Viral News: ಹಸಿ ಮೀನು, ಮಳೆ ನೀರು ಸೇವಿಸಿ ಸಮುದ್ರದಲ್ಲಿ ನಾಯಿ ಜತೆ 60 ದಿನ ; ಕಾಸ್ಟ್‌ ಅವೇ ಸಿನಿಮಾ ನೆನಪಿಸಿದ ಘಟನೆ !

Viral News : ಮನುಷ್ಯನಿಗೆ ಬದುಕೋದಕ್ಕೆ ಆಹಾರ ತುಂಬಾನೇ ಮುಖ್ಯ. ಆಹಾರವಿಲ್ಲದೆ ಮನುಷ್ಯ ಜೀವಂತವಾಗಿರಲ್ಲ. ಆದರೆ, ಇಲ್ಲೊಬ್ಬ ವ್ಯಕ್ತಿ ಸಮುದ್ರದಲ್ಲಿ 60 ದಿನ ಕೇವಲ ಹಸಿ ಮೀನು ಮತ್ತು ಮಳೆ ನೀರು ಸೇವಿಸಿ ಬದುಕಿದ್ದಾನೆ. ಅವನು ಮಾತ್ರ ಅಲ್ಲ, ಜೊತೆಗೆ ನಾಯಿ ಕೂಡ ಇತ್ತು. ಈ ಘಟನೆಯ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾಸ್ಟ್‌ ಅವೇ ಸಿನಿಮಾ ನೆನಪಿಸಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ಸಮುದ್ರದಲ್ಲಿ ಏನು ಮಾಡುತ್ತಿದ್ದ? 60 ದಿನ ಅಲ್ಲೇ ಉಳಿದದ್ದಾದರೂ ಯಾಕೆ?! ಇಲ್ಲಿದೆ ಓದಿ ಇಂಟೆರೆಸ್ಟಿಂಗ್ ಮಾಹಿತಿ (Viral News).

 

ಆಸ್ಟ್ರೇಲಿಯಾದ (Austrelia) ವ್ಯಕ್ತಿ ಟಿಮ್‌ ಶಾಡಾಕ್‌ (51) ಎಂಬವರು ತಮ್ಮ ಸಾಕು ನಾಯಿ ಬೆಲ್ಲಾನೊಂದಿಗೆ ಮೆಕ್ಸಿಕೊದ ಲಾ ಪಾಜ್‌ದಿಂದ ಫ್ರಾನ್ಸ್‌ನ ಫಾಲಿನೇಷ್ಯಾಗೆ 6,000 ಕಿ.ಮೀ. ಸಮುದ್ರ ಪ್ರಯಾಣವನ್ನು ಕೈಗೊಂಡಿದ್ದರು. ಆದರೆ, ದುರಾದೃಷ್ಟವಶಾತ್ ಪ್ರತಿಕೂಲ ಹವಾಮಾನದ ಕಾರಣ ಅವರು ಪ್ರಯಾಣಿಸುತ್ತಿದ್ದ ಹಡಗು ಸಮುದ್ರ ಮಧ್ಯದಲ್ಲೇ ಕೆಟ್ಟುಹೋಯಿತು. ಈ ಕಾರಣದಿಂದಾಗಿಯೇ ಆತ ಪೆಸಿಫಿಕ್‌ ಸಾಗರದಲ್ಲಿ ಕಾಲ ಕಳೆಯುವಂತಾಯಿತು.

 

ಸುತ್ತಲೂ ನೀರು ತುಂಬಿದ್ದು ಸಹಾಯಕ್ಕಾಗಿ ಯಾರೂ ಇಲ್ಲದಿದ್ದಾಗ ಸಮುದ್ರದಲ್ಲೇ ಉಳಿದರು. ಸುಮಾರು 60 ಕ್ಕೂ ಹೆಚ್ಚು ದಿನಗಳ ಕಾಲ ಟಿಮ್ ಕೇವಲ ಸಮುದ್ರದಲ್ಲಿ ಸಿಕ್ಕ ಹಸಿ ಮೀನು ಹಾಗೂ ಮಳೆಯ ನೀರನ್ನು ಸೇವಿಸಿ ಬದುಕಿದರು. ಅವರ ಜೊತೆಗೆ ಸಾಕು ನಾಯಿ ಬೆಲ್ಲಾ ಕೂಡ ಜೊತೆಯಾಗಿ ಅಷ್ಟೂ ದಿನಗಳವರೆಗೂ ಇತ್ತು. ಸೂರ್ಯನ ತಾಪದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಡಗಿನ ಚಾವಣಿಯನ್ನು ಆಶ್ರಯಿಸಿದರು.

 

ಹೇಗೋ ಕೊನೆಗೂ ಜು.12 ರಂದು ಕಣ್ಗಾವಲು ಹೆಲಿಕಾಪ್ಟರ್‌ ಇವರನ್ನು ಪತ್ತೆ ಮಾಡಿದೆ. ಸಮುದ್ರದಲ್ಲಿದ್ದ ಇವರನ್ನು ರಕ್ಷಿಸಿದೆ. ನಂತರ ಟಿಮ್‌ ಮತ್ತು ಬೆಲ್ಲಾನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇವರನ್ನು ಪರಿಶೀಲಿಸಿದ ವೈದ್ಯರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

 

ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈತ ಹಸಿ ಮೀನು, ಮಳೆ ನೀರು ಸೇವಿಸಿ ಸಮುದ್ರದಲ್ಲಿ ನಾಯಿ ಜತೆ ಬರೋಬ್ಬರಿ ಎರಡು ತಿಂಗಳು ಕಳೆದಿರುವ ಈ ಘಟನೆಯು ‘ಕಾಸ್ಟ್‌ ಅವೇ’ ಸಿನಿಮಾವನ್ನು ನೆನಪಿಸಿದೆ ಎಂದು ಹಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ !ಇನ್ನು ಬಸ್ಸಲ್ಲಿ ಮಾತ್ರವಲ್ಲ, ರೈಲಿನಲ್ಲೂ ಸಿಗಲಿದೆ ಫ್ರೀ ಸರ್ಕಾರದ ಮಹತ್ವದ ಘೋಷಣೆ !!

Leave A Reply

Your email address will not be published.