HD Kumaraswamy: ವಿಪಕ್ಷ ನಾಯಕರಾಗಿ ಎಚ್‌. ಡಿ. ಕುಮಾರಸ್ವಾಮಿ ಆಯ್ಕೆಗೆ ಕ್ಷಣ ಗಣನೆ ? ಬಿಜೆಪಿಯಲ್ಲಿ ವಿಪಕ್ಷ ನಾಯಕನಿಗೂ ದುರ್ಬರವೇ ?

Latest news political news Counting the moment for HD Kumaraswamy election as the leader of the opposition

HD Kumaraswamy: ವಿಧಾನಸಭಾ ಚುನಾವಣಾ ಫಲಿತಾಂಶ ಬಂದು, ನೂತನ ಸರ್ಕಾರ ರಚನೆಯಾಗಿ, ಎರಡನೇ ಅಧಿವೇಶನ ಮುಗಿಯುತ್ತಾ ಬಂದರೂ ಕೂಡ ಕರ್ನಾಟಕದಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾತ್ರ ಆಗಿಲ್ಲ. 66 ಕ್ಷೇತ್ರಗಳಲ್ಲಿ ಗೆದ್ದಿರುವ ಬಿಜೆಪಿ ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ.ಆದರೆ ಈ ನಡುವೆ ಅಚ್ಚರಿ ಎಂಬಂತೆ ಪ್ರತಿಪಕ್ಷ ನಾಯಕನಾಗಿ ಎಚ್ ಡಿ ಕುಮಾರಸ್ವಾಮಿ ಅವರು ಆಯ್ಕೆಯಾಗಲಿದ್ದಾರಾ? ಎಂಬ ಅನುಮಾನ ಬಲವಾಗಿ ಕಾಡುತ್ತಿದೆ.

 

ಹೌದು, ವಿಧಾನ ಮಂಡಲ ಅಧಿವೇಶನ ಶುರುವಾಗಿ ಇನ್ನೇನು ಮುಗಿಯುವ ಹಂತ ತಲುಪಿದೆ. ಆದ್ರೆ ಪ್ರಮುಖ ವಿಪಕ್ಷ  ಬಿಜೆಪಿಯಲ್ಲಿ(BJP) ವಿಪಕ್ಷ ನಾಯಕ (opposition leader) ಯಾರೂ ಎನ್ನುವ ಸಸ್ಪೆನ್ಸ್ ಮುಂದುವರೆದಿದೆ. 16ನೇ ವಿಧಾನಸಭೆಯ ಮೊದಲ ಅಧಿವೇಶನ(karnataka assembly session) ಪ್ರತಿಪಕ್ಷ ನಾಯಕನಿಲ್ಲದೆ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ.  ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲು ವಿಪಕ್ಷ ನಾಯಕನ ಸೀಟ್ ಖಾಲಿ ಉಳಿಸಿ ಕಲಾಪ ನಡೆಯುತ್ತಿದೆ. ಆದರೆ ಈ ನಡುವೆ ಮಾಜಿ ಸಿಎಂ, ಎಚ್ ಡಿ ಕುಮಾರಸ್ವಾಮಿ(H D Kumaraswamy) ಅವರು ವಿಪಕ್ಷ ನಾಯಕನಾಗಿ ಆಯ್ಕೆಯಾಗುತ್ತಾರಾ? ಎಂಬ ಸಂಶಯ ಎಲ್ಲರನ್ನೂ ಬಲವಾಗಿ ಕಾಡಲು ಶುರುಮಾಡಿದೆ.

 

ಅಂದಹಾಗೆ ಈ ಹಿಂದೆ  ಬಿಜೆಪಿ-ಜೆಡಿಎಸ್ ಎರಡೂ ಮೈತ್ರಿ ಮಾಡಿಕೊಂಡು ಲೋಕಸಭೆಯಲ್ಲಿ ಸ್ಪರ್ಧಿಸಲು ಮುಂದಾಗಿವೆ ಎಂಬ ಗುಸು ಗುಸು ಎಲ್ಲೆಡೆ ಹರಿದಾಡಿತ್ತು. ಅಲ್ಲದೆ ಚುನಾವಣೆಗೆ ತಯಾರಿ ನಡೆಸುವ ಹಿನ್ನೆಲೆ ಜುಲೈ 16-17ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷಗಳ ಸಭೆ ನಡೆಯುತ್ತಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ವಿರೋಧಿ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸಲು ಜುಲೈ 18ರಂದು ದಿಲ್ಲಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ನಾಯಕರ ಸಭೆ ಇದೆ. ಕರ್ನಾಟಕದಿಂದ ಜೆಡಿಎಸ್‌ ಭಾಗವಹಿಸುವ ಸಾಧ್ಯತೆ ಇದೆ. ಈ ಸಭೆಯ ಬಳಿಕ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆಯಾಗುವ ಸಾಧ್ಯತೆ ಇದೆ.

