Vatal Nagaraj: ಪುರುಷರಿಗೂ ಉಚಿತ ಬಸ್, ಖಾತೆಗೆ 2000 ರೂ., ದನ ಕಾಯೋರಿಗೆ 1,000 ರೂಪಾಯಿ ? ಎಲ್ಲಿಂದ ಬಂತು ಈ ಐಡಿಯಾ ?
latest news political news Vatal Nagaraj demanded that men should be given Grilahakshmi too
Vatal Nagaraj: ಕಾಂಗ್ರೆಸ್ ಸರ್ಕಾರ(Congress government) ಜಾರಿಗೊಳಿಸಿರುವ ಗ್ಯಾರಂಟಿಗಳ(Congress guarantee) ಪೈಕಿ ಗೃಹಲಕ್ಷ್ಮಿ ಯೋಜನೆಯು(Gruha Lakshmi scheme) ಒಂದು. ಈ ಯೋಜನೆಯಿಂದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಮಾಸಿಕ ಹಣ ಸಿಗುತ್ತದೆ. ಅತ್ತೆ ಅಥವಾ ಸೊಸೆ ಸೇರಿದಂತೆ ಮನೆಯ ಓರ್ವ ಯಜಮಾನಿಗೆ 2000 ರೂಪಾಯಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈಗಾಗಲೇ ನಾರಿ ಮಣಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಈಗ ಈ ಯೋಜನೆ ಬಗ್ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಪ್ರತಿಕ್ರಿಯಿಸಿದ್ದು ಪುರುಷರಿಗೂ ಗೃಹಲಕ್ಷ್ಮಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ(Bengaluru) ಮಾತನಾಡಿದ ಇವರು, ನಾನು ಹೆಣ್ಣು ಮಕ್ಕಳ ಪರ. ಆದರೆ, ಗಂಡು ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ 2,000 ರೂ. ನೀಡುವುದಾದರೆ ಯಜಮಾನನಿಗೂ ರಾಜ್ಯ ಸರ್ಕಾರ 2000 ರೂಪಾಯಿ ಕೊಡಬೇಕು. ಗಂಡ ಹೆಂಡತಿ, ಯಜಮಾನ ಯಜಮಾನಿಗೆ ಜಗಳ ತಂದಿಡೋದು ಸರಿಯಲ್ಲ ಅಂತ ಅವರು ಹೇಳಿದ್ದಾರೆ.
ಗೌರವಯುತವಾಗಿ ಕೇಳ್ತೀನಿ ಯಜಮಾನನಿಗೂ ಕೊಡಬೇಕು, ಅವರನ್ನೂ ಕಡೆಗಣಿಸಲು ಸಾಧ್ಯವಿಲ್ಲ. ಯಜಮಾನಿಗೆ 2 ಸಾವಿರ ಬಂದರೆ ಯಜಮಾನನ ಕಥೆ ಏನು ಅಂತ ವಾಟಾಳ್ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು(CM Siddaramaiah ) ತಾರತಮ್ಯ ಮಾಡುತ್ತಿದ್ದಾರೆ. ಬಜೆಟ್ ಮೇಲಿನ ಚರ್ಚೆಗೆ ಉತ್ತರ ಕೊಡುವಾಗ ಯಜಮಾನ, ಯಜಮಾನಿ ಇಬ್ಬರಿಗೂ ಎರಡೆರಡು ಸಾವಿರ ಕೊಡಬೇಕು. ಬಸ್ನಲ್ಲೂ ಉಚಿತ ಪ್ರಯಾಣ ಕೊಟ್ಟಿದ್ದೀರ, ಇದನ್ನ ನೋಡಿದರೆ ಪುರುಷರ (Men) ಮೇಲೆ ಏನೊ ದ್ವೇಷ ಇದ್ದಂತಿದೆ ಎಂದಿದ್ದಾರೆ.
ಶಾಸಕರಾದ ಯತ್ನಾಳ್ (Basangouda patil yatnal) ಮತ್ತು ಶಿವಲಿಂಗೇಗೌಡರು(Shivalinge Gowda) ಈ ಬಗ್ಗೆ ಕೇಳುತ್ತಾರೆ ಅಂದುಕೊಂಡಿದ್ದೆ. ಅವರು ಕೇಳದ ಕಾರಣ ನಾನೇ ಮುಖ್ಯಮಂತ್ರಿ ಅವರಿಗೆ ಕೇಳುತಿದೇನೆ. ಪುರುಷರಿಗೂ ಸ್ತ್ರೀಯರಂತೆ ಯೋಜನೆಗಳು ಜಾರಿಯಾಗಬೇಕು. ಗಂಡು ಮಕ್ಕಳಿಗೂ ಉಚಿತ ಬಸ್, 2000 ರೂ ನೀಡುವಂತೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಪದವೀಧರ ಯುವಕರಿಗೆ ಯುವ ನಿಧಿ ಯೋಜನೆ (Yuva nidhi scheme) ಜಾರಿಗೊಳಿಸಿದ್ದೀರಿ, ಆದರೆ ಹಳ್ಳಿಯಲ್ಲಿ ಎಮ್ಮೆ ಕಾಯೋ, ಕುರಿ ದನ ಕಾಯೋ ಹುಡುಗರ ಕಥೆ ಏನಾಗಬೇಕು? ವಿದ್ಯಾವಂತರಿಗೆ ಹಣ ನೀಡಿದಂತೆ, ಕುರಿ ದನ ಎಮ್ಮೆ ಕಾಯೋ ಯುವಕರಿಗೆ ಕನಿಷ್ಟ ಒಂದು ಸಾವಿರ ಆದರೂ ಕೊಡಬೇಕು ಎಂದು ವಾಟಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಇದನ್ನು ಓದಿ: Daily Horoscope: ಈ ರಾಶಿಯವರಿಗೆ ಇಂದು ಅಗತ್ಯಕ್ಕೆ ಆಪ್ತ ಸ್ನೇಹಿತರ ಸಹಾಯ, ಸಹಕಾರ ದೊರೆಯಲಿದೆ!