ವಿಟ್ಲ: ಪಂಚಾಯತ್ ಸದಸ್ಯನ ಜಾಗದಲ್ಲಿ ರಾಜಾರೋಷವಾಗಿ ನಡೆದ ಕೋಳಿ ಅಂಕಕ್ಕೆ ಪೊಲೀಸ್ ದಾಳಿ!!

Vitla: ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ವಿಟ್ಲ (Vitla) ಪೊಲೀಸರು ದಾಳಿ ನಡೆಸಿದ ಘಟನೆ ಪೆರುವಾಯಿಯ ಕೊಲ್ಲತಡ್ಕದಲ್ಲಿ ನಡೆದಿದೆ.

 

 

ಪೆರುವಾಯಿಯಿಂದ ಮಾಣಿಲ ಕಡೆ ಹೋಗುವ ರಸ್ತೆಯ ಕೊಲ್ಲತಡ್ಕ ಎಂಬಲ್ಲಿ ಯಾವುದೇ ಕಾರಣವಿಲ್ಲದೇ ವ್ಯವಸ್ಥಿತ ರೀತಿಯಲ್ಲಿ ಮೂರು ದಿನದ ಕೋಳಿ ಅಂಕ ಏರ್ಪಡಿಸಲಾಗಿತ್ತು. ಶೀಟ್‌ ಹಾಕಿ ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಮಾಡಿ ಕೋಳಿ ಅಂಕ ಏರ್ಪಡಿಸಲಾಗಿದ್ದು, ಕೋಳಿ ಅಂಕದ ಆಮಂತ್ರಣ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

 

ಲೈಟ್‌ ಆಳವಡಿಸಿ ಹಗಲು-ರಾತ್ರಿ ನಡೆಯಬೇಕಿದ್ದ ಕೋಳಿ ಅಂಕಕ್ಕೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರ ದಾಳಿ ವೇಳೆ ಸ್ಥಳದಲ್ಲಿ ನೆರೆದಿದ್ದ ಜನರು ಕಾಲ್ಕಿತ್ತಿದ್ದಾರೆ.

 

ಪೆರುವಾಯಿ ಗ್ರಾಮ ಪಂಚಾಯತ್ ನ ಸದಸ್ಯ ವರುಣ್ ರೈ ಅಂತರಗುತ್ತು ಇವರ ಜಾಗದಲ್ಲಿ ರಾಜಾರೋಷವಾಗಿ ನಡೆದ ಕೋಳಿ ಅಂಕ ನಿಶಾಂತ್ ಶೆಟ್ಟಿ ಮುಳಿಯ ಎಂಬಾತನ ನೇತೃತ್ವದಲ್ಲಿ ನಡೆದಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.

ಇದನ್ನೂ ಓದಿ : ಮತದಾರರಿಗೆ ಆಮಿಷ ತೋರಿದ ಪ್ರಕರಣ!ಸಿಎಂ ಸಿದ್ದರಾಮಯ್ಯ ಶಾಸಕ ಸ್ಥಾನ ಅಸಿಂಧು ?! ರಾಜ್ಯ ರಾಜಕೀಯದಲ್ಲಿ ಸಂಚಲನ !

Leave A Reply

Your email address will not be published.