ಗಗನಕ್ಕೇರಿದ ಟೊಮೆಟೊ ಬೆಲೆ: ಕೆಜಿಗೆ ರಿಯಾಯಿತಿ ದರದಲ್ಲಿ ಖರೀದಿ ಆರಂಭಿಸಿದ ಸರ್ಕಾರ !
Tomato :ಆಹಾರ ತಯಾರಿಕೆಯಲ್ಲಿ ಮತ್ತು ಆಹಾರದ ರುಚಿ ಹೆಚಿಯಿಸಬಲ್ಲ ಪ್ರಮುಖ ಹಣ್ಣು ಟೊಮೆಟೋ ಬೆಲೆ ಗಗನಕ್ಕೇರಿರುವಂತೆಯೇ ಸರ್ಕಾರ ಕೆಜಿಗೆ ರೂ. 90 ರಂತೆ ರಿಯಾಯಿತಿ ಬೆಲೆಯಲ್ಲಿ ಟೊಟೊಮೋ ಮಾರಾಟ ಆರಂಭಿಸಿದೆ. ಹೀಗೆ ರಿಯಾಯಿತಿ ಟೊಮೇಟೊ(Tomato)ಮಾರಾಟದ ಮೂಲಕ ಗ್ರಾಹಕರಿಗೆ ತುಸು ನೆಮ್ಮದಿಯನ್ನು ನೀಡಿದೆ. ಈಗ ಟೊಮೇಟೊ ಕೆಜಿಗೆ 90 ಕೆಜಿಗೆ ದೊರೆಯುತ್ತಿದೆ.
ಭಾರತೀಯ ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ ಮತ್ತು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟಗಳು ಜಂಟಿಯಾಗಿ ಕೇಂದ್ರ ಸರ್ಕಾರದ ಪರವಾಗಿ ಟೊಮೆಟೊ ಮಾರಾಟ ನಡೆಸಲು ಶುರುಮಾಡಿವೆ. ಟೊಮೊಟೊ ಸಗಟು ದರ ಕಳೆದ ಕೆಲವು ದಿನಗಳಿಂದ ತೀವ್ರಗತಿಯಲ್ಲಿ ಏರಿಕೆಯಾಗಿದ್ದು, ಶುಕ್ರವಾರ ಭಾರೀ ಮಳೆಯಿಂದಾಗಿ ದೇಶದ ಹಲವು ಕಡೆಗಳಲ್ಲಿ ಒಂದು ಕೆಜಿ ಟೊಮೆಮೊ ಬೆಲೆ ರೂಪಾಯಿ 250 ಕ್ಕೆ ಏರಿತ್ತು.
ಒಟ್ಟು 17,000 ಕೆಜಿಗಳಲ್ಲಿ ಶೇ. 80 ರಷ್ಟು ಸಂಜೆಯ ಒಳಗೆ ಮಾರಾಟವಾಗಿದೆ. ನಾಳೆಯಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಮಾರಾಟ ಪ್ರಮಾಣವನ್ನು ಹೆಚ್ಚಿಸುತ್ತೇವೆ ಎಂದು ಎನ್‌ಸಿಸಿಎಫ್ ವ್ಯವಸ್ಥಾಪಕ ನಿರ್ದೇಶಕ ಅನಿಸ್ ಜೋಸೆಫ್ ಚಂದ್ರ ಹೇಳಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಸರ್ಕಾರದ ಈ ರಿಯಾಯಿತಿ ಬೆಳೆಯ ಟೊಮೇಟೊ ವಿಕ್ರಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಿಯಾಯಿತಿ ದರದ ಟೊಮೇಟೊ ಖರೀದಿಗೆ ಜನರು ಸರತಿ ಸಾಲಿನಲ್ಲಿ ಬರುತ್ತಿದ್ದಾರೆ. ದೆಹಲಿಯ ಕರೋಲ್ ಬಾಗ್, ಪಟೇಲ್ ನಗರ, ಪುಸಾ ರಸ್ತೆ, ಸಿಜಿಒ ಕಾಂಪ್ಲೆಕ್ಸ್, ನೆಹರು ಪ್ಲೇಸ್, ಆದರ್ಶ ನಗರ, ವಜೀರ್‌ಪುರದ ಜೆಜೆ ಸ್ಲಂ ಗೋವಿಂದ್ ಲಾಲ್ ಶಿಕಾ ಮಾರ್ಗ್, ಮತ್ತು ಧೋಧಪುರ್ ಶಿವಮಂದಿರದಂತಹ ಪ್ರದೇಶಗಳಲ್ಲಿ ಸುಮಾರು 20 ಸಂಚಾರ ವಾಹನಗಳನ್ನು ರವಾನಿಸಲಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳು ಮುಖ್ಯವಾಗಿ ಟೊಮೇಟೊ ಬೆಳೆಯುವ ರಾಜ್ಯಗಳಾಗಿದ್ದು, ಅವುಗಳಿಂದ ಕೇಂದ್ರವು ಟೊಮೇಟೊ ಖರೀದಿಸುತ್ತಿದೆ. ಹಾಗೇ ಖರೀದಿಸಿ ಅವುಗಳನ್ನು ಕ್ಷಿಪ್ರವಾಗಿ ದೆಹಲಿಗೆ ಕಳಿಸಿ ಅಲ್ಲಿ ಇಂದಿನಿಂದ ಮಾರಾಟ ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ಇಂದು ಡೆಲ್ಲಿಯ ಜನ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಇವತ್ತು ಅಲ್ಲಿ ೯೦ ರೂಪಾಯಿಗೆ ಟೊಮೇಟೊ ದೊರಕುತ್ತಿದೆ.
ಇದನ್ನೂ ಓದಿ :ಆರ್ಮಿಯೇ ಮುಗಿಬಿದ್ದು ಕೊಳ್ಳುವ ಈ ಕಾರಿನ ಪವರ್ ಏನು ಗುರೂ? 130 ಕುದುರೆ ಶಕ್ತಿಗೂ ಜಗ್ಗದ ಈ ಕಪ್ಪುಕುದುರೆ ಯಾವುದು ಗೊತ್ತಾ ?