Sakhi bhagya Scheme: ‘ಗೃಹಲಕ್ಷ್ಮೀ’ ಬೆನ್ನಲ್ಲೇ ಮಹಿಳೆಯರಿಗೆ ಹೊಡಿತು ಬಂಪರ್ ಲಾಟ್ರಿ !! 2,000 ಜೊತೆ ಉಚಿತವಾಗಿ ಸಿಗಲಿದೆ 4,000- ಸರ್ಕಾರದಿಂದ ಮತ್ತೊಂದು ಯೋಜನೆಯ ಘೋಷಣೆ!!

latest news Griha Lakshmi scheme along with the new Sakhi Bhagya scheme for womens

Sakhi bhagya Scheme: ಪುರುಷರಂತೆ ಎಲ್ಲ ರಂಗದಲ್ಲೂ ಸಮಾನವಾಗಿ ಮುಂದಿರಲು ಬಯಸುವ ಮಹಿಳೆಯರಿಗೆ ಕರ್ನಾಟಕ ರಾಜ್ಯ(Karnataka Government)ಸರ್ಕಾರ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮೀ ಯೋಜನೆ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡಿದೆ.

ಹೌದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಾದ್ದು, ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದೆ. ರಾಜ್ಯದಲ್ಲೂ ಭಾಗ್ಯ ಲಕ್ಷ್ಮೀ, ಗೃಹಲಕ್ಷ್ಮೀ(Gruha lakshmi) ಹಾಗೂ ಶಕ್ತಿ ಯೋಜನೆ(Shakthi yojane)ಯಂತಹ ಯೋಜನೆಗಳು ಜಾರಿಯಾಗಿ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿವೆ. ಈ ಬೆನ್ನಲ್ಲೇ ಸರ್ಕಾರವು 2022ರಲ್ಲಿ ಜಾರಿಗೆ ತಂದಿದ್ದ ಯೋಜನೆಗೂ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಹೌದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ‘ಸಖಿ ಭಾಗ್ಯ'(Sakhi bhagya) ಯೋಜನೆ ಜಾರಿಗೆ ತಂದಿದ್ದು, ಮತ್ತೆ ಈ ಯೋಜನೆಗೆ ಶಕ್ತಿ ತುಂಬಲು ಮುಂದಾಗಿದೆ.

ಏನು ಈ ಸಖೀ ಯೋಜನೆ?
ವಿವಿಧ ಉದ್ಯೋಗ ಅವಕಾಶಗಳನ್ನು ಗ್ರಾಮೀಣ ಮಹಿಳೆಯರಿಗೂ ಒದಗಿಸುವ ಮಹತ್ತರ ಉದ್ದೇಶದಿಂದ ರಾಜ್ಯ ಸರ್ಕಾರ ಈ ‘ಸಖಿ ಭಾಗ್ಯ’ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಪಂಚಾಯಿ ವ್ಯಾಪ್ತಿಯಲ್ಲಿ ಒಟ್ಟು 30 ಸಾವಿರ ಮಹಿಳೆಯರಿಗೆ ಉದ್ಯೋಗ ಲಭ್ಯವಾಗಲಿವೆ. ಹಳ್ಳಿ ಪ್ರದೇಶಗಳಲ್ಲಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಈ ಯೋಜನೆ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ.

ಇದರ ಪ್ರಯೋಜನ ಏನು?
ಸಖಿ ಯೋಜನೆಯಡಿ ಗ್ರಾಮೀಣ ಮಹಿಳೆಯರಿಗೆ ಸಂಪಾದನೆಗಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಈ ಯೋಜನೆಯಡಿ ಮಹಿಳೆಯರಿಗೆ ಸರಕಾರದಿಂದ ತಿಂಗಳಿಗೆ 4 ಸಾವಿರ ರೂ ಸಿಗಲಿದೆ. ಇದಲ್ಲದೇ ಬ್ಯಾಂಕ್ ವಹಿವಾಟಿನಲ್ಲೂ ಮಹಿಳೆಯರಿಗೆ ಕಮಿಷನ್ ಸಿಗಲಿದೆ. ಇದರಿಂದಾಗಿ ಅವರ ಆದಾಯವನ್ನು ಪ್ರತಿ ತಿಂಗಳು ನಿಗದಿಪಡಿಸಲಾಗುತ್ತದೆ. ಗ್ರಾಮೀಣ ಜನರ ಜೀವನೋಪಾಯ ಅಭಿವೃದ್ಧಿ ಹಾಗೂ ಮಹಿಳೆಯರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಯೋಜನೆ ಜಾರಿಗೆ ನಿರ್ಧರಿಸಿದೆ.

