Seema Haider: ಪಾಕ್ ನಿಂದ ಬಂದ ಈ ಸೀಮಾ ಹೈದರ್ ಯಾರು? ಇವಳ ಮಾಸ್ಟರ್ ಪ್ಲಾನ್ ಏನು? ಈಕೆ ಭಾರತಕ್ಕೆ ಬಂದದ್ದೇಕೆ? – ಇಲ್ಲಿದೆ ನೋಡಿ ಈಕೆಯ ರೋಚಕ ಜಾತಕ !!

Latest news love news Who is Seema Haider from Pakistan and what is her plan

ಅದೇನೋ ಗೊತ್ತಿಲ್ಲ ಇತ್ತೀಚಿನ ದಿನಗಳಲ್ಲಿ ಭಾರತಿಯ ಯುವಕರ ಮೇಲೆ ವಿದೇಶಿ ಮಹಿಳೆಯಿಗೆ ಭಾರೀ ಲವ್ ಆಜುತ್ತಿದೆ. ಲವ್ ಅಂದ್ರೆ ಏನು, ಎರಡು ದಿನ ಚಾಟ್ ಮಾಡಿ, ನಾಲ್ಕು ದಿನ ಸುತ್ತಾಡಿ ಕೊನೆಗೆ ಬ್ರೇಕಪ್ ಮಾಡಿಕೊಳ್ಳುವಂತದಲ್ಲ, ಬದಲಿಗೆ ತಮ್ಮ ಪ್ರಿಯತಮನಿಗಾಗಿ ದೇಶವನ್ನೇ ತೊರೆದು ಬರುವಂತದ್ದು, ಮದುವೆಯಾಗಿ, ಮಕ್ಕಳಾಗಿದ್ದರೂ ಇವರೆಲ್ಲರನ್ನೂ ಬಿಟ್ಟು ಬರುವಂತದ್ದು! ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚಾಗಿದ್ದು, ನೇಪಾಳ, ಬಾಂಗ್ಲಾದಿಂದೆಲ್ಲ ಪ್ರಿಯತಮೆಯರು ಭಾರತಕ್ಕೆ ಬಂದ ಸುದ್ಧಿಯನ್ನೆಲ್ಲ ನಾವು ಕೇಳಿದ್ದೇವೆ. ಅದಲ್ಲಂತೂ ಪಾಕಿಸ್ತಾನದ್ದೇ ಸಿಂಹಪಾಲು ಎಂದು ಹಂಳಬಹುದು.

ಅಂತೆಯೇ ಇತ್ತೀಚಿನ ದಿನಗಳಲ್ಲಿ ಇಡೀ ದೇಶದಲ್ಲೇ ಭಾರೀ ಅಚ್ಚರಿ ಮೂಡಿಸುತ್ತಿರುವ, ಆನ್‌ಲೈನ್‌ ಗೇಮ್‌ ಪಬ್ಜಿ (PUBG) ಪ್ರೇಮಿಗಾಗಿ ಕಟ್ಟಿಕೊಂಡ ಗಂಡನನ್ನೇ ಬಿಟ್ಟು, ತನ್ನ 4 ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ, ಇನ್ನು ಪಾಕಿಸ್ತಾನಕ್ಕೆ ಹೋಗಲಾರೆ, ಭಾರತವನ್ನು-ನನ್ನ ಪ್ರೇಮಿಯನ್ನು ಬಿಡಲಾರೆ ಎನ್ನುತ್ತಾ ಸದ್ಯ ಹಸೆಮಣೆ ಏರಲು ಮುಂದಾಗಿರುವ ಪಾಕಿಸ್ತಾನದ (Pakistani National) ಮಹಿಳೆ ಸೀಮಾ ಹೈದರ್‌ (Seema Haider) ಮ್ಯಾಟರ್ ಅಂತೂ ಎಲ್ಲರಿಗೂ ಗೊತ್ತಿದೆ. ಆದರೆ ದಿನಕಳೆದಂತೆ ಈ ಪ್ರಕರಣ ದಿನಕ್ಕೊಂದು ಸ್ಫೋಟಕ ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ಕೆದಿದಷ್ಟೂ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ.

