Gruha jyothi: ‘ಗೃಹಜ್ಯೋತಿ’ಗೆ ಅರ್ಜಿ ಹಾಕಿದ್ರೂ ಇಂತವರಿಗೆ ಮುಂದಿನ ತಿಂಗಳು ಬಿಲ್ ಬರೋದು ಪಕ್ಕಾ !! ಕೊನೇ ಕ್ಷಣದಲ್ಲಿ ಸರ್ಕಾರದ ಹೊಸ ನಿರ್ಧಾರ!!
Gruha jyothi :ಕಾಂಗ್ರೆಸ್ ರಾಜ್ಯ ಸರ್ಕಾರ(State Government)ತನ್ನ ಗ್ಯಾರಂಟಿಗಳ ಅನುಷ್ಠಾನಕ್ಕೆ ಎಡೆಬಿಡದೆ ಶ್ರಮಿಸುತ್ತಿದೆ. ತಾನು ಚುನಾವಣಾ ಪೂರ್ವದಲ್ಲಿ ಯಾವುದೇ ನಿಯಮಗಳನ್ನು ಹೇರದೆ ಎಲ್ಲಾ ಯೋಜನೆ ಜಾರಿ ಮಾಡುತ್ತೇನೆ ಎಂದು ಹೇಳಿತ್ತು. ಆದರೆ ಈ ವಿಚಾರದಲ್ಲಿ ಮಾತು ತಪ್ಪಿರುವ ಸರ್ಕಾರ ಒಂದೊಂದು ಗ್ಯಾರಂಟಿಗೂ ಒಂದೊಂದು ರೂಲ್ಸ್ ಮಾಡುತ್ತಿದೆ. ಅಂತೆಯೇ ಗೃಹಜ್ಯೋತಿ(Gruha jyothi) ವಿಚಾರವಾಗಿ ಸರ್ಕಾರದ ನಿಯಮವೊಂದು ಜನರಿಗೆ ಗೊಂದಲ ಉಂಟುಮಾಡಿದೆ.
ಹೌದು, ಕಾಂಗ್ರೆಸ್ ಸರಕಾರದ(Congress Government) ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಜೂನ್ 18 ರಿಂದಲೇ ಅರ್ಜಿ ಹಾಕುವ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು. ಸೆವಾ ಸಿಂಧು(Seva sindhu) ಮೂಲಕ ನೊಂದಾವಣಿ ಮಾಡಬಹುದಾಗಿದೆ. ಜುಲೈ 1 ರಿಂದ ಈ ಯೋಜನೆ ಜಾರಿಯಾಗುತ್ತೆ ಎಂದು ಸರ್ಕಾರ ಹೇಳಿತ್ತು. ಆದರೆ ಈ ಯೋಜನೆಗೆ ಒಂದೊಂದಾಗಿ ನಿಯಮಾವಳಿಗಳನ್ನು ಸರ್ಕಾರ ಹೇರುತ್ತಿದೆ. ಆದರೀಗ ಉಚಿತ ವಿದ್ಯುತ್ ನೀಡುವುದು ನಾವು ಇದುವರೆಗೂ ಎಷ್ಟು ವಿದ್ಯುತ್ ಬಳಸುತ್ತಿದ್ದೆವು ಎಂಬುದನ್ನು ಆಧರಿಸಿದೆ. ಈ ಕುರಿತು ಕೆಲವೊಂದಿಷ್ಟು ಮಾಹಿತಿಗಳು ಇಲ್ಲಿವೆ.
ಎಷ್ಟು ವಿದ್ಯುತ್ ಉಚಿತವಾಗಿ ದೊರೆಯುತ್ತದೆ?