ಎಷ್ಟು ಮಹಿಳೆಯರಿಗೆ ಉದ್ಯೋಗ ?
ಈ ಯೋಜನೆ ಅಡಿಯಲ್ಲಿ, ಸುಮಾರು 58000 ಮಹಿಳೆಯರಿಗೆ ಉದ್ಯೋಗ ನೀಡಲು ಸರ್ಕಾರ ಹೇಳಿದೆ. ಅಂದರೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಥವಾ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಸುಮಾರು 58000 ಮಹಿಳೆಯರಿಗೆ ಸರ್ಕಾರವು BC ಸಖಿ ಮಾಡುತ್ತದೆ. ಇದರೊಂದಿಗೆ ಸರ್ಕಾರವೂ ಈ ಯೋಜನೆಯಡಿ ಈ ಮಹಿಳೆಯರಿಗೆ ಸುಮಾರು 6 ತಿಂಗಳ ಕಾಲ ಕೆಲಸ ನೀಡಲಿದ್ದು, ಇದಕ್ಕಾಗಿ ತಿಂಗಳಿಗೆ ₹ 4,000 ವೇತನ ನೀಡಲಿದೆ.

ಎಷ್ಟು ಸಂಬಳ ಸಿಗುತ್ತದೆ?
• ಸಖಿ ಯೋಜನೆ ಅಡಿಯಲ್ಲಿ ನೀಡಲಾಗುವ ಸಂಬಳ
ಬಿಸಿ ಸಖಿ ಯೋಜನೆಯಡಿ ತಿಂಗಳಿಗೆ ₹ 4000 ಮೊದಲ 6 ತಿಂಗಳು ನೀಡಲಾಗುತ್ತದೆ.
• ಬ್ಯಾಂಕಿಂಗ್ ಸಾಧನ ಖರೀದಿಸಲು ₹ 50000 ಪ್ರತ್ಯೇಕವಾಗಿ ನೀಡಲಾಗುವುದು
• ಇದಲ್ಲದೇ ಬ್ಯಾಂಕಿಂಗ್ ಕೆಲಸಗಳಿಗೂ ಕಮಿಷನ್ ನೀಡಲಾಗುವುದು.
• 6 ತಿಂಗಳು ಪೂರ್ಣಗೊಂಡ ನಂತರ ಆ ಆಯೋಗದ ಮೂಲಕ ಗಳಿಕೆಯನ್ನು ಮಾಡಲಾಗುತ್ತದೆ.

‘ಸಖಿ ಯೋಜನೆ’ಯಡಿ ತರಬೇತಿ:
ಈ ನೂತನ ‘ಸಖಿ ಯೋಜನೆ’ಯ ಅಂಗವಾಗಿ ಕೃಷಿ ಸಖಿ, ಹೈನುಗಾರಿಕೆ ಸಖಿ, ವನ ಸಖಿ, ಬ್ಯಾಂಕ್ ವಹಿವಾಟು ಸಖಿ, ಡಿಜಿಟಲ್ ಪಾವತಿ ಸಖಿ ರೂಪದಲ್ಲಿ ಮಹಿಳೆಯರಿಗೆ ಉದ್ಯೋಗಗಳ ಕುರಿತು ಸೂಕ್ತ ತರಬೇತಿ ನೀಡಲಾಗುವುದು. ತರಬೇತಿ ಮೂಲಕ ಕೌಶಲ್ಯ ಪಡೆಯುವ ಮಹಿಳೆಯರು ಉದ್ಯೋಗ ಪಡೆದು ಅಭಿವೃದ್ಧಿ ಕಾಣುತ್ತಿರುವ ಹಳ್ಳಿ ಪ್ರದೇಶಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಲಿದ್ದಾರೆ. ಮಹಿಳೆಯರು ನೆಮ್ಮದಿಯ ಸ್ವಾವಲಂಬಿ ಜೀವನ ನಡೆಸಲು ಯೋಜನೆ ಅನುಕೂಲವಾಗಲಿದೆ.

 

ಇದನ್ನು ಓದಿ: Ration card update: ಬಿಪಿಎಲ್ ಕಾರ್ಡ್ ಬಗ್ಗೆ ಬೊಂಬಾಟ್ ಸುದ್ದಿ: ಹೊಸ ಪಡಿತರ ಚೀಟಿ ನೀಡಿಕೆ ಯಾವಾಗ ಗೊತ್ತಾ ? 

Leave A Reply

Your email address will not be published.