ಮಹಿಳೆಯ ಆರ್ತನಾದ ಕೇಳಿ ಬಂದ ಜಾಗಕ್ಕೆ ಧಾವಿಸಿ ಹೋದ ಪೊಲೀಸರು: ಅಲ್ಲಿ ಯಾರೂ ಇರಲಿಲ್ಲ, ಆದರೆ…!

Women :ಯಾರೋ ಕಿರಾತಕರು ಮಹಿಳೆಯೊಬ್ಬಳನ್ನು ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದರು. ಮಹಿಳೆ (Women)ಆರ್ತನಾದ ಹಾಕುವ ಧ್ವನಿಯನ್ನು ಹುಡುಕಿಕೊಂಡು ಆಕೆಗೆ ಸಹಾಯ ಮಾಡಲೆಂದು ಬಂದ ಪೊಲೀಸರು ಬೆಚ್ಚಿ ಬಿದ್ದ ಘಟನೆ ನಡೆದಿದೆ. ಆದರೆ ಧ್ವನಿ ಕೇಳಿದ ಕಡೆಗೆ ಪೊಲೀಸರು ಹೋಗಿ ನೋಡಿದಾಗ ಅಲ್ಲಿ ಮಹಿಳೆಯೇ ಇರಲಿಲ್ಲ. ಆದರೆ ಮಹಿಳೆಯ ಸದ್ದು ಎಲ್ಲಿಂದ ಬಂತು ಅನ್ನುವುದೇ ಇಲ್ಲಿನ ವಿಶೇಷ.

 

ಇತ್ತೀಚೆಗೆ ಬ್ರಿಟನ್‌ ನಿವಾಸಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ತಮ್ಮಪಕ್ಕದ ಮನೆಯಲ್ಲಿ ಯಾರೋ ಒಬ್ಬ ಹೆಂಗಸು ಸಹಾಯಕ್ಕಾಗಿ ಕೂಗು ಹಾಕುತ್ತಿದ್ದಾರೆ ಎಂದು ಕರೆ ಮಾಡಿ ತಿಳಿಸಿದ್ದಾರೆ. ಇದನ್ನು ಕೇಳಿದ ಪೊಲೀಸರು ವಿಳಾಸ ಪಡೆದುಕೊಂಡು ಆ ಮಹಿಳೆಗೆ ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ಹಾಗೆ ಬಂದ ಪೊಲೀಸರನ್ನು ಆ ಮನೆಯ ಮಾಲೀಕ ಆ ಆರ್ತನಾದ ಬರುತ್ತಿರುವ ಮನೆಯತ್ತ ಸಾಗಿದ್ದಾರೆ. ಮನೆಯೊಳಗೆ ಕರೆದುಕೊಂಡು ಹೋಗಿ ನೋಡಿದರೆ ಅಲ್ಲಿ ಯಾವುದೇ ಮಹಿಳೆ ಪತ್ತೆಯೇ ಇಲ್ಲ. ಕೊನೆಗೆ ಇದೇನಪ್ಪ ಪ್ರೇತ ಭೂತದ ಕಾಟವೇ ಎನ್ನುವ ಆಲೋಚನೆ ಕೂಡಾ ಬಂದಿದ್ದು, ಪೊಲೀಸರು ಕೂಡಾ ಭೀತರಾಗಿದ್ದರು. ಆದರೆ ಕೊನೆಗೆ ಸತ್ಯ ಗೊತ್ತಾಗಿದ್ದು, ಅಲ್ಲಿ ಆ ರೀತಿಯಲ್ಲಿ ಮಹಿಳೆಯ ಧ್ವನಿಯಲ್ಲಿ ಕೂಗಿದ್ದು ಒಂದು ಗಿಳಿ ಎನ್ನುವ ವಿಷ್ಯ ತಿಳಿದು ಬಂದಿದೆ.

 

ಬ್ರಿಟನ್ ನ ಕ್ಯಾನ್ವೆ ದ್ವೀಪದ ನಿವಾಸಿಯಾಗಿರುವ ಸ್ಟೀವ್‌ ವುಸ್ಟ್‌ ಕಳೆದ 21 ವರ್ಷಗಳಿಂದ ಪಕ್ಷಿಗಳನ್ನು ಸಾಕುತ್ತಿದ್ದಾರೆ. ಅವರ ಬಳಿ ಎರಡು ಬಡ್ಜಿಗಳು, ಹಾನ್ಸ್‌ ಮಕಾವ್‌, ಎರಡು ಅಮೆಜಾನ್‌ ಗಿಳಿ, ಎಂಟು ಭಾರತೀಯ ರಿಂಗ್‌ ನೆಕ್‌ಗಳು ಸೇರಿ ವಿವಿಧ ರೀತಿಯ ಪಕ್ಷಿಗಳು ಇದ್ದವು. ಅವುಗಳಲ್ಲಿ ಹಲವು ಹಕ್ಕಿಗಳಿಗೆ ಮನುಷ್ಯರ ಅನುಕರಣೆ, ಮಾನವರ ರೀತಿಯಲ್ಲಿ ಸದ್ದು ಮಾಡುವುದೂ ತಿಳಿದಿದೆಯಂತೆ. ಅಂದು ಮುಂಜಾನೆ ಗಿಳಿಯೊಂದು ಜೋರಾಗಿ ಮಹಿಳೆಯ ಧ್ವನಿಯಲ್ಲಿ ಕೂಗಿ ಕೊಂಡಿದೆ. ಅದನ್ನೇ ಯಾವುದೋ ಮಹಿಳೆಯು ಸಹಾಯಕ್ಕಾಗಿ ಅಂಗಲಾಚಿ ಕೂಗಿಕೊಳ್ಳುತ್ತಾಳೆ ಎಂದು ತಿಳಿದ ಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.

 

ಆ ಧ್ವನಿಯನ್ನೇ ಕೇಳಿಕೊಂಡು ಅವರ ಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಅದನ್ನೇ ಹುಡುಕಿಕೊಂಡು ಪೊಲೀಸರು ಸ್ಟೀವ್‌ ಮನೆಯವರೆಗೆ ಬಂದಿದ್ದಾರೆ. ‘ನಮ್ಮ ಗಿಳಿ ನಮ್ಮೊಂದಿಗೇ ಆಟವಾಡಿದೆ ‘ ಎಂದು ಅವರು ಮಾಧ್ಯಮದ ಜತೆ ಹೇಳಿಕೊಂಡಿದ್ದಾರೆ. ಈಗ ಈ ಕಿಲಾಡಿ ಗಿಳಿಯ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಭಾರೀ ಸದ್ದು ಮಾಡುತ್ತಿದೆ.

ಇದನ್ನೂ ಓದಿ :ಮಸಾಲೆ ದೋಸೆಯ ಜತೆ ಸಾಂಬಾರ್ ಕೊಟ್ಟಿಲ್ಲ ಎಂದು ಕೋರ್ಟ್ ಮೆಟ್ಟಲೇರಿದ ಗ್ರಾಹಕ

Leave A Reply

Your email address will not be published.