Traffic Rules break: ಬೈಕ್ ನ ಮುಂಭಾಗ ತಿರುಗಿ ಕುಳಿತು ಹುಡುಗನ್ನ ಬಿಗಿದಪ್ಪಿ ಸವಾರಿ ಮಾಡಿದ ಹುಡುಗಿ, ವೈರಲ್ ವೀಡಿಯೋಗೆ ಟ್ರಾಫಿಕ್ ರಿಯಾಕ್ಟ್

Latest news Traffic Rules break girl hugging a boy sitting in front of a bike has gone viral

Traffic Rules break: ರೂಲ್ಸ್ ಗಳಿರುವುದೇ ಬ್ರೇಕ್ ಮಾಡೋದಕ್ಕೆ ಎಂಬ ಫಿಲಾಸಫಿ ಯನ್ನ ಪಾಲಿಸುವವರೇ ಹೆಚ್ಚು ಮಂದಿ. ಅದರಲ್ಲಿಯೂ ಯುವ ಜನತೆಯ ಕಥೆ ಕೇಳೋದೇ ಬೇಡ. ಟ್ರಾಫಿಕ್ ರೂಲ್ಸ್( Traffic Rules break) ಗಳನ್ನ ಬ್ರೇಕ್ ಮಾಡಿ ಪೋಲೀಸರ ಕೈಯಲ್ಲಿ ತಗಾಲಾಕಿಕೊಳ್ಳುತ್ತೇವೆ ಎಂದಾಗ ಅಲ್ಲಿಂದ ಹೇಗೋ ಎಸ್ಕೇಪ್ ಆಗುವವರು ಕೂಡ ಇದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲೊಂದು , ಬೈಕ್ ನ ಮುಂಭಾಗ ತಿರುಗಿ ಕುಳಿತು ಹುಡುಗನ್ನ ಬಿಗಿದಪ್ಪಿ ಸವಾರಿ ಮಾಡುತ್ತಿರುವ ವಿಡಿಯೋ (Traffic Rules break viral video) ವೈರಲ್ ಆಗುತ್ತಿದೆ.

 

ದೆಹಲಿಯ(Delhi) ಮಂಗೋಲ್ಪುರಿ (Mangolpuri) ಹೊರವರ್ತುಲ ರಸ್ತೆಯಲ್ಲಿ ಈ ವಿಡಿಯೋ ಸೆರೆಹಿಡಿಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಬೈಕ್ ಓಡಿಸುತ್ತಿರುವವನು ಹೆಲ್ಮೆಟ್​ (Helmet) ಹಾಕಿಕೊಂಡಿದ್ಧಾನೆ ಆದರೆ ಆಕೆ ಹಾಕಿಕೊಂಡಿಲ್ಲ. ಹುಡುಗಿಯು ಬೈಕ್ ನ ಮುಂಭಾಗದಲ್ಲಿ ಕುಳಿತು ತಿರುಗಿ ಹುಡುಗನನ್ನು ಬಿಗಿದಪ್ಪಿಕೊಂಡಿದ್ದಾಳೆ ಹುಡುಗನು ಬೈಕ್ ಓಡಿಸುತ್ತಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಸಂಚಾರಿ ಪೊಲೀಸರು (Delhi traffic police) ಎಚ್ಚೆತ್ತುಕೊಂಡಿದ್ದಾರೆ. ಗಾಝಿಯಾಬಾದ್​ನ ಪೊಲೀಸರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

Buntea ಎಂಬ ಟ್ವಿಟರ್​ ಖಾತೆದಾರರು “ಈಡಿಯಟ್ಸ್​ ಆಫ್​ ದೆಹಲಿ” ಎಂಬ ಕ್ಯಾಪ್ಶನ್ ಮೂಲಕ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.ಎರಡು ದಿನಗಳ ಹಿಂದೆ ಮಾಡಿದ ಈ ಪೋಸ್ಟ್​ ಅನ್ನು 1 ಲಕ್ಷಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿದ್ದು, ಸುಮಾರು 200 ಜನರು ರೀಟ್ವೀಟ್ ಮಾಡಿದ್ದಾರೆ. ಈ ಜೋಡಿಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಸಂಚಾರಿ ಪೊಲೀಸರು, ‘ಧನ್ಯವಾದಗಳು, ಸಂಚಾರ ನಿಯಮವನ್ನು ಉಲ್ಲಂಘಿಸಿದ ವಿಡಿಯೋವನ್ನು ಟ್ರಾಫಿಕ್​ ಪೊಲೀಸ್​ ಸೆಂಟಿನೆಲ್​ ಅಪ್ಲಿಕೇಷನ್​ನಲ್ಲಿ ರಿಪೋರ್ಟ್ ಮಾಡಬೇಕೆಂಬ ವಿನಂತಿ’ ಎಂದಿದ್ದಾರೆ. ಜೊತೆಗೆ ಈ ಆ್ಯಪ್​ನ ಲಿಂಕ್​ನ್ನೂ ಅವರು ಹಂಚಿಕೊಂಡಿದ್ದಾರೆ.

 

https://t.co/d0t6GKuZS5

 

ಇದನ್ನು ಓದಿ: Tulasi Medicinal Benefit: ತುಳಸಿಯಲ್ಲಿದೆ ನಿಮ್ಮ ಶುಗರ್ – ಕೊಲೆಸ್ಟ್ರಾಲ್ ಮಾಯ ಮಾಡೋ ಶಕ್ತಿ, ಜಸ್ಟ್ ಹೀಗೆ ಮಾಡಿ ಸಾಕು ! 

Leave A Reply

Your email address will not be published.