Shakthi yojane: ಫ್ರೀಯಾಗಿ ಓಡಾಡೋ ಮಹಿಳೆಯರೇ, ಬಸ್ ಹತ್ತಲು ನೀವಿನ್ನು 30 ರೂ ಖರ್ಚು ಮಾಡಬೇಕು ?! ಸರ್ಕಾರದಿಂದ ಮಹತ್ವದ ನಿರ್ಧಾರ !!

Latest news Shakthi yojane Government t orders women to spend Rs 30 on buses for free

Shakthi yojane: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೀ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ(Shakthi yojane)ಸರ್ಕಾರ ಹೊಸ ರೂಪ ಕೊಡಲು ಮುಂದಾಗಿದ್ದು, ಇದಕ್ಕಾಗಿ ಬಸ್ಸಲ್ಲಿ ಫ್ರೀಯಾಗಿ ಓಡಾಡೋ ಮಹಿಳೆಯರಿಗೆ 30 ರೂ ಖರ್ಚು ಮಾಡಬೇಕಾಗುತ್ತದೆ.

ಹೌದು, ನೂತನ ಕಾಂಗ್ರೆಸ್ ಸರ್ಕಾರ(Congress Government)ತನ್ನ 5 ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ತುಂಬಾ ಶ್ರಮ ಹಾಕುತ್ತಿದೆ. ನುಡಿದಂತೆ ನಡೆಯಲು ಶ್ರಮಿಸುತ್ತಿದೆ. ಆದರೆ ಕೆಲವೊಂದು ಗ್ಯಾರಂಟಿಗಳಿಗೆ ಕೆಲವು ನಿಯಮಗಳನ್ನು ಹೇರುತ್ತಿದೆ. ಅಂತೆಯೇ ಇದೀಗ ಶಕ್ತಿ ಯೋಜನೆಗೆ ಇನ್ನಷ್ಟು ಶಕ್ತಿ ಕೊಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಇದೀಗ ಮಹಿಳೆಯರು ಆಧಾರ್ ಕಾರ್ಡ್(Adhar card) ಅಥವಾ ಇತರೆ ಗುರುತಿನ ಚೀಟಿ ತೋರಿಸಿ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಆದರೆ ಮುಂದೆ ಸರ್ಕಾರದ ನಿಯಮದಂತೆ ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣ ಬೆಳೆಸಬಹುದು. ಇದಕ್ಕಾಗಿ ಮಹಿಳೆಯರು 30 ರೂ ವ್ಯಯಿಸಬೇಕಾಗುತ್ತದೆ.

ಅಂದಹಾಗೆ ಸದ್ಯ ಶಕ್ತಿ ಯೋಜನೆ ಹಿನ್ನೆಲೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಪ್ರತಿ ಮಹಿಳಾ ಪ್ರಯಾಣಿಕರ ದಾಖಲೆ ಪರಿಶೀಲಿಸಿ ಟಿಕೆಟ್‌(Ticket) ನೀಡುವುದಕ್ಕೆ ಸಾಕಷ್ಟು ಸಮಯ ತಗುಲಲಿದೆ. ಹಾಗೇ ಬೇರೆ ರಾಜ್ಯದ ಮಹಿಳಾ ಪ್ರಯಾಣಿಕರಿದ್ದರೆ ಅವರಿಗೆ ಪುರುಷರಿಗೆ ನೀಡುವ ಮಾದರಿಯಲ್ಲಿ ಹಣ ಪಡೆದು ಟಿಕೆಟ್‌ ನೀಡಬೇಕಿದೆ. ಇದರಿಂದ ನಿರ್ವಾಹಕರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಅದಕ್ಕಾಗಿ ಮಹಿಳಾ ಪ್ರಯಾಣಿಕರಿಗೆ ಮಾಮೂಲಿ ಸ್ಮಾರ್ಟ್‌ಕಾರ್ಡ್‌ ಬದಲು, ಟ್ಯಾಪ್‌ ಆ್ಯಂಡ್‌ ಟ್ರಾವೆಲ್‌ ಸ್ಮಾರ್ಟ್‌ಕಾರ್ಡ್‌(Smart card) ವಿತರಿಸಲು ಚಿಂತನೆ ನಡೆಸಲಾಗಿದೆ.

ಇದನ್ನು ಓದಿ: ಧರ್ಮಸ್ಥಳ ಸೌಜನ್ಯ ಪ್ರಕರಣ: ದೂರದ ಮೈಸೂರಲ್ಲಿ ಹೋರಾಟ – ದಕ್ಷಿಣ ಕನ್ನಡದ ಶಾಸಕ, ಸಂಸದ, ಮಂತ್ರಿ, ಮಠಾಧೀಶರ ಅಸಹನೀಯ ರಣ ಮೌನ !

ಮೆಟ್ರೋ ರೀತಿ ಸ್ಮಾರ್ಟ್ ಕಾರ್ಡ್:
ಇನ್ನು ಬಂದಿರುವ ಮಾಹಿತಿ ಪ್ರಕಾರ ಮೆಟ್ರೋ ಸ್ಟೇಷನ್(Metro station) ನಲ್ಲಿ Tap And Travel ಮಾದರಿಯಲ್ಲಿ ಸ್ಮಾರ್ಟ್ ಕಾರ್ಡ್ ಗಳನ್ನು ಮಹಿಳೆಯರಿಗೆ ನೀಡಲು ಚಿಂತನೆ ನಡೆಸಿದೆ. ಇದಕ್ಕಾಗಿ ಮಹಿಳೆಯರು ಕೇವಲ 30 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಸದ್ಯದಲ್ಲೆ ಸಾರಿಗೆ ಇಲಾಖೆ ಈ ಹೊಸ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಯಿದ್ದು ಆದಷ್ಟು ಶೀಘ್ರದಲ್ಲಿಯೇ ಇದು ರಾಜ್ಯ ಸಾರಿಗೆ ವ್ಯವಸ್ಥೆಯಲ್ಲಿ ಅನುಷ್ಠಾನಕ್ಕೆ ಬಂದರೂ ಕೂಡ ಆಶ್ಚರ್ಯ ಪಡಬೇಕಾದ ಯಾವುದೇ ಅಗತ್ಯವಿಲ್ಲ.

ಇದನ್ನು ಓದಿ: Suicide: ಮಗನ ಫೀಸು ಭರಿಸಲು ಅಮ್ಮನ ತ್ಯಾಗ ; ಸತ್ತರೆ ದುಡ್ಡು ಸಿಗತ್ತೆ ಎಂದು ಬಸ್ಸಿನಡಿಗೆ ಬಿದ್ದು ಪ್ರಾಣ ಬಿಟ್ಟ ಮಹಾತಾಯಿ ! 

1 Comment
  1. MichaelLiemo says

    ventolin evohaler: buy albuterol inhaler – buy ventolin in mexico
    ventolin 4mg tab

Leave A Reply

Your email address will not be published.