

Amogh Lila Das: ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್‌ನ (ಇಸ್ಕಾನ್) ಸನ್ಯಾಸಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ ಮತ್ತು ಪ್ರೇರಣೆ ಕುರಿತಾದ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಖ್ಯಾತಿ ಗಳಿಸಿರುವ ಅಮೋಘ ಲೀಲಾ ದಾಸ್ (Amogh Lila Das), ಸ್ವಾಮಿ ವಿವೇಕಾನಂದ (Swami Vivekananda) ಮತ್ತು ರಾಮಕೃಷ್ಣ ಪರಮಹಂಸರ(Ramakrishna paramhamsa) ಕುರಿತು ವಿವಾದಾತ್ಮಕ ಹೇಳಿಕೆ(controversy statement) ನೀಡಿದ ಆರೋಪದ ಮೇಲೆ ಇಸ್ಕಾನ್ ಒಂದು ತಿಂಗಳ ನಿಷೇಧ ವಿಧಿಸಿದೆ. ಇದೀಗ ಮತ್ತೆ ವಿವಾದಾತ್ಮಕ ಸುಳಿಯಲ್ಲಿ ಸಿಲುಕಿರುವ ಅಮೋಘ ಲೀಲಾ ದಾಸ್ ಅವರು ಮಹಿಳೆಯರ ಸೊಂಟದ ವಿಚಾರವಾಗಿ ತಮಾಷೆ ಮಾಡಿದ್ದು, ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಹೌದು, ಇಸ್ಕಾನ್ ಸನ್ಯಾಸಿಯ ವಿವಾದಾತ್ಮಕ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ (social media) ಭಾರಿ ಸಂಚಲನವನ್ನು ಸೃಷ್ಟಿಸಿದ್ದು, ಇದರಲ್ಲಿ ಅಮೋಘ ಲೀಲಾ ದಾಸ್ ಅವರು ಮಹಿಳೆಯರ ಸೊಂಟವನ್ನ ಟ್ರ್ಯಾಕ್ಟರ್ನ ಟೈಯರ್ ಗೆ ಹೋಲಿಸಿ ಗೇಲಿ ಮಾಡಿದ್ದಾರೆ. ಬಾಡಿ ಶೇಮಿಂಗ್ಗಾಗಿ (body shaming) ಸಾಮಾಜಿಕ ಜಾಲತಾಣಗಳಲ್ಲಿ ಅಮೋಘ ಲೀಲಾ ದಾಸ್ ಅವರನ್ನ ಜನರು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಲೀಲಾ ದಾಸ್ ಉದ್ಯೋಗಸ್ಥ ಮಹಿಳೆಯರನ್ನು ಗೇಲಿ ಮಾಡುತ್ತಿರುವುದು ಕಂಡುಬಂದಿದೆ. ಪ್ರತಿದಿನ ಲ್ಯಾಪ್ಟಾಪ್ ಹಿಡಿದುಕೊಂಡು ಕೆಲಸ ಮಾಡುವ ಮಹಿಳೆಯರ ಸೊಂಟವು ಸೈಕಲ್ ಟೈಯರ್, ಬಸ್ ಟೈಯರ್ , ಹೀಗೆ ಕೊನೆಗೊಂದು ದಿನ ಟ್ರ್ಯಾಕ್ಟರ್ ಟಯರ್ (tractor tiaor) ಆಗುತ್ತದೆ ಎಂದು ತಮಾಷೆ ಮಾಡಿದ್ದಾರೆ.
ಮಹಿಳೆಯರು ಜಿಮ್ ಗೆ ಹೋಗುವುದನ್ನು ತಮಾಷೆ ಮಾಡಿರುವ ಸ್ವಾಮೀಜಿ, ಮಹಿಳೆಯರು ಜಿಮ್ ವರ್ಕೌಟ್‌ಗಳನ್ನು(gym workout) ತಪ್ಪಿಸಬೇಕು ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಮನೆಯೇ ಜಿಮ್. ಹಾಗಾಗಿ ವರ್ಕೌಟ್ ಬದಲಾಗಿ ಮನೆಯ ಕೆಲಸಗಳತ್ತ ಗಮನ ಹರಿಸಬೇಕು. ಎಂದು ಹೇಳುತ್ತಿರುವುದನ್ನು ವೈರಲ್ ಆದ ವಿಡಿಯೋದಲ್ಲಿ ಕಾಣಬಹುದು.













