Forest department: ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡ ರೈತರಿಗೆ ಭರ್ಜರಿ ಗುಡ್ ನ್ಯೂಸ್ !! ಹೀಗೆ ಮಾಡಿದ್ರೆ ಆ ಜಾಗ ಇನ್ನು ನಿಮ್ಮದೆ
Latest news Forest department Good news for farmers encroached on forest land
Forest department: ಮನೆ ಕಟ್ಟಲು, ಉಳುಮೆ ಮಾಡಲು ಸ್ವಂತ ಜಮೀನು ಇಲ್ಲದೆ ಅರಣ್ಯ ಇಲಾಖೆಯ ಭೂಮಿಯನ್ನು(Forest department land)ಒತ್ತುವರಿ ಮಾಡಿಕೊಂಡಿರುವವರು ಸದ್ಯ ಹಕ್ಕು ಪತ್ರದ ವಿಚಾರವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಆದರೀಗ ಅಂತವರಿಗೆ ರಾಜ್ಯ ಸರ್ಕಾರ(State Government)ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.
ಹೌದು, ರಾಜ್ಯದ ಕೆಲ ಭಾಗಗಳಲ್ಲಿ ಕೆಲವರು ಮನೆ ಕಟ್ಟಲು ಜಾಗ ಇಲ್ಲದೆ, ಉಳುಮೆ ಮಾಡಲು ಸ್ವಂತ ಜಮೀನು ಇಲ್ಲದೆ ಸರ್ಕಾರದ ಅಥವಾ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಜಾಗದಲ್ಲಿ ಉಳುಮೆ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದು ಇದರಿಂದಾಗಿ ಹಕ್ಕು ಪತ್ರದ ವಿಚಾರವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೀಗ ಇಂತವರಿಗೆ ಅರಣ್ಯ ಮತ್ತು ಪರಿಸರ ಖಾತೆಯ ಸಚಿವ ಈಶ್ವರ್ ಖಂಡ್ರೆ(Eshwar khandre) ಸಿಹಿ ಸುದ್ದಿ ಕೊಟ್ಟಿದ್ದಾರೆ.
ಏನು ಆ ಶುಭಸುದ್ದಿ?
ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿದ್ದವರು ಹಾಗೂ ಉಳುಮೆ ಮಾಡಿದವರು ಇನ್ನು ಮುಂದೆ ಚಿಂತಿಸುವ ಪ್ರಮೇಯ ಬರಲಾರದು. ಯಾಕೆಂದರೆ ಅರಣ್ಯ ಪ್ರದೇಶದ ಹಕ್ಕು ಪತ್ರ ಸಮಸ್ಯೆ ಬಗೆಹರಿಸಲು ಸರಕಾರ ತೀರ್ಮಾನ ಕೈಗೊಂಡಿದ್ದಾಗಿ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ (Eshwar kandre) ಅವರು ಈ ಬಗ್ಗೆ ಮಾತಾಡಿದ್ದಾರೆ. ಈ ಮೂಲಕ ಜಾಗದ ಸಮಸ್ಯೆ ಬಗೆಹರಿಸಲು ಸರಕಾರ ಸರ್ವ ರೀತಿಯ ಪ್ರಯತ್ನದಲ್ಲಿ ಸಾಗಿದ್ದು, ಅರಣ್ಯ ಮತ್ತು ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ಭೂಮಿಯ ಸಮೀಕ್ಷೆ ನಡೆಸಲು ಈಗಾಗಲೇ ಕಂದಾಯ ಸಚಿವರೊಂದಿಗೆ ಕೂಡ ಮಾತುಕತೆ ಮಾಡಲಾಗಿದೆ. ಜಾಗದ ಗಡುವು, ತೆರವು ಹಾಗೂ ಹಕ್ಕು ಪತ್ರದ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಚಿವರು ಮಾಧ್ಯಮದ ಮುಂದೆ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇಂತವರ ಅರ್ಜಿ ಪರಿಶೀಲನೆ:
1980ಕ್ಕಿಂತ ಮೊದಲಿನಿಂದಲೂ, 3 ಎಕರೆಗಿಂತ ಕಡಿಮೆ ಪ್ರದೇಶದಲ್ಲಿ ಉಳುಮೆ ಮಾಡುತ್ತಿರುವ ಮತ್ತು ಮನೆ ಕಟ್ಟಿಕೊಂಡು ಮೂರು ತಲೆಮಾರಿನಿಂದ ವಾಸಿಸುತ್ತಿರುವವರಿಗೆ ಮಾತ್ರ ಪರಿಹಾರ ಒದಗಿಸುವುದಕ್ಕೆ ಸರ್ಕಾರ ಮುಂದಾಗಿದ್ದು, ಈ ಸಂಬಂಧ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಿದ್ದರೆ ಅಂತವರ ಅರ್ಜಿಯನ್ಧು ಪರಿಶೀಲಿಸಿ ಎಂದು ಸಚಿವರು ಸೂಚಿಸಿದ್ದಾರೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಾ ಹಕ್ಕುಪತ್ರದ ಕಾರಣಕ್ಕೆ ಸಂಕಷ್ಟ ಎದುರಿಸುತ್ತಿರುವ ಕೃಷಿಕರಿಗೆ ಶುಭ ಸುದ್ದಿ ಕೇಳಿ ಬರಲಿದೆ.
ಇದನ್ನು ಓದಿ: Sitara Ghattamaneni: 11 ವರ್ಷದ ಈ ಹುಡುಗಿಯ ಮೊದಲ ಸಂಬಳ ಕೇಳಿದ್ರೆ ನೀವ್ ಉರ್ಕೊಳ್ಳದೆ ಇರಲು ಸಾಧ್ಯವೇ ಇಲ್ಲ !