ಅಂದಹಾಗೆ ಸರ್ಕಾರ ನಾವು ಇದುವರೆಗೂ ಎಷ್ಟು ವಿದ್ಯುತ್ ಬಳಸುತ್ತಿದ್ದೆವು ಎಂಬುದನ್ನು ಆಧರಿಸಿ, ಅದರ ಮೇಲೆ 10 ಯುನಿಟ್ ಉಚಿತ ವಿದ್ಯುತ್ ನೀಡುತ್ತದೆ. ಅಂದರೆ ಕಳೆದ 12 ತಿಂಗಳಿಂದ ನಾವು ಎಷ್ಟು ವಿದ್ಯುತ್ ಬಳಕೆ ಮಾಡಿದ್ದೇವೆ ಎಂಬ ಸರಾಸರಿಯನ್ನು ಆಧರಿಸಿ ಆನಂತರವೇ ನಮಗೆ ಎಷ್ಟು ಯೂನಿಟ್ ಉಚಿತ ವಿದ್ಯುತ್ ಸಿಗಬೇಕು ಎನ್ನುವುದನ್ನು ವಿದ್ಯುತ್ ಮಂಡಳಿಯವರು(Electricity department)ನಿರ್ಧರಿಸುತ್ತಾರೆ. ಉದಾಹರಣೆಗೆ ಕಳೆದ 12 ತಿಂಗಳಿನಿಂದಲೂ, ಪ್ರತೀ ತಿಂಗಳು ಕೂಡ ನೀವು ತಿಂಗಳಿಗೆ 100 ಯೂನಿಟ್ ಸರಾಸರಿ ವಿದ್ಯುತ್ ಅನ್ನು ಬಳಕೆ ಬರುತ್ತಿದ್ದರೆ, ನಿಮಗೆ ಉಚಿತ ವಿದ್ಯುತ್ (Free Electricity)ಅನ್ನು ಮಂಜೂರು ಮಾಡುವ ಸಂದರ್ಭದಲ್ಲಿ 110 ಯೂನಿಟ್ ಗಳವರೆಗೆ ಕೂಡ ಉಚಿತವಾಗಿ ವಿದ್ಯುತ್ ಅನ್ನು ಬಳಸುವಂತಹ ಆಯ್ಕೆಯನ್ನು ಹಾಗೂ ಸವಲತ್ತನ್ನು ನೀಡುತ್ತಾರೆ.
ಹೀಗೆ ಮಾಡಿದ್ರೆ ಬಿಲ್ ಬರುತ್ತದೆ:
ಇನ್ನು ಯಾರೂ ಕೂಡ ಇದುವರೆಗೂ ತಾವು ಎಷ್ಟು ಯುನಿಟ್ ವಿದ್ಯುತ್ ಬಳಕೆ ಮಾಡುತ್ತಿದ್ದೇವೆ, ಮಾಡುತ್ತಿದ್ದೆವು ಎಂಬುದನ್ನು ಪರಿಶೀಲಿಸಲು ಹೋಗುವುದಿಲ್ಲ. ಅಲ್ಲದೆ ಚೆಕ್ ಮಾಡಿಕೊಂಡು ಯಾರು ಬಳಕೆ ಮಾಡುವುದಿಲ್ಲ. ಕೆಲವೊಮ್ಮೆ ನಮಗೆ ವಿದ್ಯುತ್ ಅಗತ್ಯ ಹೆಚ್ಚಿದ್ದರೆ ಮತ್ತೆ ಕೆಲವೊಮ್ಮೆ ಕಡಿಮೆ ಇರಬಹುದು. ಹೀಗಾಗಿ ಕೆಲವು ಸಲ ಮಾಮೂಲು ಬಳಕೆ ಮಾಡುವುದಕ್ಕಿಂತ ಹೆಚ್ಚು ವಿದ್ಯುತ್ ಬಳಸುತ್ತೇವೆ. ಆ ಸಮಯದಲ್ಲಿ ನಮಗೆ ಸರ್ಕಾರ ಹಾಕಿರುವ ಲೆಕ್ಕಾಚಾರದ ಪ್ರಕಾರ ಬಿಲ್ ಬರುತ್ತದೆ. ಒಂದು ವೇಳೆ ಬಿಲ್ ಬಂದರೆ ನಾವು ಇದುವೆರಗೂ ಬಳಸುತ್ತಿದ್ದ ವಿದ್ಯುತ್ ಗಿಂತಲೂ ಹೆಚ್ಚು ವಿದ್ಯುತ್ ಬಳಸಿದ್ದೇವೆ ಎಂದರ್ಥ. ಅಲ್ಲದೆ ಈ ಬಿಲ್ ಸರ್ಕಾರ ಕೊಟ್ಟ ಉಚಿತ ವಿದ್ಯುತ್ ಅನ್ನು ಹೊರತುಪಡಿಸಿರುವುದಾಗಿರುತ್ತದೆ.
