Gruha jyothi: ‘ಗೃಹಜ್ಯೋತಿ’ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಮೇಲೆ ಶಾಕ್ !! ಜುಲೈ 1 ರಿಂದ ಫ್ರೀ ಕರೆಂಟ್ ಎಂದು ಬೊಗಳೆ ಬಿಟ್ಟಿತಾ ಗೌರ್ಮೆಂಟ್?
Latest Karnataka news Congress guarantee Gruha Jyothi scheme implemented from 1st July bescom put electricity bill till 15th July
Gruha jyothi: ರಾಜ್ಯದಲ್ಲೀಗ ಗ್ಯಾರಂಟಿ(Guaranty)ಪರ್ವ ಶುರುವಾಗಿದೆ. ರಾಜ್ಯ ಸರ್ಕಾರವು ಒಂದೊಂದೇ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುತ್ತಾ ತಾನು ನುಡಿದಂತೆ ನಡೆಯುತ್ತಿದೆ. ಅಂತೆಯೇ ಜುಲೈ 1 ರಿಂದ ಗೃಹಜ್ಯೋತಿ(Gruha jyoti) ಯೋಜನೆಯಡಿ ರಾಜ್ಯದ ಜನತೆಗೆ 200 ಯುನಿಟ್ ಫ್ರೀ ಕರೆಂಟ್ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೀಗ ಫ್ರೀ ಕರೆಂಟ್ ನಿರೀಕ್ಷೆಯಲ್ಲಿದ್ದವರಿಗೆ ಭಾರೀ ನಿರಾಸೆಯಾಗಿದ್ದಾರೆ. ಸರ್ಕಾರ ಬೊಗಳೆ ಬಿಟ್ಟಿತೇ ಎಂಬ ಅನುಮಾನ ಕೂಡ ಶುರುವಾಗಿದೆ.
ರಾಜ್ಯ ಸರ್ಕಾರ ತನ ಮಹತ್ವಾಕಾಂಕ್ಷೀ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿಗೆ ಕಳೆದ ಜೂನ್ 18 ರಂದೇ ಅರ್ಜಿ ಹಾಕುವ ಪ್ರಕ್ರಿಯೆಯನ್ನು ಆರಂಭಿಸಿತು. ಅಲ್ಲದೆ ಜುಲೈ 1 ರಿಂದ ಎಲ್ಲರಿಗೂ ಫ್ರೀ ಕರೆಂಟ್(Free current) , ಯಾರೂ ಬಿಲ್ ಕಟ್ಪುವ ಅಗತ್ಯವಿಲ್ಲ ಎಂದೂ ಹೇಳಿತ್ತು. ಆದರೀಗ ವಿದ್ಯುತ್ ಇಲಾಖೆ ಸರ್ಕಾರದ ಮಾತಿಗೆ ವಿರುದ್ಧವಾಗಿ ನಡೆಯುತ್ತಿದೆ. ಯಾಕೆಂದರೆ ಸರ್ಕಾರ ಜುಲೈ 1 ರಿಂದ ಉಚಿತ ವಿದ್ಯುತ್, ಕರೆಂಟ್ ಬಿಲ್ ಕೊಡಲ್ಲಾ ಎಂದರೂ ಜುಲೈ 15ರವರೆಗೆ ಜನರಿಗೆ ವಿದ್ಯುತ್ ಬಿಲ್ ನೀಡುತ್ತಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರದ ಘೋಷಣೆ ಮಾಡಿದ್ದು ಒಂದು, ಸದ್ಯ ನಡೆದುಕೊಳ್ಳುತ್ತಿರುವುದು ಒಂದು ಎಂಬಂತಾಗಿದೆ.
ಹೌದು, ಬೆಸ್ಕಾಂ ಜುಲೈ ಮೊದಲ ಹದಿನೈದು ದಿನಗಳ ವಿದ್ಯುತ್ ಉಚಿತ ನೀಡದೇ ಬಿಲ್ ನೀಡಿರುವುದಕ್ಕೆ ಜನರು ಸರ್ಕಾರ ವಿರುದ್ಧ ಕಿಡಿಕಾರುವಂತಾಗಿದೆ. ಕಾಂಗ್ರೆಸ್ ಘೋಷಿಸಿದಂತೆ ಗೃಹ ಜ್ಯೋತಿ(Gruha jyothi) ಯೋಜನೆಯಡಿ ಜುಲೈ ತಿಂಗಳ ಮೊದಲಾರ್ಧದಲ್ಲಿ ಬಳಕೆಯಾಗುವ ವಿದ್ಯುತ್ ಸಂಪೂರ್ಣ ಉಚಿತ. ಇದಕ್ಕೆ ಯಾವುದೇ ಬಿಲ್ ಹಾಕಬಾರದು. ಆದರೆ ಗೃಹ ಜ್ಯೋತಿ ಫಲಾನುಭವಿಗಳಿಗೆ ಜುಲೈ ಎರಡು ವಾರಗಳ ಬಿಲ್ ಕೈ ಸೇರಿದೆ. ಬೆಸ್ಕಾಂನ ಈ ಕ್ರಮವು ಗ್ರಾಹಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಜೊತೆಗೆ ಬಿಲ್ ನೀಡಿರುವುದಕ್ಕೆ ಇಂಧನ ಸಚಿವ(power Minister)ಕೆಜೆ ಜಾರ್ಜ್(K J George)ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಗೊಂದಲ?
