Horticulture Department: ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಭರ್ಜರಿ ಗುಡ್ ನ್ಯೂಸ್ – ಸರ್ಕಾರದಿಂದ ಕೊನೆಗೂ ಬಂತು ಬೆಳೆ ವಿಮೆಯ ಬಿಗ್ ಆಫರ್ !!

Latest news Horticulture Department Order for payment of crop insurance including arecanut and pepper

ಅಡಿಕೆ ಮತ್ತು ಕಾಳುಮೆಣಸನ್ನು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (WBCIS) ಅಡಿಯಲ್ಲಿ ಸೇರಿಸಲು ರಾಜ್ಯ ಸರ್ಕಾರವ ಆದೇಶ ಹೊರಡಿಸಿದ್ದು, ಪ್ರೀಮಿಯಂ ಪಾವತಿಸಲು ಕೊನೆಯ ದಿನಾಂಕವನ್ನೂ ನಿಗದಿ ಮಾಡಿದೆ.

ಹೌದು, ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಅಡಿಕೆ, ಕಾಳು ಮೆಣಸು ಬೆಳೆಗಳನ್ನು ಸೇರಿಸಬೇಕು ಎಂದು ತೋಟಗಾರಿಕಾ ಇಲಾಖೆಗೆ ಒತ್ತಾಯಿಸಲಾಗುತತಿತ್ತು. ಅಲ್ಲದೆ ಈ ಕುರಿತು ಮಾಜಿ ಸಚಿವರು ಇಲಾಖೆಯ ಆಯುಕ್ತರಿಗೆ ಪತ್ರವನ್ನು ಕೂಡ ಬರೆದಿದ್ದರು. ಕೊನೆಗೂ ಈ ಎಲ್ಲಾ ಪ್ರಯತ್ನಗಳಿಗೂ ಜಯ ಸಿಕ್ಕಂತಾಜಿದ್ದು, 2023-24ನೇ ಸಾಲಿನಲ್ಲಿ ಮರು ವಿನ್ಯಾಸಗೊಳಿಸಲಾದ ಹವಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಹಾಗೂ ಕಾಳು ಮೆಣಸು ಬೆಳೆಗಳಿಗೆ ಬೆಳೆವಿಮೆ ಪಾವತಿಸಲು ದಕ್ಷಿಣ ಕನ್ನಡದ ರೈತರಿಗೆ ಸರ್ಕಾರ ಕೊನೆಗೂ ಅವಕಾಶ ಮಾಡಿಕೊಟ್ಟಿದೆ.

ಅಂದಹಾಗೆ ಆಧಾರಿತ ಫಸಲು ವಿಮಾ ಯೋಜನೆ ನೋಂದಣಿ ಪ್ರಾರಂಭ ಆಗದೆ ಮಲೆನಾಡಿನ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. 2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಜಾರಿಗೆ ಬಂದ ಈ ವಿಮಾ ಯೋಜನೆಯು ಆ ಸಮಯದಲ್ಲಿ ಹವಾಮಾನ ವೈಫಲ್ಯದಿಂದ ಫಸಲು ಕಳೆದುಕೊಂಡ ರೈತರ ಕೈ ಹಿಡಿದಿತ್ತು. ಸಾಮಾನ್ಯವಾಗಿ ಜೂನ್ ಆರಂಭದಿಂದ ಅಂತ್ಯದವರೆಗೂ ಪ್ರೀಮಿಯಂ ಪಾವತಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಆದರೆ ಈ ಬಾರಿ ಜುಲೈ ಮಧ್ಯಭಾಗದವರೆಗೂ ಸರ್ಕಾರ ಯಾವದೇ ಆದೇಶ ಹೊರಡಿಸಲಿಲ್ಲ. ಇದರಿಂದ ದಕ್ಷಿಣ ಕನ್ನಡದ ಬೆಳೆಗಾರರು ಆತಂಕಗೊಂಡಿದ್ದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಇಲಾಖೆಯ ಗಮನಕ್ಕೆ ತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕಾ ಇಲಾಖೆ ಸಚಿವ ಸದ್ಯದಲ್ಲೇ ಸಮಸ್ಯೆ ಬಗೆಹರಿಸಿ ಆದೇಶ ಹೊರಡಿಸುವುದಾಗಿ ತಿಳಿಸಿದ್ದರರು. ಅಂತೆಯೇ ಕೊನೆಗೂ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದೆ.

ಎಷ್ಟು ಹಣ ಪಾವತಿಸಬೇಕು? ಕೊನೆಯ ದಿನಾಂಕ ಯಾವಾಗ?:
ಇನ್ನು ಬೆಳೆ ವಿಮೆ ಯೋಜನೆಯಡಿ ಪ್ರೀಮಿಯಂ ಪಾವತಿಸಲು ಈ ತಿಂಗಳು ಅಂದರೆ ಜುಲೈ 31ರ ವರೆಗೆ ಅವಕಾಶ ಮಾಡಿಕೊಡಲಾಗಿದೆ.
• ಅಡಿಕೆ- ಗರಿಷ್ಠ ಮೊತ್ತ ಹೆಕ್ಟೆರ್ ಗೆ 1,28,000 ಎಂದು ನಿಗದಿಪಡಿಸಲಾಗಿದ್ದು, ಇದರಲ್ಲಿ ರೈತರು ಪಾವತಿಸಬೇಕಾದ ಮೊತ್ತ 6,400
• ಕಾಳುಮೆಣಸು- ಗರಿಷ್ಠ ಮೊತ್ತ ಹೆಕ್ಟೆರ್ ಗೆ 47,000 ಎಂದು ನಿಗದಿಪಡಿಸಲಾಗಿದ್ದು, ಇದರಲ್ಲಿ ರೈತರು ಪಾವತಿಸಬೇಕಾದ ಮೊತ್ತ 2,350

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ವಾಣಿಜ್ಯ/ಗ್ರಾಮೀಣ ಸಹಕಾರಿ ಬ್ಯಾಂಕ್/ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ/ ತೋಟಗಾರಿಕೆ ಉಪ ನಿರ್ದೇಶಕರು. ವಿವರಗಳಿಗೆ ಸಂಪರ್ಕಿಸಿ: ತೋಟಗಾರಿಕೆ ಉಪನಿರ್ದೇಶಕರ ಕಛೇರಿ (ZP), ಮಂಗಳೂರು ದೂ: 0824-2423628, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಛೇರಿ 0824-2423615

 

ಇದನ್ನು ಓದಿ: Bath room Tips: ಮನೆಯ ಎಲ್ಲರೂ ಒಂದೇ ಸೋಪ್ ಬಳಸಬೇಕಾ, ಬೇಡವಾ ? ಇಂಟರೆಸ್ಟಿಂಗ್ ಮಾಹಿತಿ !

Leave A Reply

Your email address will not be published.