ಹೌದು, ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್​ ಮೇಲೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಈಕೆ ನಿಜವಾಗಿಯೂ ಪ್ರೀತಿಯನ್ನು ಅರಸಿ ಬಂದಿದ್ದಾಳಾ? ಅಥವಾ ಪಾಕಿಸ್ತಾನದ ಏಜೆಂಟ್​ ಇರಬಹುದಾ? ಎಂಬ ಸಂಶಯ ವ್ಯಕ್ತವಾಗಿದ್ದು, ಆಕೆಯ ನಡೆ ದಿನದಿಂದ ದಿನಕ್ಕೆ ನಿಗೂಢತೆಯನ್ನು ಹೆಚ್ಚಿಸುತ್ತಿದೆ. ಇದರ ನಡುವೆ ನಿನ್ನೆ (ಜು.18) ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ಪಡೆ ಸೀಮಾಳನ್ನು ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಸೋಮವಾರವೂ (ಜು. 17) 8 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ನಾಲ್ಕು ಮಕ್ಕಳ ತಾಯಿಯಾಗಿರುವ ಸೀಮಾ ಕುರಿತು ಕೆಲವು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಪಬ್ಜಿ ಆಡುವಾಗ ಭಾರತೀಯ ಮೂಲದ ಸಚಿನ್​ ಎಂಬ ಯುವಕನ ಪ್ರೀತಿಯ ಬಲೆಗೆ ಬಿದ್ದು ಆತನಿಗಾಗಿ ಬಂದಿರುವುದಾಗಿ ಹೇಳಿಕೊಳ್ಳುತ್ತಿರುವ ಸೀಮಾ, ತನ್ನ ಹೆಸರಿನಲ್ಲಿ ಅನೇಕ ಪಬ್​ಜಿ ಖಾತೆಗಳನ್ನು ಹೊಂದಿದ್ದು, ಈ ಹಿಂದೆ ದೆಹಲಿ ಮೂಲದ ಅನೇಕ ಯುವಕರನ್ನು ಪರಿಚಯಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ.

ಇಷ್ಟೇ ಅಲ್ಲದೆ ಒಂದೆಡೆ ಸೀಮಾ ಹೈದರ್ ವಿಚಾರಣೆ ಭಾರತದಲ್ಲಿ ವಿವಿಧ ಹಂತಗಳಲ್ಲಿ ನಡೆಯುತ್ತಿದ್ದರೆ, ತನಿಖಾ ಸಂಸ್ಥೆಗಳು ಸೀಮಾ ಹೈದರ್ ಪ್ರಕರಣದ ತನಿಖಾ ವರದಿಯನ್ನು ಪಾಕಿಸ್ತಾನ ಸರ್ಕಾರಕ್ಕೆ ಕೋರಿವೆ. ಹೀಗಾಗಿ ಪಾಕಿಸ್ತಾನದ ತನಿಖಾಧಿಕಾರಿಗಳು ಭಾನುವಾರ ಸೀಮಾ ಹೈದರ್ ಬಗ್ಗೆ ಪ್ರಾಥಮಿಕ ವರದಿಯನ್ನು ಸಿದ್ಧಪಡಿಸಿದ್ದಾರೆ. ಅದರಲ್ಲಿ ಸೀಮಾ ಹೈದರ್ ಯಾರು? ಅವಳು ಏಕೆ ಗಡಿ ದಾಟಿ ತನ್ನ ಮಕ್ಕಳೊಂದಿಗೆ ಭಾರತಕ್ಕೆ ಬಂದಳು ಎಂದು ಹೇಳಲಾಗಿದೆ. ಪಾಕಿಸ್ತಾನವು ಸರ್ಕಾರಕ್ಕೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಸೀಮಾ ಹೈದರ್ ದೇಶದ ಭದ್ರತೆಗೆ ಕಂಟಕವಾಗುತ್ತಾರೋ ಇಲ್ಲವೋ ಎಂದು ಹೇಳಲಾಗಿದೆ.

