Indian railway: ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ !! ಇನ್ನು ಬಸ್ಸಲ್ಲಿ ಮಾತ್ರವಲ್ಲ, ರೈಲಿನಲ್ಲೂ ಸಿಗಲಿದೆ ಫ್ರೀ- ಸರ್ಕಾರದ ಮಹತ್ವದ ಘೋಷಣೆ !!
Latest news free scheme Govt announcement Free travel is available not only in bus also in train
‘ಶಕ್ತಿ ಯೋಜನೆ'(Shakthi yojane)ಯಡಿ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಬಸ್ ಪ್ರಯಾಣ(Free bus travel) ಸಿಗುತ್ತಿದ್ದು, ಮಹಿಳೆಯರು ಈ ಪ್ರಯೋಜನವನ್ನು ಶಕ್ತಿ ಮೀರಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಈ ನಡುವೆ ಎಲ್ಲಾ ಪ್ರಯಾಣಿಕರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಒಂದು ಬಂದಿದ್ದು, ರೈಲಿನಲ್ಲೂ ಕೆಲವು ಉಚಿತ ಸೌಲಭ್ಯಗಳು ದೊರೆಯಲಿವೆ.
ಹೌದು, ಇತ್ತೀಚಿಗಷ್ಟೇ ರೈಲ್ವೆ ಟಿಕೆಟ್ ದರದಲ್ಲಿ ಇಲಾಖೆಯು ಇಂತಿಷ್ಟು ರಿಯಾಯಿತಿ ನೀಡಿ, ದರವನ್ನು ಕಡಿತ ಮಾಡಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ಕೊಟ್ಟಿತ್ತು. ಇದರ ನಡುವೆಯೇ ಇತ್ತೀಚಿಗೆ ರೈಲು ಪ್ರಯಾಣಿಕರಿಗಾಗಿ ರೈಲಿನಲ್ಲಿ ಕೆಲವೊಂದು ಹೊಸ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗ್ತಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
• ನಿರೀಕ್ಷಣಾ ಕೊಠಡಿಯ ಸೌಲಭ್ಯ:
ರೈಲು ನಿಲ್ದಾಣದಲ್ಲಿ ಕೆಲವೊಮ್ಮೆ ತಮಗೆ ಬೇಕಾದ ರೈಲಿಗಾಗಿ ಕಾಯುವುದೇ ಒಂದು ಹರಸಾಹಸವಾಗಿದೆ. ಅದೆಷ್ಟೋ ಬಾರಿ ರೈಲು ತುಂಬಾ ತಡವಾಗಿ ಸ್ಟೇಷನ್(Railway station)ತಲುಪುತ್ತದೆ. ಹೀಗಾದಾಗ ಬಿಸಿಲಿದ್ದರೂ, ಮಳೆಯಿದ್ದರೂ ಜನರು ಫ್ಲಾಟ್‌ಫಾರಂನಲ್ಲೇ(Platform) ಕುಳಿತು ಕಾಯಬೇಕಾಗುತ್ತದೆ. ಆದರೆ ಇಂಥಾ ಸಂದರ್ಭದಲ್ಲಿ ನೀವು ವೈಟಿಂಗ್ ರೂಮ್‌ನ ಸದುಪಯೋಗ ಪಡೆದುಕೊಳ್ಳಬಹುದು. ಈ ನಿರೀಕ್ಷಣಾ ಕೊಠಡಿಯ ಸೌಲಭ್ಯವನ್ನು ನೀವು ಉಚಿತವಾಗಿಯೇ ಪಡೆಯಬಹುದು.
• ವೈದ್ಯಕೀಯ ಸೌಲಭ್ಯವೂ ಉಚಿತ:
ಪ್ರಯಾಣಿಕರಿಗಾಗಿ ಉಚಿತ ವೈದ್ಯಕೀಯ ಸೌಲಭ್ಯವನ್ನು(Medical facility)ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರಯಾಣದ ಸಮಯದಲ್ಲಿ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಕಾಣಿಸಿಕೊಂಡಲ್ಲಿ ಭಾರತೀಯ ರೈಲ್ವೆ ಪ್ರಥಮ ಚಿಕಿತ್ಸೆ ಸೌಲಭ್ಯವನ್ನು ಒದಗಿಸಲಿದೆ.
• ಕ್ಲೋಕ್ ರೂಮ್ ಸೌಲಭ್ಯ:
ಪ್ರಯಾಣದ ಸಂದರ್ಭ ಕೆಲವೊಮ್ಮೆ ಅನಿವಾರ್ಯವಾಗಿ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಹೀಗಾದಾಗ ವಸ್ತು ಕಳೆದು ಹೋಗುತ್ತದೆ ಎಂಬ ಭಯ ಹೆಚ್ಚಾಗಿ ಕಾಡುತ್ತದೆ. ಇಂಥಾ ಸಂದರ್ಭದಲ್ಲಿ ನಿಮ್ಮ ಬಳಿಯಿರುವ ಪ್ರಮುಖ ವಸ್ತುಗಳನ್ನು ಕ್ಲೋಕ್ ರೂಮ್ ನಲ್ಲಿ ಕಡಿಮೆ ಶುಲ್ಕವನ್ನು ಪಾವತಿಸಿ ಇಟ್ಟುಕೊಳ್ಳಬಹುದು.
• ಉಚಿತ ವೈ ಫೈ ಸೌಲಭ್ಯ
ರೈಲು ಪ್ರಯಾಣಿಕರಿಗಾಗಿ ರೈಲ್ವೆ ಪ್ಲಾಟ್ ಫಾರಂ ನಲ್ಲಿ ಉಚಿತ ವೈ ಫೈ(Wi-fi)ಸೌಲಭ್ಯ ಸಿಗಲಿದೆ. ಅರ್ಧ ಗಂಟೆಯ ವರೆಗೆ ಪ್ರಯಾಣಿಕರು ಈ ಉಚಿತ ವೈಫೈ ಅನ್ನು ಬಳಸಬಹುದಾಗಿದೆ. ನೀವು ಹಗಲಿನ ಸಮಯದಲ್ಲಿ ರೈಲು ಆಗಮನದ 2 ಗಂಟೆಗಳ ಮೊದಲು ಮತ್ತು ಪ್ರಯಾಣದ ಅಂತ್ಯದ 2 ಗಂಟೆಗಳ ನಂತರ ಕಾಯುವ ಕೋಣೆಯನ್ನು ಉಚಿತವಾಗಿ ಬಳಸಬಹುದು. ರಾತ್ರಿಯ ಸಮಯದಲ್ಲಿ 6 ಗಂಟೆಗಳ ಕಾಲ ಉಚಿತ ಕೊಠಡಿಯ ಸೌಲಭ್ಯವನ್ನು ಪಡೆಯಬಹುದು.
ಇದನ್ನು ಓದಿ: ಲೋಕಸಭಾ ಚುನಾವಣೆ : NDA ಗೆ ಟಕ್ಕರ್ ಕೊಡಲು INDIA ರಚನೆ