 

ಇಷ್ಟೇ ಅಲ್ಲದೆ ಅಧಿಕೃತ ವಿರೋಧ ಪಕ್ಷ ಅಲ್ಲದಿದ್ದರೂ ಕೂಡ ಸದನದಲ್ಲಿ ಜೆಡಿಎಸ್(JDS) ನಾಯಕ  ಕುಮಾರಸ್ವಾಮಿ ಮಾತ್ರ ಹೆಜ್ಜೆ ಹೆಜ್ಜೆಗೂ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದು, ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳಿಗೆ ಬಿಜೆಪಿ ನಾಯಕರು ಕೂಡ ಬೆಂಬಲ ನೀಡುತ್ತಾ, ಉಘೇ ಉಘೇ ಎನ್ನುತ್ತಿರುವುದು ಈ ಎಲ್ಲಾ ಅನುಮಾನಗಳಿಗೆ ಎಡೆಮಾಡಿದೆ. ಇನ್ನೂ ಪ್ರಮುಖವಾದ ಅಂಶವೆಂದರೆ ಇತ್ತೀಚೆಗಷ್ಟೆ ಎಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ವಿರುದ್ಧ ಆರೋಪ ಮಾಡಿದಾಗ ‘ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಅವರ ಜೊತೆ ಜೊತೆಗೆ ಹೋರಾಟ ರೂಪಿಸಲಾಗುವುದು’ ಎಂದು ಸ್ವತಃ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ(B S Yadiyurappa) ಅಧಿಕೃತವಾಗಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರನ್ನೇ ಅಧಿಕೃತವಾಗಿ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತಾ..? ಅನ್ನೋ ಚರ್ಚೆ ಶುರುವಾಗಿದೆ.

 

ಇನ್ನು ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸುಳಿವನ್ನು ನೀಡಿದ್ದು, ಮಾಧ್ಯಮದವರೊಂದಿಗೆ ಔಪಚಾರಿಕವಾಗಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಜುಲೈ 18ರ ಬಳಿಕವೇ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದೆ ಎನ್ನಲಾಗಿದೆ. ಜುಲೈ 18ರಂದು ದಿಲ್ಲಿಯಲ್ಲಿ ನಡೆಯುವ ಎನ್‌ಡಿಎ ಸಭೆಯಲ್ಲಿ ಜೆಡಿಎಸ್‌ ಭಾಗವಹಿಸಿ ಬಿಜೆಪಿ ಜೊತೆ ಅಧಿಕೃತವಾಗಿ ಮೈತ್ರಿ ಮಾಡಿಕೊಂಡರೆ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯಲ್ಲಿ ಬಹಿರಂಗ ಕಿತ್ತಾಟ ನಡೆಯುತ್ತಿರುವ ಸಲುವಾಗಿ ಬಿಜೆಪಿ ಹೈಕಮಾಂಡ್‌ ಈ ರೀತಿಯ ನಡೆ ಅನುಸರಿಸಿದೆ ಎನ್ನಲಾಗಿದೆ.

