Manipur Violence: ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ : ದೌರ್ಜನ್ಯಕ್ಕೆ ಒಳಗಾದ ಮಹಿಳೆ ಹೇಳಿದ್ದೇನು ?!

Latest news Manipur Violence What did the victim of the women's naked procession say

Manipur Violence: ಹಿಂಸಾಚಾರ ಪೀಡಿತ ಮಣಿಪುರದಲ್ಲಿ (Manipur) ಕುಕಿ-ಜೋಮಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಪುರುಷರ ನೇತೃತ್ವದ ಜನಸಮೂಹವು ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಲ್ಲದೆ ಅತ್ಯಾಚಾರ ಮಾಡಿರುವ ಘಟನೆ (Manipur Violence) ಮೇ 4 ರಂದು ನಡೆದಿದೆ. ಘಟನೆ ಎರಡು ತಿಂಗಳ‌ ಬಳಿಕ ವೈರಲ್ ಆಗಿ ಜನರು ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ. ಆರೋಪಿಗಳನ್ನು ಗಲ್ಲಿಗೇರಿಸಿ ಎಂಬ ಆಗ್ರಹ ಕೇಳಿಬರುತ್ತಿವೆ.

 

ದೌರ್ಜನ್ಯಕ್ಕೀಡಾದ ಇಬ್ಬರಲ್ಲಿ ಒಬ್ಬ ಮಹಿಳೆಯು ಘಟನೆ (Manipur Video) ಬಗ್ಗೆ ಹೇಳಿಕೊಂಡಿದ್ದಾರೆ. ಈಕೆ ನಿರಾಶ್ರಿತರ ಶಿಬಿರದಲ್ಲದ್ದು, ಅವರ ಮೇಲಾದ ದೌರ್ಜನ್ಯ ಹಾಗೂ ಮೂಕಪ್ರೇಕ್ಷಕರಾಗಿ ನಿಂತಿದ್ದ ಜನರ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ. ಈಕೆ 40 ವರ್ಷದ ಮಹಿಳೆ ಹಾಗೂ 4 ಮಕ್ಕಳ ತಾಯಿ. ಹಲ್ಲೆ ನಡೆದಾಗ ಎಷ್ಟೇ ಬೇಡಿಕೊಂಡರೂ ಅವರೂ ಕರುಣೆ ತೋರಲಿಲ್ಲ ಎಂದು ಹೇಳಿದ್ದಾರೆ.

“ಮೇ 4ರಂದು ನಡೆದ ಘಟನೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ನೂರಾರು ಜನರ ಗುಂಪು ನಮ್ಮ ಮೇಲೆ ದಾಳಿ ನಡೆಸಿತು. ನಮ್ಮನ್ನು ಮನೆಯಿಂದ ಹೊರಗೆ ಎಳೆದೊಯ್ದು ಮೈಮೇಲಿನ ಬಟ್ಟೆ ಹರಿದು ಕಿತ್ತು ಹಾಕಿದರು. ನಾನು ನಾಲ್ಕು ಮಕ್ಕಳ ತಾಯಿ, ನಿಮ್ಮ ತಾಯಿಗೆ ಸಮ ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚಿ ಬೇಡಿದರೂ ಬಿಡಲಿಲ್ಲ. ಕರುಣೆಯೇ ತೋರಲಿಲ್ಲ. ಅಲ್ಲದೆ, ನಮಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ಸುಟ್ಟು ಹಾಕಿದರು. ಗಂಡು ಮಕ್ಕಳ ಮೇಲೆ ಹಲ್ಲೆ ನಡೆಸಿದರು” ಎಂದು 40 ವರ್ಷದ ಸಂತ್ರಸ್ತ ಮಹಿಳೆ‌ ಹೇಳಿದರು.

ಹುಕಿ ಸಮುದಾಯದವರು ವಾಸವಿರುವ ಗ್ರಾಮಗಳಿಗೆ ಮೃತ್ಯ ಸಮುದಾಯದವರು ಬೆಂಕಿ ಹಚ್ಚಿದ್ದಾರೆ. ಹಸು, ಹಂದಿ ಹಾಗೂ ಮೇಕೆಗಳನ್ನು ಲೂಟಿ ಮಾಡಿದ್ದಾರೆ. ಇಷ್ಟೇ ಅಲ್ಲ, ಇಬ್ಬರು ಮಹಿಳೆಯರ ಮೇಲೆ ದೌರ್ಜನ್ಯವಾಗುತ್ತಿದ್ದಾಗ, ನೀಚ ಪುರುಷರು ಇಬ್ಬರು ಮಹಿಳೆಯರನ್ನು ಬಟ್ಟೆ ಬಿಚ್ಚಿಸಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸುವಾಗ ಇಬ್ಬರು ಪೊಲೀಸರು ಪಕ್ಕದಲ್ಲೇ ಇದ್ದರು. ನೀಚರು ಎರಡು ಗಂಟೆ ನಮ್ಮ ಮೇಲೆ ದೌರ್ಜನ್ಯ ಎಸಗಿದರು. ಆದರೆ, ರಕ್ಷಣೆ ನೀಡುವ ಪೊಲೀಸರು ಇದ್ದೂ ಕೂಡ ಯಾವುದೇ ಪ್ರಯೋಜನ ಆಗಲಿಲ್ಲ. ಅವರು ನಮ್ಮನ್ನು ರಕ್ಷಿಸಲಿಲ್ಲ. ಯಾರೋ ಒಂದಿಬ್ಬರು ತಮ್ಮ ಟೀ-ಶರ್ಟ್ ಕೊಟ್ಟರು. ಅವುಗಳಿಂದಲೇ ಮಾನ ಮುಚ್ಚಿಕೊಂಡು ಕಾಡಿನೊಳಗೆ ಓಡಿ ಹೋದೆವು, ಇಲ್ಲದಿದ್ದರೆ ನಮ್ಮನ್ನು ಕೊಲೆ ಮಾಡುತ್ತಿದ್ದರು ಎಂದು ಮಹಿಳೆ ತಮಗಾದ ಅನ್ಯಾಯವನ್ನು ಹೇಳಿಕೊಂಡರು. ಮೇ 4ರಂದೇ ಈ ಅಮಾನುಷ ಕೃತ್ಯ ನಡೆದಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವ ಕುರಿತು ಭಾರೀ ಆಕ್ರೋಶ ವ್ಯಕ್ತವಾಗಿದೆ.

 

ಇದನ್ನು ಓದಿ: Marriage: ಪತಿ ಜತೆ ಮಾವನನ್ನೂ ಮದುವೆಯಾದ ಮಹಿಳೆ ; ಕಾರಣ ವಿಚಿತ್ರ ! 

Leave A Reply

Your email address will not be published.