iPhone: ನಿಮ್ಮಲ್ಲೂ ಉಂಟಾ ಈ ಹಳೆಯ ಮೊಬೈಲ್ ?, ಹಾಗಿದ್ರೆ ನೀವು ಕೋಟ್ಯಾಧಿಪತಿ ಆಗೋದು ಪಕ್ಕಾ !

Latest news iPhone have this old mobile you will surely become a millionaire

iPhone: ಐಫೋನ್ ಕ್ರೇಜ್ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಇದು ಟಾಪ್ ಬ್ರಾಂಡ್ ಕಂಪನಿಯ ಫೋನ್ ಆಗಿದ್ದು ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಈಗಾಗಲೇ ಐಫೋನ್ ಹಲವಾರು ಸರಣಿಗಳನ್ನು ಬಿಡುಗಡೆ ಮಾಡಿ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಐಫೋನ್ ನ ಕ್ರೇಜ್ ಎಷ್ಟರಮಟ್ಟಿಗೆ ಇದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಇದೀಗ ಐಫೋನ್ನ ಹಳೆಯ ಮಾಡೆಲ್ ತನ್ನ ಅಸಲಿ ಬೆಲೆಗಿಂತಲೂ ಬರೊಬ್ಬರಿ 318 ಪಟ್ಟು ಹೆಚ್ಚು ಬೆಲೆಯಲ್ಲಿ ಮಾರಾಟವಾಗಿದೆ. ನಿಮ್ಮ ಬಳಿಯೂ ಈ ಹಳೆಯ ಮೊಬೈಲ್ ಇದೆಯಾ? ಇದ್ದರೆ ನೀವು ಕೋಟ್ಯಾಧೀಶರಾಗುವುದಂತು ಪಕ್ಕಾ..!

ಹೌದು, ಆಪಲ್ ಕಂಪನಿಯ ಮೊದಲನೇ ತಲೆಮಾರಿನ ಐಫೋನ್ ಕೋಟಿ ರೂಪಾಯಿಗೆ ಹರಾಜ್ ಆಗಿದೆ. 2007ರ ಮಾಡೆಲ್ ಇದಾಗಿದ್ದು, ಸೀಲ್ಡ್ ಪ್ಯಾಕ್ನಲ್ಲಿದ್ದ ಐಫೋನ್ 4 (iPhone 4) ಅನ್ನು 1.3 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಈ ಫೋನ್ ಅಸಲಿ ಬೆಲೆಗಿಂತ 318 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿರೋದು ಇದರ ಸ್ಪೆಷಾಲಿಟಿ. ಇದು LCG ಹರಾಜಿನಿಂದ ಹರಾಜಾದ ಅತ್ಯಂತ ಅಪರೂಪದ ಮಾದರಿ ಎಂದರೆ ತಪ್ಪಾಗಲಾರದು.

ಕೋಟ್ಯಾಂತರ ಬೆಲೆಗೆ ಹರಾಜಾದ ಐಫೋನ್ 4 4GB ಮಾಡೆಲ್ ಆಗಿದೆ. ಮಾರಾಟವಾದ ಐಫೋನ್ ಆಪಲ್‌ ಇದನ್ನು ಕಂಪನಿ ಕೆಲವೇ ತಿಂಗಳುಗಳವರೆಗೆ ಉತ್ಪಾದಿಸಿತ್ತು. ಈ ಐಫೋನ್ 4 ಅನ್ನು ಜೂನ್‌ನಲ್ಲಿ ಹರಾಜಿಗೆ ಹಾಕಲಾಯಿತು. ಫೋನ್‌ಗಾಗಿ ಬೆಟ್ಟಿಂಗ್ (betting) ಜೂನ್ 30 ರಂದು ಪ್ರಾರಂಭವಾಗಿತ್ತು,.ಆರಂಭಿಕ ಬೆಲೆ 8,21,050 ರೂಪಾಯಿ ಇತ್ತು. ಅಂತಿಮವಾಗಿ 1,30,23,958 ರೂಪಾಯಿಗೆ ಫೋನ್ ಹರಾಜಾಗಿದೆ.

ಐಫೋನ್ 4 ಅನ್ನು ಕಂಪನಿಯು 2 ರೂಪಾಂತರಗಳಲ್ಲಿ ಬಿಡುಗಡೆ ಮಾಡಿತ್ತು. ಅದರಲ್ಲಿ 4GB ಮತ್ತು ಇನ್ನೊಂದು 8GB ಆಯ್ಕೆ ಇತ್ತು. ಐಫೋನ್ 4, 4GB ಮಾಡೆಲ್ ಆಗಿದ್ದು , ಇದು 3.5-ಇಂಚಿನ ಡಿಸ್‌ಪ್ಲೇ ಹೊಂದಿದೆ. 1420 mAh ಬ್ಯಾಟರಿ, 5MP ಬ್ಯಾಕ್ ಕ್ಯಾಮೆರಾ ಮತ್ತು 0.3MP ಫ್ರಂಟ್ ಕ್ಯಾಮರಾ ಇದರಲ್ಲಿದೆ. ಈ ಮಾಡೆಲ್ ಭಾರತಕ್ಕೆ ಬಂದಿದ್ದು 2010 ರಲ್ಲಿ. ಇದರ ಚಿಕ್ಕ ಡಿಸ್‌ಪ್ಲೇ ಮತ್ತು ಕಾಂಪ್ಯಾಕ್ಟ್ ಗಾತ್ರದ ಕಾರಣದಿಂದಾಗಿ ಜನರು ಹೆಚ್ಚು ಇಷ್ಟಪಟ್ಟಿದ್ದರು. iPhone 4 ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.

 

ಇದನ್ನು ಓದಿ: Shakti Yojane effect: ಟೋಲ್ ಕಟ್ಟಲು ದುಡ್ಡಿಲ್ಲದೆ, ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಕೆಎಸ್ಆರ್ಟಿಸಿ ಬಸ್ ವಾಪಸ್ !

Leave A Reply

Your email address will not be published.