Bride Cheating: ಮದುವೆ ಆಗೊದನ್ನೇ ಬ್ಯುಸಿನೆಸ್ ಮಾಡ್ಕೊಂಡ ಈ ಮುಸ್ಲಿಂ ಯುವತಿ: 4 ರಾಜ್ಯ, 8 ಮದುವೆ, ಹಲವು ಸಂಸಾರ, ಲಕ್ಷ ಲಕ್ಷ ಲಪಟ್ !

Latest news shocking news Bride Cheating Muslim woman has started a business getting married

Bride Cheating: ಎಲ್ಲಿವರೆಗೆ ಮೋಸ ಹೋಗುತ್ತೇವೆ, ಅಲ್ಲಿಯವರೆಗೆ ಮೋಸ ಮಾಡುವವರು ಇರುತ್ತಾರೆ. ಹೌದು, ಇತ್ತೀಚಿಗೆ ಕಳ್ಳತನದ ರೂಪವೇ ಬದಲಾಗಿದೆ. ಅಂತೆಯೇ ಇಲ್ಲೊಬ್ಬಳು ಕಳ್ಳಿ ಪ್ರೀತಿ ಪ್ರೇಮದ ಕಥೆ ಕಟ್ಟಿ ತಾಳಿ ಕಟ್ಟಿಸಿಕೊಂಡು, ಕೆಲ ದಿನ ಬಾಳ್ವೆ ನಡೆಸಿ ಎಲ್ಲವನ್ನು ದೋಚಿಕೊಂಡು, ನಂತರ ನೈಸ್ ಆಗಿ ಪರಾರಿ (Bride Cheating) ಆಗುತ್ತಿದ್ದಳು.

ತಾರಮಂಗಲಂ ಪ್ರದೇಶದಲ್ಲಿ ವ್ಯಾಪಾರಿಯಾಗಿರುವ ಮೂರ್ತಿ ಎಂಬ
ವ್ಯಕ್ತಿ ರಶೀದಾ ಯುವತಿಯನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪರಿಚಯ ಮಾಡಿಕೊಂಡಿದ್ದಾರೆ. ಈ ಪರಿಚಯದ ನಂತರ ನಿರಂತರ ಮಾತು ಆರಂಭವಾಗಿ ಮಾತು ಪ್ರೀತಿಗೆ ತಿರುಗಿತು. ಅಷ್ಟೇ ಅಲ್ಲ ಅವರು ಕೆಲವು ದಿನಗಳ ಕಾಲ ರಿಲೇಷನ್ ಶಿಪ್ನಲ್ಲೂ ಇದ್ದರು .

ನಂತರ ಮೂರ್ತಿ ಮತ್ತು ರಶೀದಾ ಈ ವರ್ಷ ಮಾರ್ಚ್ 30 ರಂದು ವಿವಾಹವಾಗುವ ನಿರ್ಧಾರವನ್ನು ಮಾಡಿದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಆಕೆಯಲ್ಲಿ ಬದಲಾವಣೆ ಕಾಣತೊಡಗಿದೆ. ನಂತರ ಜುಲೈ 4 ರಂದು ರಶೀದಾ ಮನೆಯಲ್ಲಿದ್ದ 1.5 ಲಕ್ಷ ರೂಪಾಯಿ ಹಣ ಹಾಗೂ 5 ಪವನ್ ಚಿನ್ನಾಭರಣ ತೆಗೆದುಕೊಂಡು ಓಡಿ ಹೋಗಿದ್ದಾಳೆ.

ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಾಣೆಯಾಗಿರುವುದನ್ನು ನೋಡಿ, ತಾನು ಮೋಸ ಹೋಗಿರುವುದು ಸಹ ಮೂರ್ತಿಗೆ ಅರ್ಥವಾಯಿತು. ಬಳಿಕ ಸ್ಥಳೀಯ ಠಾಣೆಗೆ ಆಕೆಯ ವಿರುದ್ಧ ದೂರು ನೀಡಿದರು.

ಮೂರ್ತಿ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದಾಗ ರಶೀದಾಳ ಅಸಲಿ ಮುಖ ಬಯಲಾಯಿತು. ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ತೆರೆದು, ಶ್ರೀಮಂತ ಅವಿವಾಹಿತ ಹುಡುಗರನ್ನು ಟಾರ್ಗೆಟ್​ ಮಾಡಿ, ಪರಿಚಯಿಸಿಕೊಂಡು, ಪ್ರೀತಿಯ ಹೆಸರಲ್ಲಿ ನಂಬಿಸಿ ಮದುವೆಯಾಗಿ ವಂಚನೆ ಮಾಡುತ್ತಿದ್ದಳು ಎಂಬುದು ಬಯಲಾಗಿದೆ.

ಈಕೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಎಂಟು ಮಂದಿಯನ್ನು ಮದುವೆಯಾಗಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ರಶೀದಾ ಇದುವರೆಗೆ 4 ರಾಜ್ಯಗಳಲ್ಲಿ 8 ಮದುವೆ ಮಾಡಿಕೊಂಡಿದ್ದಾಳೆ. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಯುವತಿ ಮದುವೆ ಹೆಸರಲ್ಲಿ ಯುವಕರನ್ನು ಯಾಮಾರಿಸಿದ್ದಾಳೆ ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಿಸಿಕೊಂಡು ರಶೀದಾಗಾಗಿ ತೀವ್ರ ಶೋಧ ಆರಂಭವಾಗಿದ್ದು, ಇಂತಹ ಘಟನೆಗಳು ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಸಂಪರ್ಕ ಸಾಧಿಸುವಾಗ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.

 

ಇದನ್ನು ಓದಿ: Veerendra heggade: ಉಚಿತ ಬಸ್’ನಿಂದ ತುಂಬಿ ತುಳಿಕಿದ ಧರ್ಮಸ್ಥಳ ಖಜಾನೆ: ಮೀನು ತಿಂದು ದೇವಸ್ಥಾನ ಹೊಕ್ಕ ಗಿರಾಕಿಯನ್ನೇ ಮತ್ತೆ ಕ್ಷೇತ್ರಕ್ಕೆ ಆಹ್ವಾನಿಸಿದ ಹೆಗ್ಗಡೆ !

1 Comment
  1. Dayle Ekman says

    Hmm is anyone else encountering problems with the pictures on this blog loading? I’m trying to figure out if its a problem on my end or if it’s the blog. Any feed-back would be greatly appreciated.

Leave A Reply

Your email address will not be published.