Home News Love Jihad: ಪತಿ – ಪತ್ನಿಯ ಸಣ್ಣ ಜಗಳ ಬಿಡಿಸಲು ಮುಸ್ಲಿಂ ಗೆಳೆಯನ ಸಹಾಯ: ಕೊನೆಗೆ...

Love Jihad: ಪತಿ – ಪತ್ನಿಯ ಸಣ್ಣ ಜಗಳ ಬಿಡಿಸಲು ಮುಸ್ಲಿಂ ಗೆಳೆಯನ ಸಹಾಯ: ಕೊನೆಗೆ ಸ್ನೇಹಿತನ ಪತ್ನಿಗೆ ಗಾಳ ಹಾಕಿ ಲವ್ ಜಿಹಾದ್ !

Hindu neighbor gifts plot of land

Hindu neighbour gifts land to Muslim journalist

Love Jihad: ಗಂಡ-ಹೆಂಡತಿಯ ನಡುವೆ ಜಗಳ ಶುರುವಾಗಿದ್ದು, ಇವರಿಬ್ಬರ ಜಗಳ ಸರಿಪಡಿಸಲು ಗೆಳೆಯ ಸಲ್ಮಾನ್ ಎಂಬಾತ ಮುಂದಾಗಿದ್ದಾನೆ. ಆದರೆ, ಆತ ಸ್ನೇಹಿತನ ಪತ್ನಿಗೇ ಗಾಳ ಹಾಕಿರುವ (Love Jihad) ಘಟನೆ ಬೆಳಕಿಗೆ ಬಂದಿದೆ.

ನಗರದ ಖಾಸಗಿ ಕಾರ್ಖನೆಯೊಂದರಲ್ಲಿ ಕಾರ್ಮಿಕನಾಗಿರುವ ಅಜಿತ್ ಕಳೆದ ಮೂರು ವರ್ಷಗಳ ಹಿಂದೆ ಪೋಷಕರ ತೀವ್ರ ವಿರೋಧದ ನಡುವೆಯೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಯುವತಿಯನ್ನು ಮದುವೆಯಾಗಿದ್ದರು. ಇತ್ತೀಚೆಗೆ ಪತಿ-ಪತ್ನಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಇದನ್ನು ಬಗೆಹರಿಸಲು ಅಜಿತ್ ಬಾಲ್ಯದ ಸ್ನೇಹಿತ ಹಾಗೂ ಕಾರ್ಖಾನೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಸಲ್ಮಾನ್ ಮುಂದಾಗಿದ್ದಾನೆ. ಆದರೆ, ಆತ ಅಜಿತ್ ಪತ್ನಿಯನ್ನೇ ಮರುಳು ಮಾಡಿ ಬುಟ್ಟಿಗೆ ಹಾಕಿಕೊಂಡಿದ್ದಾನೆ.

ಅಜಿತ್ ಹಾಗೂ ಸಲ್ಮಾನ್ ತಮಿಳುನಾಡಿಗೆ ಹೋಗಿದ್ದರು. ಈ ವೇಳೆ ಅಜಿತ್ ಮೊಬೈಲ್ ನಿಂದ ಆತನ ಪತ್ನಿಗೆ ಸಲ್ಮಾನ್ ಕರೆ ಮಾಡಿದ್ದ. ಇಲ್ಲಿಂದ ಇವರಿಬ್ಬರು ಹತ್ತಿರವಾಗಿದ್ದರು. ನಂತರದಲ್ಲಿ ಅಜಿತ್ ಪತ್ನಿಯನ್ನು ತಂಗಿ ಎಂದು ಹೇಳಿಕೊಂಡು ಸಲ್ಮಾನ್ ಅವರ ಮನೆಗೆ ಬರುತ್ತಿದ್ದ. ಅಲ್ಲದೆ, ಪತಿ-ಪತ್ನಿಯರ ನಡುವೆ ಆಗಾಗ ಉಂಟಾಗುತ್ತಿದ್ದ ಜಗಳವನ್ನು ಸಲ್ಮಾನ್ ಬಗೆಹರಿಸುತ್ತಿದ್ದ.

ಒಂದು ಬಾರಿ ಅಜಿತ್‌ನ ಹೆಂಡತಿ ತನ್ನ ತವರು ಮನೆಗೆ ತೆರಳಿದ್ದಳು. ಮತ್ತೆ ಗಂಡನ ಮನೆಗೆ ಬರಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟುಗೊಂಡು ಅಜಿತ್ ತನ್ನ ಹೆಂಡತಿಗೆ ಹೊಡೆದಿದ್ದಾನೆ. ಈ ಘಟನೆಯ ನಂತರವೇ ಸಲ್ಮಾನ್ ಹಾಗೂ ಪತ್ನಿಯ ಖಾಸಗಿ ಫೋಟೋಗಳು ಅಜಿತ್ ಕಣ್ಣಿಗೆ ಬಿದ್ದಿದ್ದು, ಆಶ್ಚರ್ಯಗೊಂಡಿದ್ದಾನೆ. ಅವರಿಬ್ಬರ ನಡುವಿನ ಅಕ್ರಮ ಸಂಬಂಧ ದೃಢಪಟ್ಟಿದೆ.

ಈ ಪೋಟೋಗಳ ಬಗ್ಗೆ ಅಜಿತ್ ಪತ್ನಿಯನ್ನು ಪ್ರಶ್ನಿಸಿದಾಗ ವಿಚ್ಚೇದನ ನೀಡುವಂತೆ ಆಕೆ ಒತ್ತಾಯಿಸಿದ್ದಾಳೆ. ಅಲ್ಲದೆ, ತಾನು ಸಲ್ಮಾನ್ ನನ್ನು ಪ್ರೀತಿಸುತ್ತಿದ್ದೇನೆ. ಅವನೊಂದಿಗೆ ಜೀವನ ನಡೆಸುತ್ತೇನೆ ಎಂದಿದ್ದಾಳೆ. ಈ ಬಗ್ಗೆ ಅಜಿತ್ ತನ್ನ ಹೆಂಡತಿ ಲವ್ ಜಿಹಾದಿಗೆ ಬಲಿಯಾಗಿದ್ದಾಳೆ ಎಂದು ಆರೋಪಿದ್ದಾನೆ.

ಈ ಘಟನೆಯನ್ನು ಖಂಡಿಸಿರುವ ಹಿಂದೂ ಪರ ಕಾರ್ಯಕರ್ತರು, ಗಂಡನ ಮನೆಗೆ ವಾಪಸ್ ಬರುವಂತೆ ಹೆಂಡತಿಗೆ ತಿಳಿಹೇಳಿದ್ದಾರೆ.
ಆಕೆ ಲವ್ ಜಿಹಾದ್ ಗೆ ಬಲಿಯಾಗಿದ್ದು, ನಿರ್ಧಾರ ಬದಲಿಸದಿದ್ದರೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಯಾವುದೇ ದೂರು ಸ್ವೀಕರಿಸಿಲ್ಲ ಎಂದು ತಿಳಿದುಬಂದಿದೆ.

 

ಇದನ್ನು ಓದಿ: Auto Rikshaw Drivers: ‘ ಶಕ್ತಿ ‘ ಯಿಂದ ನಿಷ್ಯಕ್ತ ಆಟೋ ರಿಕ್ಷಾ ಚಾಲಕರು ! ತಿಂಗಳಿಗೆ 10,000 ರೂ. ಪರಿಹಾರ ಹಣ ಬೇಕೇ ಬೇಕೆಂದು ಹಠಕ್ಕೆ !