CM Siddaramaiah: ಬಿಸಿಯೂಟದ ಸ್ತ್ರೀಯರು ಬಳೆ ತೊಡುವಂತಿಲ್ಲ ಸುದ್ದಿ: ರಾಜ್ಯ ಸರ್ಕಾರ ನೀಡಿದೆ ಸ್ಪಷ್ಟನೆ; ಘಟನೆಯ ಕಂಪ್ಲೀಟ್ ಸತ್ಯಾಸತ್ಯತೆ ಇಲ್ಲಿದೆ

Latest Karnataka news CM Siddaramaiah clarifies about new guidelines published to cookware workers by education department

CM Siddaramaiah: ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದ್ದು, ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿ ಇನ್ಮುಂದೆ ಬಳೆ ತೊಡುವಂತಿಲ್ಲ ಎಂದು ಸೂಚನೆ ನೀಡಿದೆ. ರಾಜ್ಯ ಸರ್ಕಾರದ ಈ ನಡೆಗೆ ಹಿಂದೂ ಪರ ಕಾರ್ಯಕರ್ತರು ಹಾಗೂ ಬಿಸಿಯೂಟ ಕಾರ್ಯಕರ್ತೆಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನುವ ಅರ್ಥದ ಸುದ್ದಿಗಳು ಪ್ರಸಾರ ಆಗಿದ್ದವು.

ಮಧ್ಯಾಹ್ನದ ಬಿಸಿಯೂಟ ತಯಾರಿಕೆಯಲ್ಲಿನ ಗುಣಮಟ್ಟ ಸುರಕ್ಷತೆ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿ ಪಾಲಿಸಬೇಕಾದ ನಿಯಮಗಳು ಕುರಿತಂತೆ ನೂತನ ಮಾರ್ಗಸೂಚಿಯಲ್ಲಿ ಆದೇಶಿಸಲಾಗಿದೆ. ಬಿಸಿಯೂಟ ತಯಾರಿಸುವ ಅಡುಗೆ ಸಿಬ್ಬಂದಿ ಬಹುತೇಕ ಮಹಿಳೆಯರು ಬಳೆ, ಬಿಂದಿಗೆ ಧರಿಸುತ್ತಾರೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ತಯಾರಿಕೆ ಸಿಬ್ಬಂದಿ ಕೈಗೆ ಬಳೆ ತೊಡದಂತೆ ಹೊಸ ಮಾರ್ಗಸೂಚಿ ಪ್ರಕಟಿಸಿರುವ ಹಿನ್ನೆಲೆ ಕಾರ್ಯಕರ್ತೆಯರು, ಹಿಂದು ಸಂಘಟನೆಗಳು ಸರಕಾರದ ಈ ನಡೆಗೆ ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ ಎನ್ನುವ ಸುದ್ದಿಯ ಬೆನ್ನಲ್ಲೇ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.

ಬಿಸಿಯೂಟ ತಯಾರಕರ ಪೈಕಿ ಹೆಚ್ಚಿನ ಮಹಿಳೆಯರು ಹಿಂದೂ ಧರ್ಮಕ್ಕೆ ಸೇರಿದವರಾಗಿರುವುದರಿಂದ ತಮ್ಮ ವೈಯಕ್ತಿಕ ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಳ್ಳುವಂತಹ ನಿಯಮಗಳನ್ನೂ ಸರಕಾರ ಜಾರಿಗೆ ತರಲು ಮುಂದಾಗಿದೆ ಎಂಬ, ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಮಾರ್ಗ ಸೂಚಿಯನ್ನು ಪ್ರಕಟಿಸಿದೆ ಎನ್ನುವುದು ಸಂಪೂರ್ಣ ಸುಳ್ಳು ಸುದ್ದಿ – Fake news ಎಂದಿದೆ ರಾಜ್ಯ ಸರ್ಕಾರ. ಪತ್ರಿಕೆಗಳಲ್ಲಿ ಪ್ರಸಾರವಾದ ಸುದ್ದಿ ಮತ್ತು ರಾಜ್ಯ ಸರಕಾರ ಹೇಳಿದ ಸುದ್ದಿ ಇವುಗಳಲ್ಲಿ ಯಾವುದು ಸರಿ ಎಂಬ ಬಗ್ಗೆ ನಾವು ಈಗ ವಿವರವಾಗಿ ತಿಳಿಸಲಿದ್ದೇವೆ.