ಜುಲೈನಿಂದ ಫಲಾನುಭವಿಗಳು ಬಳಸುವ ವಿದ್ಯುತ್ 200 ಯೂನಿಟ್ ವರೆಗೆ ಗೃಹ ಜ್ಯೋತಿ ವ್ಯಾಪ್ತಿಗೆ ಒಳಪಡಲಿದೆ. ಆದರೆ ಜೂನ್ ತಿಂಗಳ ಬಿಲ್ಗಳನ್ನು ಗ್ರಾಹಕರಿಗೆ ನೀಡಲಾಗುವುದು. ಆಗಸ್ಟ್ನಿಂದ(August)ಯಾವ ಬಿಲ್ ನೀಡಲಾಗುವುದಿಲ್ಲ ಎಂದು ಹಿರಿಯ ತಾಂತ್ರಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂದಹಾಗೆ ಪ್ರತಿ ತಿಂಗಳು 15 ರಿಂದ 15 ರವರೆಗೆ ವಿದ್ಯುತ್ ಬಳಕೆಯ ಬಿಲ್ಲಿಂಗ್ ಚಕ್ರ ಎನ್ನಲಾಗಿದೆ. ಅಲ್ಲದೆ ಜುಲೈ ಮೊದಲ 15 ದಿನಗಳ ವೆಚ್ಚವನ್ನು ಬೆಸ್ಕಾಂ ಲೆಕ್ಕ ಹಾಕಬೇಕು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಸೂಚಿಸಿದ್ದು, ಜೂನ್ 30 ರವರೆಗೆ ಮಾತ್ರ ವಿದ್ಯುತ್ ಶುಲ್ಕ ಸಂಗ್ರಹಿಸಬೇಕು ಎಂದ್ದಾರೆ.
ಜುಲೈ 1ರಿಂದಲೇ ಉಚಿತ ವಿದ್ಯುತ್ ಆದೇಶ:
ಇಂಧನ ಇಲಾಖೆಯು ಜೂನ್ 15ರಂದು ಆದೇಶ ಹೊರಡಿಸಿದ್ದು, ಅದರ ಪ್ರಕಾರ ಜುಲೈ 1 ರಿಂದ ಜುಲೈ 31 ರವರೆಗೆ ಫಲಾನುಭವಿಗಳ ಮನೆಗಳಿಗೆ ವಿದ್ಯುತ್ ಉಚಿತವಾಗಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಆದ ಸಮಸ್ಯೆಯನ್ನು ಸರಿಪಡಿಸುತ್ತೇವೆ. ಈ ತಿಂಗಳಿಂದ ಗೃಹ ಜ್ಯೋತಿ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಈ ತಿಂಗಳ 25 ರ ಒಳಗೆ ಅರ್ಜಿ ಹಾಕಿದರೆ ಮಾತ್ರ ಜುಲೈ ತಿಂಗಳ ಕರೆಂಟ್ ಉಚಿತವಾಗಲಿದೆ. ಇಲ್ಲ ಒಂದು ದಿನ ತಡವಾದರೂ ಅದು ಆಗಸ್ಟ್ ತಿಂಗಳಿಗೆ ಎಂದು ಭಾವಿಸಲಾಗುತ್ತದೆ. ಆಗ ನೀವು ಜುಲೈ ತಿಂಗಳ ಬಿಲ್ ಅನ್ನು ಕಡ್ಡಾಯವಾಗಿ ಕಟ್ಟಬೇಕಾಗುತ್ತೆ. ಹೀಗಾಗಿ ಬೇಗ ಅರ್ಜಿ ಹಾಕಿ, ಉಚಿತ ವಿದ್ಯುತ್ ಪಡೆಯಿರಿ ಎಂದು ತಿಳಿಸಿದ್ದಾರೆ.