Shakti yojan: ಶಕ್ತಿ ಯೋಜನೆ ಎಫೆಕ್ಟ್: ಏಕಾಏಕಿ ಹೊಸ ಪ್ಲಾನ್ ಮಾಡಿದ KSRTC !! ಮಹಿಳಾ ಪ್ರಯಾಣಿಕರಿಗೆ ನಿರಾಸೆ !!

Latest Karnataka news Congress guarantee Shakti Yojan effect KSRTC plan to renovation of old buses

Shakti yojan: ರಾಜ್ಯ ಸರ್ಕಾರದ(State Government)ಮಹತ್ವಾಕಾಂಕ್ಷೀ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾಗಿ ತಿಂಗಳುಗಳು ಉರುಳುತ್ತಿವೆ. ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಾ ಸಂತೋಷವಾಗಿದ್ದಾರೆ. ಆದರೆ ಈ ಬೆನ್ನಲ್ಲೇ ಸರ್ಕಾರದ ಒಂದು ನಿರ್ಧಾರ ಪ್ರಯಾಣಿಕರಿಗೆ ಬೇಸರವನ್ನುಂಟು ಮಾಡಿದೆ.

ಹೌದು, ಕೆಲ ದಿನಗಳ ಹಿಂದೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ(Ramalinga reddy) ಅವರು 4000 ಹೊಸ ಬಸ್ ಖರೀದಿ ಮಾಡಲಾಗುವುದು, ಮೂರು ತಿಂಗಳಲ್ಲಿಯೇ ಬಸ್ಗಳು ಡಿಪೋ ತಲುಪಲಿವೆ ಎಂಬ ಮಾಹಿತಿ ನೀಡಿದ್ದರು. ಈ ಬೆನ್ನಲ್ಲೇ ಮತ್ತೊಂದು ಯೋಜನೆಗೆ ಮುಂದಾದ KSRTC ಇದೀಗ ಶಕ್ತಿ ಯೋಜನೆಯಿಂದ(Shakti yojan) ಉಂಟಾಗುತ್ತಿರುವ ನಷ್ಟ ಸರಿದೂಗಿಸಲು ಹೊಸ ಪ್ಲಾನ್ ಮಾಡಿಕೊಂಡಿದೆ.

ಅದೇನೆಂದರೆ ಹೊಸ ಬಸ್ಸನ್ನು ಖರೀದಿಸಲು ಹೋದರೆ 40 ಲಕ್ಷ ರೂಪಾಯಿ ಖರ್ಚಾಗುತ್ತದೆ ಅದೇ ಕಾರಣಕ್ಕಾಗಿ ಹಳೆಯ ಬಸ್ಸುಗಳನ್ನೇ ಮತ್ತೆ ನವೀಕರಿಸುವ ಕುರಿತಂತೆ ಕೆಎಸ್ಆರ್ಟಿಸಿಯ ಮುಖ್ಯಸ್ಥರು ನಿರ್ಧಾರಕ್ಕೆ ಬಂದಂತಿದೆ. ಏಕೆಂದರೆ ಇದಕ್ಕೆ ಕೇವಲ ಮೂರು ಲಕ್ಷ ರೂಪಾಯಿ ಮಾತ್ರ ಖರ್ಚಾಗುತ್ತದೆ. ಕೆಎಸ್ಆರ್‌ಟಿಸಿ(KSRTC) ಸಂಸ್ಥೆಯ ಬಳಿ ಇರುವಂತಹ 8,000ಕ್ಕೂ ಅಧಿಕ ಬಸ್ಸುಗಳು ಈಗಾಗಲೇ 10 ಲಕ್ಷಕ್ಕೂ ಅಧಿಕ ದೂರವನ್ನು ಕ್ರಮಿಸಿರುವಂತಹ ಬಸ್ಸುಗಳು ಕೂಡ ಇವೆ.