ಬಿಸಿಯೂಟ ಕಾರ್ಯಕ್ರಮ ರಾಜ್ಯ ಸರ್ಕಾರದ ಅಡಿಯಲ್ಲಿ ಬರುತ್ತಿರುವ ಮಕ್ಕಳ ಕಲ್ಯಾಣ ಕಾರ್ಯಕ್ರಮ. ಇದು ಒಂದನೇ ಕ್ಲಾಸಿನಿಂದ ಶುರುವಾಗಿ 10 ನೆಯ ತರಗತಿ ತನಕ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಕಾರ್ಯಕ್ರಮ ನೀಡಲಾಗುತ್ತದೆ. ಆದರೆ ಅಂಗನವಾಡಿ ಮಕ್ಕಳ ಪೋಷಣೆಯ ಜವಾಬ್ದಾರಿ ರಾಜ್ಯ ಸರ್ಕಾರದ್ದೇ ಆದರೂ, ಕೇಂದ್ರ ಸರಕಾರದ ಪಾತ್ರ ಕೂಡಾ ಇದರಲ್ಲಿ ಇದೆ. ಈಗ, ವಾಸ್ತವದಲ್ಲಿ ಕೇಂದ್ರ ಸರ್ಕಾರ ಪೋಷಣ್ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿದ್ದು, ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯರವರು (CM Siddaramaiah) ಟ್ವಿಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ನಿಜಕ್ಕೂ ಪಿಎಂ ಪೋಶನ್ ಮಾರ್ಗಸೂಚಿಯ ಪ್ರಕಾರ ತಯಾರಿಸುವ, ಬಡಿಸುವ ಮಹಿಳೆಯರು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಬಳೆ, ವಾಚ್, ರಿಂಗ್ ಇತ್ಯಾದಿಗಳನ್ನು ಧರಿಸಬಾರದು. ಅವುಗಳಿಂದ ಮಕ್ಕಳಿಗೆ ತಯಾರಿಸುವ ಆಹಾರ ಕಲುಷಿತಗೊಳ್ಳಬಹುದು ಎನ್ನುವ ಉದ್ದೇಶದಿಂದ ಕೇಂದ್ರ ಸರಕಾರ ಈ ಮಾರ್ಗಸೂಚಿಯನ್ನು ಹೊರಡಿಸಿದೆ. ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ. ಹೀಗಾಗಿ ಬಿಸಿ ಊಟದ ಮಹಿಳಾ ಕಾರ್ಯಕರ್ತರಾಗಲಿ ಅಥವಾ ಹಿಂದೂ ಸಂಪ್ರದಾಯವನ್ನು ಬೆಂಬಲಿಸುವ ಜನರು ರಾಜ್ಯ ಸರ್ಕಾರದ ಮೇಲೆ ಕೋಪಿಸಿಕೊಳ್ಳುವ, ಆಕ್ರೋಶ ವ್ಯಕ್ತಪಡಿಸುವ ಅಗತ್ಯ ಇರುವುದಿಲ್ಲ. ಮತ್ತೊಂದು ಬಾರಿ ಸ್ಪಷ್ಟವಾಗಿ ಹೇಳಬೇಕೆಂದರೆ, ಇದು ಕೇಂದ್ರ ಸರ್ಕಾರ ಸೂಚಿಸಿದ ಮಾರ್ಗಸೂಚಿ. ಅದನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟ್ವೀಟ್ ಮಾಡಿ ಖಚಿತ ಪಡಿಸಿದ್ದು.

ಇದನ್ನೂ ಓದಿ: Shakti Scheme: ಮಹಿಳೆಯರೇ ಬರ್ತಿದೆ ಹೊಸ ಅಪ್ಡೇಟ್ ; ಬಸ್ಸಿನ ಕೆನ್ನೆಗೆ ಕಾರ್ಡು ಉಜ್ಜಿ, ಉಚಿತ ಪ್ರಯಾಣಿಸಿ !

 

Leave A Reply

Your email address will not be published.