ಯಾರು ಈ ಸೀಮಾ ಹೈದರ್?
ಪಾಕಿಸ್ತಾನದ ತನಿಖಾ ಸಂಸ್ಥೆಗಳು ಸಿದ್ಧಪಡಿಸಿದ ಶೆಹಬಾಜ್ ಷರೀಫ್ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ, ಸೀಮಾ ಹೈದರ್ ಭಾರತಕ್ಕೆ ಪರಾರಿಯಾಗಲು ಅವರ ಪ್ರೇಮಕಥೆಯೇ ಕಾರಣ ಮತ್ತು ಅದಕ್ಕಾಗಿಯೇ ಅವರು ತಮ್ಮ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದಾರೆ. ಸೀಮಾ ಪಾಕಿಸ್ತಾನದಿಂದ ನೇಪಾಳಕ್ಕೆ ಭೇಟಿ ನೀಡಿದ್ದು ಕೇವಲ ಭಾರತೀಯ ಪ್ರಜೆಯ ಮೇಲಿನ ಪ್ರೀತಿಯಿಂದ ಮಾತ್ರ. ಸೀಮಾ ಹೈದರ್ ಅವರ ತಂದೆಯ ಹೆಸರು ಗುಲಾಮ್ ರಜಾ ಮತ್ತು ದಾಖಲೆಗಳ ಪ್ರಕಾರ ಅವರ ವಯಸ್ಸು 27 ವರ್ಷಗಳು. ಅವರು ಫೆಬ್ರವರಿ 15, 2014 ರಂದು ಗುಲಾಮ್ ಹೈದರ್ ಜಖ್ರಾನಿ ಅವರನ್ನು ಮದುವೆಯಾಗಲು ಜಾಕೋಬಾಬಾದ್ ನ್ಯಾಯಾಲಯದಿಂದ ಅನುಮತಿ ಪಡೆದಿದ್ದರು. ಜನವರಿ 1, 2018 ಮತ್ತು ಜನವರಿ 2, 2021 ರ ನಡುವೆ ಮಹಿಳೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಸೀಮಾ ಅವರ ತಂದೆ ರಿಕ್ಷಾ ಚಾಲಕರಾಗಿದ್ದು, ಆಕೆಯ ಸಹೋದರ ಸರ್ಕಾರಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅವರಿಗೆ ಇಬ್ಬರು ಸಹೋದರಿಯರೂ ಇದ್ದಾರೆ.

ಪರಿಚಯ, ಪ್ರೀತಿ ಹೇಗಾಯ್ತು?
ಪಬ್‌ಜೀ ಗೇಮ್ ಮೂಲಕ ಸೀಮಾ ಹೈದರ್ – ಸಚಿನ್ ಮೀನಾ ಸಂರ್ಕಕ್ಕೆ ಬಂದರು. ಆನಂತರ ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಸಂಗಾತಿ ಸಚಿನ್ ಮೀನಾ ಅವರೊಂದಿಗೆ ವಾಸಿಸಲು ಮೇ ತಿಂಗಳಲ್ಲಿ ನೇಪಾಳದಿಂದ ಬಸ್‌ನಲ್ಲಿ ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಪ್ರವೇಶಿಸಿದ್ದಳು. ಜುಲೈ 4 ರಂದು ಸೀಮಾ ಹೈದರ್ ಅವರನ್ನು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಕ್ಕಾಗಿ ಸ್ಥಳೀಯ ಪೊಲೀಸರು ಬಂಧಿಸಿದರು ಮತ್ತು ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಸಚಿನ್ ಮೀನಾ ಅವರನ್ನು ಬಂಧಿಸಲಾಯಿತು. ಜುಲೈ 7 ರಂದು ಇಬ್ಬರಿಗೂ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿತು. ರಬುಪುರ ಪ್ರದೇಶದ ಮನೆಯೊಂದರಲ್ಲಿ ತನ್ನ ನಾಲ್ಕು ಮಕ್ಕಳೊಂದಿಗೆ ಒಟ್ಟಿಗೆ ವಾಸಿಸುತ್ತಿದ್ದರು.

