Bizarre Rule: ಇಲ್ಲಿ ಗೋವುಗಳು ರಸ್ತೆಗೆ ಇಳಿದ್ರೆ ಮಾಲೀಕನಿಗೆ ಬೀಳುತ್ತೆ 5 ಸಲ ಕಪಾಳಮೋಕ್ಷ, ಈ ವಿಚಿತ್ರ ನಿಯಮ ಇರೋ ಗ್ರಾಮ ಎಲ್ಲಿದೆ ?

Latest news Bizarre Rule If cows enter the road slap the owner 5 times

Bizzare rule: ಹಿಂದೂ ಧರ್ಮದಲ್ಲಿ ಗೋವುಗಳನ್ನು, ವಿಶೇಷವಾಗಿ ಪೂಜಿಸುತ್ತಾರೆ. ಹಸುವನ್ನು ದೈವಿಕ ಅಂಶವೆಂದು ಪರಿಗಣಿಸಲಾಗುತ್ತದೆ, ಪೂರ್ವಜರ ಕಾಲದಿಂದಲೂ ಆಚರಣೆಗಳಲ್ಲಿ, ಹಬ್ಬಗಳಲ್ಲಿ ಗೋವುಗಳಿಗೆ ವಿಶೇಷ ಸ್ಥಾನ-ಮಾನವನ್ನು ನೀಡಲಾಗಿದೆ. ಆದರೆ ಇಲ್ಲೊಂದು ಕಡೆ ಗೋವುಗಳೇನಾದರೂ ರಸ್ತೆಗೆ ಇಳಿದ್ರೆ ಮಾಲೀಕನಿಗೆ 5 ಸಲ ಕಪಾಳಮೋಕ್ಷ ಮಾಡುವ ವಿಚಿತ್ರ ನಿಯಮವಿದೆಯಂತೆ (Bizzare rule)!!!

ಹೌದು, ಜಾನುವಾರುಗಳು ಅಲೆದಾಡಿದರೆ ಮಾಲೀಕರಿಗೆ ಐದು ಬಾರಿ ಕಪಾಳಮೋಕ್ಷ ಮಾಡಬೇಕು ಎಂದು ಅಲ್ಲಿನ ಮಧ್ಯೆ ಪ್ರದೇಶದ ಗ್ರಾಮದ ಮುಖಂಡರು ನಿರ್ಧರಿಸಿದ್ದಾರೆ. ಜಾನುವಾರುಗಳ ಓಡಾಟಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಈ ನಿರ್ಧಾರ ತೀವ್ರ ಚರ್ಚೆಗೆ ಕಾರಣವಾಗಿದೆ.

ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ನಾಗನಡುಯ್ಯ ಎಂಬ ಪುಟ್ಟ ಗ್ರಾಮವಿದೆ. ಈ ಗ್ರಾಮದಲ್ಲಿ ಜಾನುವಾರುಗಳು ರಸ್ತೆಗೆ ಬರದಂತೆ ಗ್ರಾ.ಪಂ.ಸರಪಂಚ್ ಹೊರಡಿಸಿರುವ ಆದೇಶದಿಂದಾಗಿ ಜಾನುವಾರುಗಳ ಮಾಲೀಕರು ಭಯದಿಂದ ಓಡಾಡುವಂತಾಗಿದೆ. ಜಾನುವಾರುಗಳು ಅಲೆದಾಡಿದರೆ ಮಾಲೀಕರಿಗೆ ಐದು ಬಾರಿ ಕಪಾಳಮೋಕ್ಷ ಮಾಡಬೇಕು ಎಂದು ಅಲ್ಲಿನ ಮಧ್ಯೆ ಪ್ರದೇಶದ ಗ್ರಾಮದ ಮುಖಂಡರು ನಿರ್ಧರಿಸಿದ್ದಾರೆ.ಅಷ್ಟೇ ಅಲ್ಲ, 500 ರೂಪಾಯಿ ದಂಡ ಕಟ್ಟಬೇಕು ಎಂದು ಆದೇಶಿಸಿದ್ದಾರೆ.

ಈ ನಿರ್ಧಾರ ಕುರಿತು ಸರಪಂಚ ಕಚೇರಿಯ ಅಧಿಕಾರಿಗಳು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಗ್ರಾಮಸ್ಥರಿಗೆ ಡಂಗೂರ ಸಾರಿ ಹೊಸ ನಿಯಮಗಳನ್ನು ತಿಳಿಸಲಾಗಿದೆ. ಇದೀಗ ಈ ನಿರ್ಧಾರ ಕುರಿತು ಗ್ರಾಮಸ್ಥರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ನಿಬಂಧನೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಗ್ರಾಮದ ಸರಪಂಚರ ತೀರ್ಮಾನವನ್ನು ಹಿಂಪಡೆಯಲು ಸೂಚಿಸುವಂತೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಅವರಿಗೆ ದೂರು ನೀಡಲಾಗಿದೆ.

 

ಇದನ್ನು ಓದಿ: Unluckiest Man: ಜಗತ್ತಿನ ಅತಿ ಬ್ಯಾಡ್ ಲಕ್’ನ ವ್ಯಕ್ತಿ ಈತ; 2,90,000 ಕೋಟಿ ಡಾಲರ್ ಶೇರನ್ನು ಕೇವಲ 800 ಡಾಲರ್’ಗೆ ಮಾರಾಟ ಮಾಡಿದ್ದ ! 

Leave A Reply

Your email address will not be published.