SBI MCLR: ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಕೊಟ್ಟ SBI, ಕಷ್ಟದ ದಿನಗಳು ಇಂದಿನಿಂದಲೇ ಜಾರಿ

Latest news SBI MCLR bank news SBI Bank Big Update 2023

SBI MCLR: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶದ ಅತಿದೊಡ್ಡ ಬ್ಯಾಂಕ್ ಆಗಿದ್ದು, ಹಾಗಾಗಿ ಇದರಲ್ಲಿ ಕೋಟ್ಯಾಂತರ ಜನರು ವಿವಿಧ ಖಾತೆಗಳನ್ನು ಹೊಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್ ತನ್ನ ಬಳಕೆದಾರರಿಗೆ ಹಲವು ಸೌಲಭ್ಯಗಳನ್ನು (SBI Bank Big Update 2023) ಒದಗಿಸುತ್ತದೆ. ಇತ್ತೀಚೆಗೆ ತನ್ನ ಗ್ರಾಹಕರಿಗೆ ಭಾರಿ ಶಾಕ್ ಕೊಟ್ಟಿದ್ದು, ಬಿಗ್ ಅಪ್ಡೇಟ್ ಒಂದನ್ನು ನೀಡಿದೆ. ಈ ನಿರ್ಧಾರವು ಗ್ರಾಹಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.

ಹೌದು, ಎಸ್‌ಬಿಐ ಇತ್ತೀಚೆಗೆ SBI ನಿಧಿ ಆಧಾರಿತ ಸಾಲದ ದರದ ಕನಿಷ್ಠ ವೆಚ್ಚವನ್ನು ಹೆಚ್ಚಳ ಮಾಡಿದ್ದು, ಇಂದಿನಿಂದ (ಜುಲೈ 15ರಿಂದ) ಎಂಸಿಎಲ್ ಆರ್ (SBI MCLR) ದರ ಏರಿಕೆ ನಿರ್ಧಾರ ಜಾರಿಗೆಯಾಗಿದೆ. ಎಂಸಿಎಲ್‌ಆರ್ 5 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳವಾಗಿದೆ.

ಎಂಸಿಎಲ್‌ಆರ್ ದರ ಹೆಚ್ಚಳ(MCLR rate hike) ದಿಂದಾಗಿ ಸಾಲಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸಾಲಗಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಬಹುದು. ಏಕೆಂದರೆ ಸಾಲದ ದರಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು ಈಗಾಗಲೇ ಸಾಲ ಪಡೆದವರ ಮೇಲೂ ನಕಾರಾತ್ಮಕ ಪರಿಣಾಮ (Negative effect) ಬೀರಲಿದೆ. ಮರುಹೊಂದಿಸಿದ ದಿನಾಂಕದಿಂದ ಸಾಲದ ದರಗಳು ಹೆಚ್ಚಾಗಬಹುದು. ಹೀಗಾಗಿ ಇಎಂಐ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ.

ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ, ಕಳೆದ ವರ್ಷ ಮೇ ತಿಂಗಳಿನಿಂದ RBI ರೆಪೊ ದರವನ್ನು ಶೇ.2.25ರಷ್ಟು ಹೆಚ್ಚಿಸಿತ್ತು. ಅದಕ್ಕೆ ತಕ್ಕಂತೆ ಹಣದುಬ್ಬರವೂ ತಗ್ಗಿತು. ಆದರೆ ಇದೀಗ ಮತ್ತೆ ಹಣದುಬ್ಬರ ಏರಿಕೆಯಾಗಿದೆ. ಆರ್‌ಬಿಐ ರೆಪೊ ದರವನ್ನು(RBI Repo rate) ಶೇಕಡಾ 6.5 ರಷ್ಟು ಹೆಚ್ಚಿಸುತ್ತಿದೆ. ಒಂದು ತಿಂಗಳ ಹಿಂದೆ, RBI ಪ್ರಮುಖ ನೀತಿ ದರವನ್ನು ಸ್ಥಿರವಾಗಿರಿಸುವುದಾಗಿ ಘೋಷಿಸಿತ್ತು. ಆದರೆ SBI ಈಗ ಸಾಲದ ದರವನ್ನು ಹೆಚ್ಚಿಸಿರುವುದು ಗಮನಾರ್ಹವಾಗಿದೆ.

 

ಇದನ್ನು ಓದಿ: Leopard: ಚಿರತೆಯನ್ನು ಒಬ್ಬಂಟಿಯಾಗಿ ಹಿಡಿದ, ನಂತರ ಬೈಕ್’ಗೆ ಕಟ್ಟಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ ಧೀರ ! 

Leave A Reply

Your email address will not be published.