Millionaire : ಈತನ ಖಾತೆಯಲ್ಲಿ ಇದ್ದದ್ದು ಕೇವಲ 10 ಸಾವಿರ ! ಅಬ್ಬಬ್ಬಾ ನೋಡನೋಡುತ್ತಲೆ ಕೋಟ್ಯಾಧಿಪತಿಯೇ ಆಗಿಬಿಟ್ಟ, ATM ಅಂತೂ ಆತನ ಕಂಡ್ರೆ ಸುಮ್ ಸುಮ್ನೆ ದುಡ್ಡು ಸುರಿತಿತ್ತು !

Millionaire: ವ್ಯಕ್ತಿಯೊಬ್ಬನ ಖಾತೆಯಲ್ಲಿ ಇದ್ದದ್ದು ಕೇವಲ 10 ಸಾವಿರ. ಆದರೆ, ಆತ ನೋಡನೋಡುತ್ತಲೇ ಕೋಟ್ಯಾಧಿಪತಿಯೇ (Millionaire) ಆಗಿಬಿಟ್ಟ, ಹೇಗಪ್ಪಾ ಅಂತಿರಾ?. ಈ ವ್ಯಕ್ತಿ ATM ಬಳಿ ಹೋದಾಗಲೆಲ್ಲಾ ಅದು ತಂತಾನೇ ದುಡ್ಡು ಸುರಿಸುತಿತ್ತು ! ಏನಿದು ಕಹಾನಿ ಅಂತ ಯೋಚನೆನಾ?! ಈ ಇಂಟೆರೆಸ್ಟಿಂಗ್ ಸ್ಟೋರಿ ಓದಿ.

 

ಕೇವಲ 10 ಸಾವಿರ ಇದ್ದವನು 9 ಕೋಟಿಯ ಸರದಾರನಾದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಅಷ್ಟಕ್ಕೂ ಹೇಗೆ ?! ಎಟಿಎಂನಲ್ಲಾದ ತಾಂತ್ರಿಕ ದೋಷದಿಂದ ಡಾನ್ ಸೌಂಡರ್ಸ್ ಎಂಬ ವ್ಯಕ್ತಿಗೆ ಬರೋಬ್ಬರಿ 9 ಕೋಟಿ ರೂಪಾಯಿ ಲಭಿಸಿದೆ.

ಇದನ್ನೂ ಓದಿ: ನಮ್ಮ ಅಭಿಮಾನಿಗಳು ರೆಡಿ ಇದ್ದಾರೆ, ನಾನು ಏನೂ ಮಾಡಬೇಡಿ ಅಂದಿದ್ದೇನೆ – ವೀರೇಂದ್ರ ಹೆಗ್ಗಡೆ ಹೇಳಿಕೆ- ಯಾವುದಕ್ಕೆ ರೆಡಿ ಇರೋದು ?!

2011 ರಲ್ಲಿ ರಾತ್ರಿ ಸುಮಾರು 12 ಗಂಟೆಯ ಹೊತ್ತಿಗೆ ಡಾನ್ ಎಟಿಎಂ ನಲ್ಲಿ ಹಣ ತೆಗೆಯಲು ಹೋಗಿದ್ದಾನೆ. ಸೌಂಡರ್ಸ್ ಇಂಟರ್ನೆಟ್ ಸಮಸ್ಯೆಯಿಂದಾಗಿ ಖಾತೆಯಿಂದ ಹಣ ತೆಗೆಯಲು ಸಾಧ್ಯವಾದರೂ ಆತನ ಖಾತೆಯಿಂದ ಹಣ ಕಡಿತವಾಗಿರಲಿಲ್ಲ. ಈ ವಿಷಯ ಆತನಿಗೆ ಗೊತ್ತಾಗಿದೆ. ಆದರೂ ಡಾನ್ ಮತ್ತೆ ಮತ್ತೆ ಎಟಿಎಂ ನಿಂದ ಹಣ ಡ್ರಾ ಮಾಡುತ್ತಲೇ ಇದ್ದ.

ಆತನ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಅವನ ಬಳಿ ಮಾತ್ರ ಎಟಿಎಂನಿಂದ ಪಡೆದ ಸಾಕಷ್ಟು ಹಣ ಇತ್ತು. ಹೀಗೇ ಎಟಿಎಂನಿಂದ ಸುಮಾರು 9 ಕೋಟಿ ರೂಪಾಯಿ ಹಣವನ್ನು ಪಡೆದಿದ್ದಾನೆ. ನಂತರ ಯಾರಿಗೂ ತಿಳಿಯದ ಹಾಗೆ ಕಳ್ಳಬೆಕ್ಕಿನ ಹೆಜ್ಜೆ ಹಾಕಿ ಅಲ್ಲಿಂದ ಪರಾರಿಯಾಗುತ್ತಿದ್ದ.

ಆತ ಮಾತ್ರ ಅಲ್ಲ ಈ ಕೃತ್ಯದಲ್ಲಿ ಆತನ ಸ್ನೇಹಿತರನ್ನು ಕೂಡ ಶಾಮೀಲು ಮಾಡಿದ್ದ. ಈ ರೀತಿ ಎಟಿಎಮ್ ನಿಂದ ಹಣ ಕಬಳಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ. ಆದರೆ, ಕೆಲವು ತಿಂಗಳು ಕಳೆದ ನಂತರ ಎಟಿಎಂ ನಲ್ಲಿ ಭಾರೀ ಮೊತ್ತದ ಹಣ ಮಾಯವಾಗುತ್ತಿರೋದು ಬ್ಯಾಂಕ್ ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಯಿತು. ದೂರನ್ನು ಪರಿಶೀಲಿಸಿದ ಪೊಲೀಸ್ ಅಧಿಕಾರಿಗಳು ಆರೋಪಿ ಡಾನ್ ನನ್ನು ಬಂಧಿಸಿದ್ದರು. 2016 ರ ವರೆಗೆ ಈ ಅಪರಾಧಕ್ಕಾಗಿ ಆತನನ್ನು ಜೈಲಿನಲ್ಲಿ ಇಡಲಾಗಿತ್ತು. ನಂತರ ಜೈಲಿನಿಂದ ಹೊರಗೆ ಬಂದು ಖಾಸಗಿ ಉದ್ಯೋಗವನ್ನು ಪ್ರಾರಂಭಿಸಿ ಅದರಿಂದ ಪ್ರಯೋಜನ ಪಡೆದುಕೊಂಡಿದ್ದಾನೆ.

ಇದನ್ನೂ ಓದಿ: ಫ್ರೀಯಾಗಿ ಓಡಾಡೋ ಮಹಿಳೆಯರೇ ಗಮನಿಸಿ ಬಸ್ ಹತ್ತಲು ನೀವಿನ್ನು 30 ರೂ ಖರ್ಚು ಮಾಡಬೇಕು !ಸರ್ಕಾರದಿಂದ ಮಹತ್ವದ ನಿರ್ಧಾರ !!

Leave A Reply

Your email address will not be published.