ಅಲ್ಲದೆ ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಒಂದೊಂದು ಸರ್ಕಾರಿ ವಾಹನದ ಜೀವಿತಾವಧಿ 15 ವರ್ಷ ಆಗಿದೆ. ಆದ್ರೆ ನಿಗಮಗಳ ವ್ಯಾಪ್ತಿಯಲ್ಲಿರುವ ಬಸ್ ಗಳು 10 ವರ್ಷಕ್ಕೆ ಗುಜರಿಗೆ ಸೇರುತ್ತಿ.ವೆ. ಈ ಹಿನ್ನಲೆ ಇವುಗಳ ನವೀಕರಣ ಮಾಡಿ ಉಳಿದ 5 ವರ್ಷ ರನ್ ಮಾಡುವ ಲೆಕ್ಕಾಚಾರವನ್ನು ಸಾರಿಗೆ ನಿಗಮ ಹೊಂದಿದೆ. ಸದ್ಯ ತಿಂಗಳಿಗೆ 50 ಬಸ್ ನವೀಕರಣ ಮಾಡುವ ಟಾರ್ಗೆಟ್ ಹೊಂದಿದ್ದು, ಈಗಾಗಲೇ ಸದ್ದಿಲ್ಲದೇ 494 ಬಸ್​ಗಳನ್ನು ನವೀಕರಣ ಮಾಡಲಾಗಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ನವೀಕರಣಗೊಂಡ ಬಸ್ ಗಳೇ ಪ್ರಯಾಣಕ್ಕೆ ಲಭ್ಯವಾಗಲಿದೆ.

KSRTC ಸಂಸ್ಥೆಯ ಮೆಕಾನಿಕಲ್ ಇಂಜಿನಿಯರ್ಗಳು(Mechanical engineers) ಈ ರೀತಿ ಶಿಥಿಲಗೊಂಡಿರುವಂತಹ ಬಸ್ಸುಗಳ ತುಕ್ಕು ಹಿಡಿದ ಎಲ್ಲಾ ಭಾಗಗಳನ್ನು ಕೂಡ ಹೊರತೆಗೆದು ಅದಕ್ಕೆ ಹೊಸ ಭಾಗಗಳನ್ನು ಜೋಡಣೆ ಮಾಡಲಾಗುತ್ತದೆ. ಮಾತ್ರವಲ್ಲದೆ ಸೀಟುಗಳ ಕುಶನ್ ಅನ್ನು ಕೂಡ ಬದಲಾವಣೆ ಮಾಡುವಂತಹ ಅಗತ್ಯವಿದ್ದರೆ ಇಲ್ಲವಾದಲ್ಲಿ ಗಾಡಿಯ ಇಂಜಿನ್ ಏನಾದರೂ ಸಮಸ್ಯೆ ಇದ್ದರೆ ಅದನ್ನು ಕೂಡ ಸರಿಪಡಿಸುವಂತಹ ಕೆಲಸವನ್ನು ಈ ನವೀಕರಣ ಪ್ರಕ್ರಿಯೆಯಲ್ಲಿ ಮಾಡಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ಸದ್ಯಕ್ಕೆ 494 ಬಸ್ಸುಗಳ ನವೀಕರಣ ಕಾರ್ಯಕ್ರಮ ಪೂರ್ಣಗೊಂಡಿದ್ದು ಇನ್ನೂ 500 ಬಸ್ಸುಗಳ ನವೀಕರಣ (Restoration) ಕಾರ್ಯಕ್ರಮ ಸದ್ಯಕ್ಕೆ ಅಗತ್ಯವಿದೆ.

ಇನ್ನು ಸರ್ಕಾರಿ ಬಸ್ಸುಗಳು ಹಳೆಯದಾಗುತ್ತಿವೆ ಎಂಬುದಾಗಿ ತಿಳಿದ ನಂತರ ಮಹಿಳೆಯರು ಹೊಸಬಸುಗಳ ಆಯೋಜನೆ ಆಗಬಹುದು ಎಂಬುದಾಗಿ ಭಾವಿಸಿದ್ದರು. ಅಲ್ಲದೆ ಸಚಿವರು ಕೂಡ 4000 ಹೊಸ ಬಸ್ ಖರೀದಿಸು ಸುದ್ದಿ ಕೇಳಿ ಎಲ್ಲರೂ ಹೊಸ ಬಸ್ ಪ್ರಯಾಣದ ಆಸೆಯಲ್ಲಿದ್ದರು. ಆದರೆ ಈಗ ಅದನ್ನೇ ಮತ್ತೆ ನವೀಕರಣಗೊಳಿಸುತ್ತಿರುವುದು ಮಹಿಳೆಯರಿಗೆ ಕೂಡ ಕೊಂಚಮಟ್ಟಿಗೆ ಬೇಸರದ ವಿಚಾರವಾಗಿದೆ.

ಇದನ್ನೂ ಓದಿ: Dr. C N Manjunath : ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಸೇವಾವಧಿ ಮುಕ್ತಾಯ- ಇವರೇ ನೋಡಿ ಮುಂದಿನ ನಿರ್ದೇಶಕ

Leave A Reply

Your email address will not be published.