Abhishek Bachchan: ಅಮಿತಾಭ್ ಬಚ್ಚನ್ ಪುತ್ರ ಅಭಿಷೇಕ್ ಚುನಾವಣೆಗೆ ಗ್ರ್ಯಾಂಡ್ ಎಂಟ್ರಿ, ಈ ಪಕ್ಷಕ್ಕೆ ಬಲವೋ ಬಲ !

Latest national news Abhishek Bachchan may be contest in Lok sabha election from Allahabad

Abhishek Bachchan: 2024ರ ಲೋಕಸಭೆ ಚುನಾವಣೆಗೆ ರಭಸದ ತಯಾರಿ ನಡೆಸುತ್ತಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸತತ ಎರಡು ಬಾರಿ ಗೆದ್ದಿರುವ ಬಿಜೆಪಿ ಯಾವ ಸ್ಥಾನ ಪಡೆಯಲಿದೆ ಕಾದು ನೋಡಬೇಕಿದೆ. ಯಾವ ಕ್ಷೇತ್ರದಿಂದ ಯಾರೆಲ್ಲಾ ಸ್ಪರ್ಧೆ ಮಾಡುತ್ತಾರೆ? ಎಂಬ ಶುರುವಾಗಿದೆ. ವಿಶೇಷ ಎಂದರೆ ಬಾಲಿವುಡ್ ಸ್ಟಾರ್, ಅಮಿತಾಭ್ ಬಚ್ಚನ್ (Amitabh Bachachan)ಪುತ್ರ ಅಭಿಷೇಕ್ (Abhishek Bachchan) ಕೂಡ ಲೋಕಸಭೆ ಚುನಾವಣೆಗೆ ಎಂಟ್ರಿ ಕೊಡ್ತಿದ್ದಾರಂತೆ!

ಹೌದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಲಹಾಬಾದ್ ಕ್ಷೇತ್ರದಿಂದ ಸ್ಟಾರ್ ಅಮಿತಾಭ್ ಬಚ್ಚನ್ ಪುತ್ರ ಅಭಿಷೇಕ್ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ.

ಅಲಹಾಬಾದ್ ಕ್ಷೇತ್ರದಿಂದ ಅಮಿತಾಭ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್‌ರನ್ನ ಕಣಕ್ಕಿಳಿಸಲು ಸಮಾಜವಾದಿ ಪಕ್ಷ ಸಿದ್ಧತೆ ನಡೆಸಿದೆಯಂತೆ. ಹೀಗಾಗಿಯೇ ಎಸ್‌ಪಿ ವರಿಷ್ಠರು ಅಭಿಪ್ರಾಯ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದೇ ಕೆಲಸದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಶೀಘ್ರದಲ್ಲೇ ಮುಂಬೈಗೆ ತೆರಳಿ ಅಮಿತಾಭ್ ಬಚ್ಚನ್ ಮತ್ತು ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಜೊತೆ ಚರ್ಚಿಸಬಹುದು ಎನ್ನಲಾಗಿದೆ.

ಅಭಿಷೇಕ್ ಬಚ್ಚನ್ ಸ್ಪರ್ಧೆಗೆ ಎಲ್ಲಾ ಕಡೆಯಿಂದ ಬಹುತೇಕ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಾಗಿ ಅಭಿಷೇಕ್ ಬಚ್ಚನ್ ಲೋಕಸಭೆ ಅಖಾಡದಲ್ಲಿ ಅಬ್ಬರಿಸುವುದು ಗ್ಯಾರಂಟಿ ಎನ್ನಲಾಗಿದೆ. ಹಾಗೇ ಅಲಹಾಬಾದ್ ಕ್ಷೇತ್ರದಿಂದ ಈಗಾಗಲೇ ಅಭಿಷೇಕ್ ಬಚ್ಚನ್ ಅವರ ತಂದೆ ನಿಂತು ಗೆದ್ದಿದ್ದಾರೆ. ಇದೇ ಕಾರಣಕ್ಕೆ ಮಗ ಕೂಡ ಇದೇ ಜಾಗದಲ್ಲಿ ಗೆಲ್ಲುವುದು ಕಷ್ಟವಲ್ಲ ಎಂಬ ಲೆಕ್ಕಾಚಾರವಿದೆ. ಹಾಗೇ ಅಭಿಷೇಕ್ ಚುನಾವಣೆಗೆ ನಿಂತರೆ ಬಿಗ್ ಬಿ, ಜಯಾ ಬಚ್ಚನ್ ಜೊತೆಗೆ ಐಶ್ವರ್ಯ ರೈ ಬಚ್ಚನ್ ಸೇರಿದಂತೆ ಬಾಲಿವುಡ್‌ನ ತಾರೆಯರ ದಂಡೇ ಕ್ಷೇತ್ರಕ್ಕೆ ಎಂಟ್ರಿ ಕೊಡಲಿದೆ.

ಒಟ್ಟಿನಲ್ಲಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಹಾಲಿ ಸಂಸದರಾದ ಡಾ. ರೀಟಾ ಬಹುಗುಣ ಜೋಶಿಗೆ ಟಿಕೆಟ್ ಸಿಗುವುದು ಬಹುತೇಕ ಪಕ್ಕಾ. ಈ ಬಾರಿ ಡಾ.ರೀಟಾ ಬಹುಗುಣ ಜೋಶಿ ಬಿಜೆಪಿ ಅಭ್ಯರ್ಥಿಯಾದರೆ ಅಭಿಷೇಕ್ ಎಸ್‌ಪಿಯಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.

 

ಇದನ್ನೂ ಓದಿ : ಬ್ಯಾಂಕ್‍ ದರೋಡೆಗೆ ತೆರಳಿದ ಕಳ್ಳ, ಪೊಲೀಸರು ಬರುವವರೆಗೂ ತಾಳ್ಮೆಯಿಂದ ಕಾಯುತ್ತಿದ್ದ, ಯಾಕೆ ಅನ್ನೋದೇ ವಿಚಿತ್ರ !

Leave A Reply

Your email address will not be published.