ಕಠ್ಮಂಡುವಿನಲ್ಲಿ ರೂಂ ಬುಕ್, ID ಕಾರ್ಡ್ ಇಲ್ಲ !!
ಸೀಮಾ ಭಾರತ ಪ್ರವೇಶಿಸುವ ಮುನ್ನ ಒಂದು ವಾರಗಳ ಕಾಲ ನೇಪಾಳದ ಕಾಠ್ಮಂಡುವಿನ ಹೋಟೆಲ್​ನಲ್ಲಿ ಪ್ರಿಯಕರ ಸಚಿನ್​ ಮೀನಾ ಜತೆ ಉಳಿದುಕೊಂಡಿದ್ದಳು ಮತ್ತು ರೂಮ್​ ಬುಕ್​ ಮಾಡಲು ಇಬ್ಬರು ನಕಲಿ ಹೆಸರುಗಳನ್ನು ಬಳಸಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ. ಸಚಿನ್​ ಮೀನಾ ಮೊದಲು ಏಕಾಂಗಿಯಾಗಿ ಬಂದು ರೂಮ್​ ಮಾಡಿದನು ಮತ್ತು ಆತನ ಪತ್ನಿ ಸೀಮಾ ತಡವಾಗಿ ಬಂದು ಆತನನ್ನು ಸೇರಿದಳು ಎಂದು ಗಣೇಶ್​ ಹೇಳಿದ್ದಾರೆ. ಅವರು ಬಳಿ ಯಾವುದೇ ಐಡಿ ಕಾರ್ಡ್​ ಇರಲಿಲ್ಲ. ರಿಜಿಸ್ಟರ್​ನಲ್ಲಿ ಇಬ್ಬರು ತಮ್ಮ ಹೆಸರನ್ನು ಮಾತ್ರ ಬರೆದರು. ಆದರೆ, ರಿಜಿಸ್ಟರ್​ ಪರಿಶೀಲಿಸಿದಾಗ ಅವರ ಹೆಸರನ್ನು ಎಲ್ಲೆಲ್ಲಿಯೋ ಬರೆದಿದ್ದರು ಎಂದು ತಿಳಿದುಬಂದಿದೆ.

ಹಲವು ಪಬ್ಜಿ ಅಂಕೌಂಟ್ ಪತ್ತೆ !!
ನಾಲ್ಕು ಮಕ್ಕಳ ತಾಯಿಯಾಗಿರುವ ಸೀಮಾ ಕುರಿತು ಕೆಲವು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಪಬ್ಜಿ ಆಡುವಾಗ ಭಾರತೀಯ ಮೂಲದ ಸಚಿನ್​ ಎಂಬ ಯುವಕನ ಪ್ರೀತಿಯ ಬಲೆಗೆ ಬಿದ್ದು ಆತನಿಗಾಗಿ ಬಂದಿರುವುದಾಗಿ ಹೇಳಿಕೊಳ್ಳುತ್ತಿರುವ ಸೀಮಾ, ತನ್ನ ಹೆಸರಿನಲ್ಲಿ ಅನೇಕ ಪಬ್​ಜಿ ಖಾತೆಗಳನ್ನು ಹೊಂದಿದ್ದು, ಈ ಹಿಂದೆ ದೆಹಲಿ ಮೂಲದ ಅನೇಕ ಯುವಕರನ್ನು ಪರಿಚಯಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ.

