Free Auto service: ಉಚಿತ ಶಕ್ತಿ ಯೋಜನೆ ನಂತ್ರ ಬಂತು ಹೊಸ ಸ್ಕೀಮ್, ಈಗ ಗರ್ಭಿಣಿ ಸ್ತ್ರೀಯರಿಗೂ ಉಚಿತ ಪ್ರಯಾಣ ! ಜಿಲ್ಲಾಧಿಕಾರಿಯಿಂದ ಚಾಲನೆ;
latest news Free Auto service You can travel not only by bus but also by auto for free
Free Auto service: ಕಾಂಗ್ರೆಸ್ ಗ್ಯಾರಂಟಿ(Congress guarantee)”ಶಕ್ತಿ ಯೋಜನೆ”(Shakti scheme) ಯಿಂದ ಮಹಿಳೆಯರ ಸಂಭ್ರಮಕ್ಕೆ ಎಲ್ಲೇ ಮೀರಿದಂತಾಗಿದೆ. ಇದೀಗ ಗರ್ಭಿಣಿಯರಿಗೊಂದು ಗುಡ್ ನ್ಯೂಸ್ ಇಲ್ಲಿದೆ. ಇನ್ನು ಮುಂದೆ ಬಸ್ ನಲ್ಲಿ ಮಾತ್ರವಲ್ಲದೆ ಆಟೋದಲ್ಲೂ ಕೂಡ ಉಚಿತ ಪ್ರಯಾಣ (Free Auto service) ಮಾಡಬಹುದು.
ಹೌದು, ಇಂಥದೊಂದು ಸೇವೆಗೆ ಚಿತ್ರದುರ್ಗದ ‘ಸ್ನೇಹ ಜೀವಿ ಆಟೋ ಚಾಲಕರು ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ’ ಕೈ ಹಾಕಿದ್ದಾರೆ. ಆಟೋಗಳ ಹಿಂಭಾಗದಲ್ಲಿ “ಗರ್ಭಿಣಿಯರಿಗೆ ಉಚಿತ ಸೇವೆ” ಎಂದು ಹಾಕಿದ್ದಾರೆ. ಸಾರ್ವಜನಿಕರಿಗಾಗಿ ಏನಾದ್ರು ಸಹಾಯ ಮಾಡಬೇಕು ಎಂಬ ದೃಷ್ಟಿಯಿಂದ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿಕೊಳ್ಳಲಾಗಿದೆ ಎಂದು ಸ್ನೇಹ ಜೀವಿ ಬಳಗ ತಿಳಿಸಿದೆ. ಅಲ್ಲದೆ ಈ ಕಾರ್ಯಕ್ರಮಕ್ಕೆ ಸ್ವತಹ ಜಿಲ್ಲಾಧಿಕಾರಿಯೇ ಆಗಮಿಸಿ ಚಾಲನೆ ನೀಡಿದ್ದಾರೆ.
ಫ್ರೀ ಆಟೋ ಸರ್ವೀಸ್ ಉದ್ಘಾಟನೆ ಮಾಡಿದ ಚಿತ್ರದುರ್ಗದ (Chitradurga DC) ಜಿಲ್ಲಾಧಿಕಾರಿ ಜಿ.ಆರ್.ಜೆ ದಿವ್ಯಪ್ರಭು (G.R.J DivyaPrabhu) ಅವರು, ಗರ್ಭಿಣಿಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ಆಟೋ ಚಾಲಕರನ್ನು ಶ್ಲಾಘನಿಸಿದರು. ಈ ಸೇವೆಯಿಂದ ಮಹಿಳೆಯರಿಗೆ ಅನುಕೂಲವಾಗಲಿದೆ ಇದು ನನಗೆ ತುಂಬಾ ಖುಷಿಯಾಗಿದೆ. ಇದೇ ರೀತಿ ಇನ್ನಷ್ಟು ಉತ್ತಮ ಸೇವೆಯನ್ನು ಜನರಿಗೆ ಅವರು ನೀಡುವಂತಾಗಲಿ ಎಂದು ಅಭಿನಂದಿಸಿದರು.
ಇನ್ನೂ ಈ ಸೇವೆಯನ್ನು ಸದುಪಯೋಗ ಮಾಡಿಕೊಂಡಂತಹ ಗರ್ಭಿಣಿಯರು(Pregnant) ಫುಲ್ ಖುಷ್ ಆಗಿದ್ದು, ಪ್ರತೀ ಬಾರಿ ಚೆಕಪ್ ಗೆ ಆಟೋದಲ್ಲಿ ಬರುವಾಗ ವಿಪರೀತ ದುಡ್ಡು ಆಗ್ತಿತ್ತು. ಇದಕ್ಕಾಗಿ ಸಾಕಷ್ಟು ಹಣ ಬೇಕಾಗಿತ್ತು. ಆದ್ರೆ ಈಗ ಆಟೋದವರು ಉಚಿತ ಸೇವೆ ಆರಂಭಿಸಿರೋದು ಸಾಕಷ್ಟು ಬಡ ಜನರಿಗೆ ಅನುಕೂಲ ಆಗಲಿದೆ ಎಂದು ಶ್ಲಾಘಿಸಿದರು.
ಇನ್ನು ಈ ಉಚಿತ ಆಟೋ ಪ್ರಯಾಣದ ಬಗ್ಗೆ ಮಾತನಾಡಿದ ಆಟೋ ಚಾಲಕರ ಸಂಘವು, ದಿನದ ಯಾವುದೇ ಸಮಯದಲ್ಲಿಯಾದ್ರು ಗರ್ಭಿಣಿಯರು ಆಟೋ ಹತ್ತಿದ್ದರೆ ಅವರಿಂದ ಯಾವುದೇ ರೀತಿಯ ಹಣ ಪಡೆಯದೇ ಉಚಿತ ಸೇವೆಯನ್ನು ನೀಡುವುದೇ ನಮ್ಮ ಉದ್ದೇಶವಾಗಿದೆ. ನಮ್ಮ ಯೂನಿಯನ್ ವತಿಯಿಂದ ಪ್ರತೀ ವರ್ಷ ಈ ಕಾರ್ಯವನ್ನು ಮಾಡುತ್ತಲೇ ಬರುತ್ತಿದ್ದೇವೆ. ಜನರು ನಮ್ಮ ಸೇವೆಯನ್ನು ಸದುಪಯೋಗ ಮಾಡಿಕೊಳ್ಳಲಿ. ಅದೇ ರೀತಿ ಸರ್ಕಾರ ಕೂಡ ನಮ್ಮ ಕಡೆ ಗಮನ ಹರಿಸಿ ನಮ್ಮಂತಹ ಆಟೋ ಚಾಲಕರಿಗೆ ಏನಾದ್ರು ಅನುಕೂಲ ಮಾಡಿಕೊಡಲಿ ಎಂದು ಹೇಳಿದರು.
ಇದನ್ನು ಓದಿ: Bike Wheeling: ಯಾರೋ ತಪ್ಪು ಮಾಡಿದ್ರೂ ಮತ್ಯಾರಿಗೋ ಶಿಕ್ಷೆ ಆಗುತ್ತೆ, ಹೊಸ ರೂಲ್ಸ್ ಜಾರಿಗೆ ತಂದ ಪೊಲೀಸರು !