 

ಕೆಲ ದಿನಗಳ ಹಿಂದೆ ಮಾಜಿ ಸಚಿವ ಮುರುಗೇಶ್‌ ನಿರಾಣಿ ಕೂಡ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ವಿಶೇಷ ವ್ಯಕ್ತಿ ಬರಲಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿಯ ಅಚ್ಚರಿಯ ನಡೆಯ ಬಗ್ಗೆ ಸುಳಿವನ್ನು ನೀಡಿದ್ದರು. ಅದಲ್ಲದೇ ಯಾರೇ ವಿಪಕ್ಷ ನಾಯಕನಾದರೂ ಅವರನ್ನು ಸ್ವಾಗತಿಸುತ್ತೇವೆ ಎಂದು ನಿರಾಣಿ ಹೇಳಿದ್ದರು. ಅಲ್ಲದೇ ಕಾಂಗ್ರೆಸ್‌ ಶಾಸಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ ಕೂಡ ಎಚ್‌ಡಿ ಕುಮಾರಸ್ವಾಮಿ ವಿಪಕ್ಷ ನಾಯಕ ಆಗಲಿದ್ದಾರೆ ಎಂದು ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ಟಿಕೆಟ್‌ ಸಿಗದೇ ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದಿದ್ದ ಲಕ್ಷ್ಮಣ್‌ ಸವದಿ ಹೇಳಿಕೆ ಕೂಡ ಪ್ರಮುಖವಾಗುತ್ತಿದೆ.

 

ಇನ್ನು ಸದನದ ಹುಲಿ-ಟಗರು ಎಂದು ಖ್ಯಾತಿ ಪಡೆದವರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಸಿದ್ದರಾಮಯ್ಯ(CM Siddaramaiah). ಇವರಿಬ್ಬರೂ ಸದನದಲ್ಲಿ ಗುಡುಗಿದರು ಅಂದರೆ ಇಡೀ ಸದನವೇ ನಿಶಬ್ಧವಾಗುತ್ತಿತು. ಆದರೀಗ ಯಡಿಯೂರಪ್ಪರನ್ನು ಸ್ವಪಕ್ಷೀಯರೇ ಸ್ತಬ್ಧ ಮಾಡಿ ಕೂರಿಸಿದ್ದಾರೆ. ಚುನಾವಣೆ ನಿಲ್ಲದೆ ಅವರು ಅಧಿವೇಶನದಿಂದ ದೂರ ಉಳಿದಿದ್ದಾರೆ. ಇನ್ನು ಸಿದ್ದರಾಮಯ್ಯನವರನ್ನು ಮಾತಿನಲ್ಲಿ ಮಣಿಸುವ ನಾಯಕ ಬೇರಾರು ಇಲ್ಲ. ಬಿಜೆಪಿ ಶಾಸಕರಲ್ಲಂತೂ ಅಂತಹ ಸಮರ್ಥರು ಸದ್ಯಕ್ಕಿಲ್ಲ ಎನ್ನಬಹುದು. ಸಿದ್ದರಾಮಯ್ಯ ವೇಗವನ್ನು ಕಡಿವಾಣ ಹಾಕಬಲ್ಲ ಶಾಸಕ ಯಾರಾದರೂ ಇದ್ದರೆ, ಅದು ಕುಮಾರಸ್ವಾಮಿ ಮಾತ್ರ. ಪೂರಕ ದಾಖಲೆಗಳನ್ನು ಸಂಗ್ರಹ ಮಾಡಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಬಲ್ಲರು. ಇದರಿಂದ ಮುಂದೆ ಅವರ ಪಕ್ಷವೇ ಅಧಿಕೃ ವಿಪಕ್ಷ ಆಗಬಹುದು. ಆಗ ಕುಮಾರಸ್ವಾಮಿ ವಿಪಕ್ಷ ನಾಯಕರಾಗುತ್ತಾರೆ. ಹೀಗಾಗಿ ಇದೇ ಕಾರಣಕ್ಕಾಗಿ ಬಿಜೆಪಿ ತನ್ನ ಪಕ್ಷದಿಂದ ವಿಪಕ್ಷ ನಾಯಕನ್ನು ಆಯ್ಕೆ ಮಾಡುತ್ತಿಲ್ಲ ಎನ್ನುಲಾಗುತ್ತಿದೆ.

 

ಇದನ್ನು ಓದಿ: The Kerala Story: ಕೇರಳ ಸ್ಟೋರಿ ಸಕ್ಸಸ್ ತಡೆಯಲು ಯಾರಿಗೂ ಸಾಧ್ಯ ಆಗಲಿಲ್ಲ, ಅದಾ ಶರ್ಮಾ ಕಮಲ್ ಹಾಸನ್ ಗೆ ಟಾಂಟ್

Leave A Reply

Your email address will not be published.