ಪಬ್‌ಜೀ ಮೂಲಕ ಸಾಕಷ್ಟು ಜನರ ಸಂಪರ್ಕ:
ಪಾಕಿಸ್ತಾನ ಸೇನೆ ಮತ್ತು ದೇಶದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ನೊಂದಿಗೆ ಆಕೆ ಸಂಭವನೀಯ ಸಂಪರ್ಕಗಳ ಕುರಿತು ಎಟಿಎಸ್ ಮತ್ತು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ನ ರೇಡಾರ್‌ನಲ್ಲಿದ್ದಾಳೆ. ಎಟಿಎಸ್‌ನ ವಿಚಾರಣೆ ವೇಳೆ, ಸೀಮಾ ಹೈದರ್ ಹೆಚ್ಚಾಗಿ ದೆಹಲಿ-ಎನ್‌ಸಿಆರ್‌ನ ಜನರನ್ನು ಪಬ್‌ಜೀ ಮೂಲಕ ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ. ಸೀಮಾ ಹೈದರ್‌ಗೆ ಇಂಗ್ಲಿಷ್‌ನಲ್ಲಿ ಕೆಲವು ಸಾಲುಗಳನ್ನು ಓದುವಂತೆ ಹೇಳಲಾಗಿದೆ ಎಂದು ಎಟಿಎಸ್ ಮೂಲಗಳು ತಿಳಿಸಿವೆ. ಅವಳು ಚೆನ್ನಾಗಿ ಓದುತ್ತಿದ್ದಳು ಮಾತ್ರವಲ್ಲ, ಅವುಗಳನ್ನು ಓದಿದ ರೀತಿ ಸರಿಯಾಗಿತ್ತು. ಮೇ ತಿಂಗಳಲ್ಲಿ ನೇಪಾಳ ಗಡಿ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಸೀಮಾ ಹೈದರ್ ಈಗ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾದಲ್ಲಿ ಸಚಿನ್ ಮೀನಾ ಜೊತೆ ವಾಸಿಸುತ್ತಿದ್ದಾರೆ. ವೀಸಾ ಇಲ್ಲದೆ ಭಾರತಕ್ಕೆ ಬಂದಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಪಾಕ್​ ಸೇನೆಯಲ್ಲಿ ಸೀಮಾ ಚಿಕ್ಕಪ್ಪ !!
ಇನ್ನು ಆಕೆಯ ಪಾಕಿಸ್ತಾನಿ ಗುರುಚಿತ ಚೀಟಿ ತೀರಾ ಇತ್ತೀಚಿನದು ಮತ್ತು 2022ರಲ್ಲಿ ಅದನ್ನು ಮಾಡಲಾಗಿದೆ. ಕೆಲವು ಇಂಗ್ಲಿಷ್​ ಸಾಲುಗಳನ್ನು ಓದಲು ತನಿಖಾಧಿಕಾರಿಗಳು ಹೇಳಿದಾಗ, ಆಕೆ ಸ್ಪಷ್ಟವಾಗಿ ಮತ್ತು ಹರಳು ಹುರಿದಂತೆ ಪಟಪಟನೆ ಓದಿದ್ದಾಳೆ. ಆದರೆ, ತಾನು ಐದನೇ ತರಗತಿ ಮಾತ್ರ ಓದಿದ್ದೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದಾಳೆ. ಕೆಲವು ವರದಿಗಳ ಪ್ರಕಾರ, ಸೀಮಾ ಹೈದರ್​ ಚಿಕ್ಕಪ್ಪ ಪಾಕಿಸ್ತಾನದ ಸೇನೆಯಲ್ಲಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಆಕೆಯ ಸಹೋದರ ಆರ್ಮಿ ಸೇರಲು ತಯಾರಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಹಿಂದೂ ದೇವಾಲಯಗಳ ಮೇಲೆ ಧಾಳಿ:
ಪಬ್‌ಜಿ ಪ್ರೇಮಿಯೊಂದಿಗೆ ಇರಲು ಭಾರತಕ್ಕೆ ಪ್ರಯಾಣಿಸಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಡಕಾಯಿತರು ಎಚ್ಚರಿಕೆ ನೀಡಿದ ಕೆಲವು ದಿನಗಳ ನಂತರ, ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಭಾನುವಾರ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದ್ದಾರೆ. ದಾಳಿಕೋರರು ಸಿಂಧ್ ಪ್ರಾಂತ್ಯದ ಕಾಶ್ಮೋರ್ ಪ್ರದೇಶದಲ್ಲಿ ಸ್ಥಳೀಯ ಹಿಂದೂ ಸಮುದಾಯದವರು ನಿರ್ಮಿಸಿದ ಸಣ್ಣ ದೇವಾಲಯ ಮತ್ತು ಹಿಂದೂ ಸಮುದಾಯದ ಸದಸ್ಯರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಪ್ರಾಂತೀಯ ರಾಜಧಾನಿಯಾದ ಕರಾಚಿಯಲ್ಲಿ ಸುಮಾರು 150 ವರ್ಷಗಳಷ್ಟು ಹಳೆಯದಾದ ದೇವಾಲಯ ಇದಾಗಿದೆ.

