Home latest Mysore Murder: ಮಚ್ಚಿನ ಜತೆ ಮಲಗುತ್ತಿದ್ದ ಪತಿ ; ಕೊನೆಗೂ ಊಹಿಸದ ದುರಂತ ನಡೆದೇ ಹೋಯ್ತು...

Mysore Murder: ಮಚ್ಚಿನ ಜತೆ ಮಲಗುತ್ತಿದ್ದ ಪತಿ ; ಕೊನೆಗೂ ಊಹಿಸದ ದುರಂತ ನಡೆದೇ ಹೋಯ್ತು !

Mysore murder
Image source: Vijayavani

Hindu neighbor gifts plot of land

Hindu neighbour gifts land to Muslim journalist

Mysore Murder: ಪತಿ ಮಲಗುವಾಗಲೆಲ್ಲಾ ಪಕ್ಕದಲ್ಲೇ ಮಚ್ಚು ಇಟ್ಟುಕೊಂಡು ಮಲಗುತ್ತಿದ್ದ. ಆದರೆ, ಕೊನೆಗೂ ಊಹಿಸಲು ಅಸಾಧ್ಯವಾದ ದುರಂತ ನಡೆದು ಹೋಯ್ತು. ಹೌದು, ಪ್ರತಿದಿನ ಪತ್ನಿಯ ಜೊತೆ ಮಲಗುವಾಗಲೆಲ್ಲ ಮಚ್ಚು ಇಟ್ಟುಕೊಂಡು ಮಲಗುತ್ತಿದ್ದಾತ ಪತ್ನಿಯನ್ನು ಭೀಕರವಾಗಿ ಹತ್ಯೆ (Mysore Murder) ಮಾಡಿರುವ ಘಟನೆ ಮೈಸೂರಿನ ಕುಂಬಾರ ಕೊಪ್ಪಲಿನಲ್ಲಿ ನಡೆದಿದೆ. ಮೃತರನ್ನು ಹರ್ಷಿತಾ (21) ಎಂದು ಗುರುತಿಸಲಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಬೇರಂಬಳ್ಳಿ ಗ್ರಾಮದ ನಿವಾಸಿ ಮಾದೇಶ್ (30) ಒಂದು ವರ್ಷದ ಹಿಂದಷ್ಟೇ ಹರ್ಷಿತಾಳನ್ನು ಮದುವೆಯಾಗಿದ್ದರು. ಸುಖ ಜೀವನ ನಡೆಸುತ್ತಿದ್ದ ದಂಪತಿಗಳ ಮಧ್ಯೆದಿನ ಕಳೆದಂತೆ ಸಣ್ಣ ಪುಟ್ಟ ಜಗಳ ನಡೆಯುತ್ತಿತ್ತು. ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ವಿರಸ ಉಂಟಾಗಿತ್ತು. ಅಲ್ಲದೆ, ಆತ ಪತ್ನಿಯೊಂದಿಗೆ ಜಗಳ ಮಾಡಿ ಕೊಲೆ ಬೆದರಿಕೆ ಹಾಕಿದ್ದ. ಆಕೆಯ ಜೊತೆ ಮಲಗುವಾಗಲೆಲ್ಲ ಮಚ್ಚು ಇಟ್ಟುಕೊಂಡು ಮಲಗುತ್ತಿದ್ದ.

ಇದರಿಂದ ಭಯಗೊಂಡ ಹರ್ಷಿತಾ ತವರು ಮನೆ ಸೇರಿದ್ದಳು. ಪತ್ನಿಯನ್ನು ಮರಳಿ ಮನೆಗೆ ಕರೆದುಕೊಂಡು ಹೋಗಲು ಮಾದೇಶ್ ಆಕೆಯ ಮನೆಗೆ ಹೋಗಿದ್ದ. ಪತ್ನಿ ಮನೆಗೆ ಬರಲು ಒಪ್ಪದಿದ್ದಾಗ, ಅಲ್ಲೇ ಜಗಳ ಕಾಯ್ದಿದ್ದಾನೆ. ಇಬ್ಬರ ನಡುವೆ ಭಾರೀ ವಾಗ್ಯುದ್ಧ ನಡೆದಿದೆ. ಇದರಿಂದ ಕೋಪಗೊಂಡ ಮಾದೇಶ್​, ಚಾಕುವಿನಿಂದ ಹರ್ಷಿತಾ ಮೇಲೆ ಹಲ್ಲೆ ಮಾಡಿ, ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾನೆ. ಈ ವೇಳೆ ಅಡ್ಡಬಂದ ಅತ್ತೆಯನ್ನು ಕೊಲ್ಲಲು ಯತ್ನಿಸಿದ್ದಾನೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೋಲೀಸರು ಆರೋಪಿ ಮಾದೇಶ್​ನನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Shakti Scheme: ಮಹಿಳೆಯರೇ ಬರ್ತಿದೆ ಹೊಸ ಅಪ್ಡೇಟ್ ; ಬಸ್ಸಿನ ಕೆನ್ನೆಗೆ ಕಾರ್ಡು ಉಜ್ಜಿ, ಉಚಿತ ಪ್ರಯಾಣಿಸಿ !