Congress Guarantee: ಗ್ಯಾರಂಟಿ ಜನರಿಗೆ ಮಾತ್ರ ಅಲ್ಲ, ಹಂಚಿದವರಿಗೂ ಇದೆ ಗ್ಯಾರಂಟಿ ಗಿಫ್ಟ್ !

latest news political news Congress Guarantee schemes new updates

Congress Guarantee: ರಾಜ್ಯದಲ್ಲಿ ಕಾಂಗ್ರೆಸ್ (congress) ಅಧಿಕಾರದ ಚುಕ್ಕಾಣಿ ಹಿಡಿದಿದೆ. ಐದು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಲವು ಗ್ಯಾರಂಟಿಗಳನ್ನು (Congress Guarantee) ಜಾರಿಗೆ ತಂದು ಘೋಷಣೆ ಮಾಡಿದೆ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ (Congress 5 Guarantee) ಪೈಕಿ ಈಗಾಗಲೇ ಜಾರಿಯಾಗಿರುವ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಕೂಡ ವ್ಯಕ್ತವಾಗಿದೆ.

 

ಕಾಂಗ್ರೆಸ್ ಚುನಾವಣೆ ಹೊತ್ತಲ್ಲಿ, ಗೃಹಜ್ಯೋತಿ 200 ಯೂನಿಟ್ ಉಚಿತ ವಿದ್ಯುತ್, ಪ್ರತೀ ಮನೆಗೆ ಗೃಹಲಕ್ಷ್ಮೀಯರಿಗೆ 2000, ಅನ್ನಭಾಗ್ಯ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ, ಯುವನಿಧಿ ನಿರುದ್ಯೋಗ ಭತ್ಯೆ 3 ಸಾವಿರ ಪದವೀಧರರಿಗೆ, 1,500 ಡಿಪ್ಲೊಮಾ ಪದವೀಧರರಿಗೆ, ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ (ಶಕ್ತಿ ಯೋಜನೆ) ಎಂಬ ಐದು ಗ್ಯಾರಂಟಿ (Congress 5 guarantee) ಘೋಷಿಸಿದೆ.

ಸದ್ಯ ಈ ಗ್ಯಾರಂಟಿ ಗಳು ಜಾರಿಯಾಗುತ್ತಲಿದೆ. ಆದರೆ, ಗ್ಯಾರಂಟಿ ಜನರಿಗೆ ಮಾತ್ರ ಅಲ್ಲ, ಹಂಚಿದವರಿಗೂ ಇದೆ ಗ್ಯಾರಂಟಿ ಗಿಫ್ಟ್. ಹೌದು, ಒಂದು ಪ್ರದೇಶದಲ್ಲಿ ಅತಿ ಹೆಚ್ಚು ಮನೆಗಳನ್ನು ಸಂಪರ್ಕಿಸಿ ಗ್ಯಾರಂಟಿ ಕಾರ್ಡ್‌ (Guarantee card) ತಲುಪಿಸಿದ ಕಾರ್ಯಕರ್ತರಿಗೆ ಗಿಫ್ಟ್‌ ನೀಡುವುದಾಗಿ (Gift to Congress workers) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಆಂತರಿಕವಾಗಿ ಹೇಳಿದ್ದರು. ಇದೀಗ ನುಡಿದಂತೆ ಡಿಕೆಶಿ ನಡೆದಿದ್ದಾರೆ. ಗಿಫ್ಟ್ ಕಾರ್ಯಕರ್ತರ ಮನೆಗೆ ಕಾಲಿಡುತ್ತಿದೆ.

ಚಾಮರಾಜ ನಗರ ಜಿಲ್ಲೆಯ ಹನೂನು ವಿಧಾನಸಭಾ ಕ್ಷೇತ್ರದಲ್ಲಿ (Hanur Assembly Constituency) ಅತಿ ಹೆಚ್ಚು ಮನೆಗಳನ್ನು ಸಂಪರ್ಕಿಸಿ ಗ್ಯಾರಂಟಿ ಕಾರ್ಡ್‌ಗಳನ್ನು ತಲುಪಿಸಿದ 10 ಮಂದಿ ಕಾರ್ಯಕರ್ತರ ಮನೆಗೆ ಚುನಾವಣೆ ಮುಗಿದ ಒಂದು ತಿಂಗಳ ಒಳಗಾಗಿ ಟಿವಿ ಗಿಫ್ಟ್ ನೀಡುವುದಾಗಿ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ತಮ್ಮ ಮಾತಿನಂತೆ ಗಿಫ್ಟ್ ರೂಪದಲ್ಲಿ ಟಿವಿಯನ್ನು ತಲುಪಿಸಲಾಗಿದೆ. ಇನ್ನು ಕಾರ್ಯಕರ್ತರು ಗ್ಯಾರಂಟಿ ತಲುಪಿಸಿದ ತಮ್ಮ ಶ್ರಮಕ್ಕೆ ಫಲ ಸಿಕ್ಕಿತು ಎಂದು ಖುಷಿ ಪಟ್ಟಿದ್ದಾರೆ.

 

ಇದನ್ನು ಓದಿ: Traffic Rules break: ಬೈಕ್ ನ ಮುಂಭಾಗ ತಿರುಗಿ ಕುಳಿತು ಹುಡುಗನ್ನ ಬಿಗಿದಪ್ಪಿ ಸವಾರಿ ಮಾಡಿದ ಹುಡುಗಿ, ವೈರಲ್ ವೀಡಿಯೋಗೆ ಟ್ರಾಫಿಕ್ ರಿಯಾಕ್ಟ್ 

Leave A Reply

Your email address will not be published.