Chandrayana -3: ವಿಮಾನದಿಂದ ಸೆರೆಯಾದ ಚಂದ್ರಯಾನ !! ಉಡಾವಣೆಯ ಬ್ಯೂಟಿಫುಲ್ ವಿಡಿಯೋ ವೈರಲ್ !!

Latest national news video chandrayan 3 lift off recorded from plane window

Chandrayana -3: ಮೊನ್ನೆ ತಾನೆ ಭಾರತ(India)ಚಂದ್ರಯಾನ-3ರ (Chandrayana-3) ಮೊದಲ ಹಂತವನ್ನು ಯಶಸ್ವಿಯಾಗಿ ನೆರವೇರಿಸಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಈ ಅದ್ಭುತ ಗಳಿಗೆಯ ಬ್ಯೂಟಿಫುಲ್ ದೃಶ್ಯವೊಂದು ವಿಮಾನದ ಕಿಟಕಿಯಿಂದ ಸೆರೆರಾಗಿದ್ದು ಭಾರೀ ವೈರಲ್ ಆಗ್ತಿದೆ.

ಹೌದು, ಭಾರತದ ಬಹುಕನಸಿನ ಚಂದ್ರಯಾನ-3ರ ಯೋಜನೆ ಉಡಾವಣಾ ಕ್ಷಣವನ್ನು ಇಡೀ ಪ್ರಪಂಚವೇ ಕಣ್ತುಂಬಿಸಿಕೊಂಡಿತ್ತು. ಇಡೀ ದೇಶವೇ ಈ ಕ್ಷಣವನ್ನು ಕಣ್ಣಾರೆ ಕಂಡು ದೇಶದ ಸಾಧನೆಯನ್ನು ಹೆಮ್ಮೆಯಿಂದ ಖುಷಿಪಟ್ಟರು. ಆದರೀಗ ಈ ಉಪಗ್ರಹ ಹೊತ್ತು ನೌಕೆಯು ಚಂದ್ರನತ್ತ ಸಾಗುತ್ತಿರುವ ಅದ್ಭುತ ದೃಶ್ಯವೊಂದು ವಿಮಾನದ ಕಿಟಕಿಯಿಂದ ಸೆರೆರಾಗಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ.

ಅಂದಹಾಗೆ ಚಂದ್ರಯಾನ-3 ಗಗನಕ್ಕೇರುತ್ತಿದ್ದಂತೆಯೇ ಚೆನ್ನೈ- ಢಾಕಾ (Chennai – Dhaka Plane) ಮಾರ್ಗದಲ್ಲಿ ಇಂಡಿಯಾ ವಿಮಾನವು ಬಾನಿಗೆ ಹಾರಿತ್ತು. ಈ ವೇಳೆ ಕಿಟಕಿ ಬದಿಯ ಸಿಟ್‍ನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‍ನಲ್ಲಿ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು. ಆಗ ಚಂದ್ರಯಾನ-3 ರಾಕೆಟ್ ಮೋಡಗಳನ್ನು ಭೇದಿಸುತ್ತಾ, ಚಂದ್ರನೆಡೆಗೆ ನುಗ್ಗಿಹೋದ ಅತ್ಯಂತ ಮನಹೋಹಕ ದೃಶ್ಯ ಕೂಡ ಸೆರೆಯಾಗಿದೆ.

ಇನ್ನು ಈ ವೀಡಿಯೋವನ್ನು ಇಸ್ರೋ(ISRO) ಮೆಟೀರಿಯಲ್ಸ್ ನಿವೃತ್ತ ನಿರ್ದೇಶಕ ಮತ್ತು ರಾಕೆಟ್ ತಯಾರಿಕಾ ತಜ್ಞ ಡಾ ಪಿ.ವಿ ವೆಂಕಟಕೃಷ್ಣನ್(Dr. P. V. Venjatakrishnan) ಅವರು ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚೆನ್ನೈನಿಂದ ಢಾಕಾಗೆ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಪೈಲಟ್ ಈ ಐತಿಹಾಸಿಕ ಘಟನೆಯನ್ನು ವೀಕ್ಷಿಸಿ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೆ ಈ ವೀಡಿಯೋವನ್ನು ಅಪ್ಲೋಡ್ ಮಾಡಿದಾಗಿನಿಂದ ಲಕ್ಷಗಟ್ಟಲೆ ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ಲೆಕ್ಕವಿಲ್ಲದಷ್ಟು ಲೈಕ್‍ಗಳನ್ನು ಪಡೆದುಕೊಂಡಿದೆ.

 

ಇದನ್ನೂ ಓದಿ: Basavaraj bommai : ಕೊನೆಗೂ BJP-JDS ಮೈತ್ರಿಗೆ ಬಿತ್ತು ಮುದ್ರೆ?! ಮಹತ್ವದ ಹೇಳಿಕೆ ಕೊಟ್ಟ ಮಾಜಿ ಸಿಎಂ ಬೊಮ್ಮಾಯಿ!!

Leave A Reply

Your email address will not be published.