂತೆ ನಾಗೇಶ್ವರ ರಾವ್ ಅವರಿಗೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ಹೂಡಬೇಕೆಂದು ಅನ್ನಿಸಿದೆ. ಹಾಗಾಗಿ ಬರೋಬ್ಬರಿ ಆ ಕಾಲಕ್ಕೆ ರೂ.50,000ಗಳನ್ನು ಅವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿ ಒಂದು ಸಣ್ಣ ಜಾಗ ಕೊಂಡಿದ್ದಾರೆ.
ಹಾಗೆ ಅಂದು ಜಮೀನಿನ ಮೇಲೆ 50,000 ರೂಪಾಯಿ ಹೂಡಿಕೆ ಮಾಡಿದ ರಾವ್ ಅವರು ಅವರು ಅಂದು ತೆಗೆದುಕೊಂಡು ನಿರ್ಧಾರ ಆತನ ಬದುಕಿನ ದಿಕ್ಕನ್ನೇ ಬದಲಿಸಿದೆ. ಅವತ್ತಿನ ಆ ಹೂಡಿಕೆ ಕೇವಲ 3 ವರ್ಷಗಳಲ್ಲಿ ಅವರು ತಮ್ಮ ಹೂಡಿಕೆಯ ಮೂರು ಪಟ್ಟು ಲಾಭವನ್ನು ತಂದು ಕೊಟ್ಟಿದೆ. ಇಷ್ಟು ಸಣ್ಣ ಸಮಯದಲ್ಲಿ ಮೂರು ಪಟ್ಟು ಲಾಭವನ್ನು ಕಂಡ ನಾಗೇಶ್ವರ್ ರಾವ್ ಖುಷಿಯಾಗಿ ಬಿಡುತ್ತಾರೆ. ಅವರಿಗೆ ದುಡ್ಡನ್ನು ದ್ವಿಗುಣಗೊಳಿಸುವ ಹೊಸ ಸಾಕ್ಷಾತ್ಕಾರ ಆದಂತೆ ಆಗುತ್ತದೆ. ಅಂದು ರಾವ್ ಅವರು ತಮ್ಮ ಹೋಮಿಯೋಪತಿ ಅಭ್ಯಾಸವನ್ನು ನಿಲ್ಲಿಸಿ ರಿಯಲ್ ಎಸ್ಟೇಟ್‌ಗೆ ಧುಮುಕುತ್ತಾರೆ. 1981ರಲ್ಲಿ, ಅವರು ತಮ್ಮ ಮೊದಲ ಕಂಪನಿ ಮೈ ಹೋಮ್ ಕನ್ಸ್ಟ್ರಕ್ಷನ್ಸ್ ಅನ್ನು ಪ್ರಾರಂಭಿಸುತ್ತಾರೆ. ಆನಂತರ ಅವರು ತಿರುಗಿ ನೋಡಿದ್ದೇ ಇಲ್ಲ, ಆತ ಕೈ ಹಾಕಿದ್ದೆಲ್ಲ ಚಿನ್ನವಾಗಿ ಬದಲಾಗುತ್ತಾ ಹೋಗುತ್ತದೆ.
ಒಂದು ಕಾಲದಲ್ಲಿ ಹೆಚ್ಚು ಕಮ್ಮಿ ಅನಾಥನಂತೆ ಬಂದು ಬಾಡಿಗೆ ಮನೆಯಲ್ಲಿ ಸಣ್ಣದಾಗೆ ಬದುಕು ಶುರುವಿಟ್ಟಿದ ಹುಡುಗ ಮುಂದಿನ ದಶಕಗಳಲ್ಲಿ, ಹೈದರಾಬಾದ್ ಎಂಬ ಬೃಹತ್ ಶ್ರೀಮಂತ ನಗರದ ಶ್ರೀಮಂತ ವ್ಯಕ್ತಿಗಳೊಂದಿಗೆ ಭುಜಕ್ಕೆ ಭುಜ ಕೊಟ್ಟು ನಿಲ್ಲುವಂತೆ ಬೆಳೆದದ್ದು ಮಾತ್ರ ಪವಾಡವೇ ಸರಿ. ಒಂದೊಂದು ಮನೆ ಕಟ್ಟಿ ಕೊಡುವ ಯೋಜನೆಯಿಂದ ಹಿಡಿದು ವಸತಿ ಸಂಘಗಳು ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವುದರ ಜತೆಗೆ ವಿಸ್ತಾರಗೊಂಡಿತು ರಾವ್ ಅವರ ಸಾಮ್ರಾಜ್ಯ. ಆನಂತರ ರಾವ್ ಸಿಮೆಂಟ್ ತಯಾರಿಕೆಗೆ ವಿಸ್ತರಿಸಿದರು. ಇದೀಗ ಅವರ ಸಂಸ್ಥೆಯಾದ ಮಹಾ ಸಿಮೆಂಟ್ 4,000 ಕೋಟಿ ವಾರ್ಷಿಕ ವಹಿವಾಟು ಹೊಂದಿರುವ ದಕ್ಷಿಣ ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಇದೀಗ ರಾವ್ ಅವರು ತಮ್ಮ ನಾಲ್ವರು ಪುತ್ರರು ಮತ್ತು ನಾಲ್ಕು ಸೊಸೆಯರ ಸಹಾಯದಿಂದ ಬೃಹತ್ ಸಾಮ್ರಾಜ್ಯವನ್ನು ನಡೆಸುತ್ತಿದ್ದಾರೆ. ಅವರ ಈಗಿನ ಸಂಪತ್ತು ಬರೋಬ್ಬರಿ 11,400 ಕೋಟಿ ನಿವ್ವಳ ಮೌಲ್ಯದೊಂದಿಗೆ ದಿನೇ ದಿನೇ ವಿಸ್ತರಗೊಳ್ಳುತ್ತಲೇ ಇದೆ.
ಇದನ್ನು ಓದಿ: Ration card update: ಬಿಪಿಎಲ್ ಕಾರ್ಡ್ ಬಗ್ಗೆ ಬೊಂಬಾಟ್ ಸುದ್ದಿ: ಹೊಸ ಪಡಿತರ ಚೀಟಿ ನೀಡಿಕೆ ಯಾವಾಗ ಗೊತ್ತಾ ?