ಭಾರತೀಯ ಯೋಧರಿಗೆ ಫ್ರೆಂಡ್ ರಿಕ್ವೆಸ್ಟ್ ಸೆಂಡ್?
ಉತ್ತರ ಪ್ರದೇಶ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅದಕ್ಕೆ ಪೂರಕವೆಂಬಂತೆ ಪೊಲೀಸರು ಮತ್ತೊಂದು ಸ್ಫೋಟಕ ಮಾಹಿತಿಯನ್ನು ಹೊರಬಿಟ್ಟಿದ್ದಾರೆ. ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌, ಭಾರತೀಯ ಸೇನಾ ಯೋಧರಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಸೇನೆ ಮತ್ತು ಅಲ್ಲಿನ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್‌ನೊಂದಿಗೆ (ISI) ಆಕೆಗೆ ಸಂಬಂಧದ ಶಂಕೆಯ ಹಿನ್ನೆಲೆ ಎಟಿಎಸ್ ಹಾಗೂ ಇಂಟೆಲಿಜೆನ್ಸ್ ಬ್ಯೂರೋ (IB) ವಿಚಾರಣೆಗೆ ಒಳಪಡಿಸಿದೆ. ಮಾತ್ರವಲ್ಲದೇ ಸೀಮಾ ಹೈದರ್‌ನ ಈ ಹಿಂದೆ ಡಿಲೀಟ್ ಆಗಿರುವ ಮೊಬೈಲ್ ಡೇಟಾವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆಕೆಯ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಸಹ ತನಿಖೆಗೆ ಒಳಪಡಿಸಲಾಗಿದೆ.

 

ಮುಂದಿನ ನಡೆ ಏನು?
ಪಾಕಿಸ್ತಾನದ ತನಿಖಾ ಸಂಸ್ಥೆಗಳು ಮಾಡಿರುವ ವರದಿಯಲ್ಲಿ ಸೀಮಾ ತಾನು ಧರ್ಮವನ್ನು ಬದಲಾಯಿಸುತ್ತಿದ್ದೇನೆ ಮತ್ತು ಧಾರ್ಮಿಕ ಪ್ರತಿಕ್ರಿಯೆಗಳು ತನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ. ಅದೇ ಸಮಯದಲ್ಲಿ, ಸೀಮಾ ಅವರ ಹೇಳಿಕೆಯನ್ನು ಸಹ ಸೇರಿಸಲಾಗಿದೆ, ಅದರಲ್ಲಿ ಅವರು ‘ಸಾವು ಮಾತ್ರ ಅವರನ್ನು ಈಗ ಬೇರ್ಪಡಿಸಬಹುದು’ ಎಂದು ಹೇಳಿದ್ದಾರೆ. ಅಲ್ಲದೆ ಅವರು ಹೆಸರು ಸೀಮಾ ಮೀನಾ ಮತ್ತು ಅವರು ಸಚಿನ್ ಮೀನಾ ಎಂಬ ಉಪನಾಮವನ್ನು ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಸೀಮಾ ಭಾರತದಲ್ಲಿ ದೀರ್ಘಕಾಲ ಉಳಿಯುವುದು ತುಂಬಾ ಕಷ್ಟ ಎಂದು ಭಾರತೀಯ ಪೊಲೀಸರು ಹೇಳಿದ್ದಾರೆ. ಅವರ ಕಥೆ ವೈರಲ್ ಆದ ನಂತರ ದಂಪತಿಗಳು ವಿಶ್ವದಾದ್ಯಂತ ಜನಪ್ರಿಯತೆಯನ್ನು ಗಳಿಸಿದ್ದಾರೆ. ಹಾಗಾದರೆ ಆತನಿಗೆ ಭಾರತದಲ್ಲಿ ಉಳಿಯಲು ಅವಕಾಶವಿದೆಯೇ ಅಥವಾ ಆತನನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ.

 

ಇದನ್ನು ಓದಿ: ISRO Projects: ಚಂದ್ರಯಾನ – 3 ಧಾವಿಸುತ್ತಿದೆ, ಬೆರಗು ಹುಟ್ಟಿಸುತ್ತೆ ISRO ದ ಮುಂದಿನ ಮಾನವ ಸಹಿತ ಪ್ರಾಜೆಕ್ಟ್ಸ್!

Leave A Reply

Your email address will not be published.