3 ತಿಂಗಳೊಳಗೆ ಹಳೆಯ ಬಿಲ್ ಕಟ್ಟಬೇಕು:
ಇನ್ನು ಬಾಕಿ ಇರುವ ವಿದ್ಯುತ್ ಬಿಲ್ (Electricity Bill) ಹಣವನ್ನು ಮೂರು ತಿಂಗಳ ಒಳಗಾಗಿ ಕಟ್ಟಿದೆ ಹೋದಲ್ಲಿ ಕೂಡ ನಿಮ್ಮ ಉಚಿತ ವಿದ್ಯುತ್ ಯೋಜನೆಯನ್ನು ತೆಗೆದುಹಾಕಿ, ಕೇವಲ ಸಾಮಾನ್ಯ ವಿದ್ಯುತ್ ಬಳಕೆಯನ್ನು ನೀಡಲಾಗುತ್ತದೆ. ಹೀಗಾಗಿ ಆದಷ್ಟು ಬೇಗ ಹಳೆಯ ಬಾಕಿಯನ್ನು ಕಟ್ಟಿಬಿಡಿ. ಸರ್ಕಾರದ ಈ ಯೋಜನೆಯನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಿ.
ಜುಲೈ 25ರ ಒಳಗೆ ನೊಂದಾವಣಿ ಮಾಡಿ:
ಎಲ್ಲಕ್ಕಿಂತ ಮುಂಚೆ ನೀವು ಗ್ರಹ ಜ್ಯೋತಿ ವಿದ್ಯುತ್ ಯೋಜನೆ ಅಡಿಯಲ್ಲಿ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ ಯಾಕೆಂದರೆ ರಿಜಿಸ್ಟರ್ ಮಾಡಿಕೊಳ್ಳದೆ ನಿಮಗೆ ವಿದ್ಯುತ್ ಯೋಜನೆಯನ್ನು ಉಚಿತವಾಗಿ ನೀಡಲು ಸಾಧ್ಯವಿಲ್ಲ. ಅದೂ ಕೂಡ ಈ ತಿಂಗಳ ವಿದ್ಯುತ್ ಕೂಡ ಉಚಿತವಾಗಿ ಬೇಕಾದರೆ ಇದೇ ತಿಂಗಳು 25 ರೊಳಗೆ ನೊಂದಾವಣಿ ಮಾಡಬೇಕು. ಒಂದು ದಿನ ತಡವಾದರೂ ಅದು ಮುಂದಿನ ತಿಂಗಳಿಗೆ ಸೇರುತ್ತದೆ.
ಇದನ್ನೂ ಓದಿ : Employe Scheme: ‘ಗೃಹಲಕ್ಷ್ಮೀ’ ಆಯ್ತು, ಇದೀಗ ಮಹಿಳೆಯರಿಗೆ ಮತ್ತೊಂದು ಹೊಸ ಭಾಗ್ಯ- 2000ರೂ ಜೊತೆ ಈ ಹಣ ಕೂಡ ನಿಮ್ಮಖಾತೆಗೆ!!