Legislative Council: ವಿಧಾನ ಪರಿಷತ್ತಿನಲ್ಲಿ ಹನಿಮೂನ್ ಬಗ್ಗೆ ಚರ್ಚೆ ! ಹನಿಮೂನ್ ಎಷ್ಟು ತಿಂಗಳು ನಡೆಯುತ್ತೆ – 6 ತಿಂಗಳು ಅಥವಾ 70 ವರ್ಷ ?

Latest news Legislative Council discussion about honeymoon in Vidhan Parishath

Legislative Council : ಈ ಹಿಂದೆ ವಿಧಾನಸೌಧದಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿತ್ತು. ಅವತ್ತು ಸ್ಪೀಕರ್‌ ಅವರ ಕುರ್ಚಿ ವಾಸ್ತು ಪ್ರಕಾರ ಉಂಟಾ ಇಲ್ಲವಾ ಎನ್ನುವ ಬಗ್ಗೆ ವಿಚಾರವಾಗಿ ಮಾತನಾಡಿ ಸದನ ನಗೆಗಡಲಲ್ಲಿ ತೇಲಿತ್ತು. ಇದೀಗ ವಿಧಾನ ಪರಿಷತ್’ನ (Legislative Council) ಸರದಿ. ಇಂದು ವಿಧಾನ ಪರಿಷತ್ ಕಲಾಪದಲ್ಲಿ ಜೆಡಿಎಸ್ ನ ಶರವಣ, ಗೃಹ ಸಚಿವ ಪರಮೇಶ್ವರ್ ನಡುವೆ ಚರ್ಚೆ ನಡೆದಿದ್ದು, ಹನಿಮೂನ್ ಸಮಯದ ಬಗ್ಗೆ ನಡೆದ ಚರ್ಚೆ ಹಾಸ್ಯಮಯ ಪ್ರಸಂಗಕ್ಕೆ ಎಡೆಮಾಡಿ ಕೊಟ್ಟಿತು. ಇವರಿಬ್ಬರ ಮಾತಿಗೆ ಇಡೀ ಸದನವೇ ನಗೆಗಡದಲ್ಲಿ ತೇಲಿದೆ.

ಸದನದಲ್ಲಿ ಜೆಡಿಎಸ್ ಸದಸ್ಯ ಟಿ ಎ ಶರವಣ, ಭ್ರಷ್ಟಾಚಾರದ ಗಂಗೋತ್ರಿ ಈಗ ಶುರುವಾಗಿದೆಯಾ? ಎಂದು ಸರ್ಕಾರವನ್ನು ತರಾಟೆ ತೆಗೆದುಕೊಂಡರು. ಆಗ ಸರ್ಕಾರ ಹನಿಮೂನ್ ಪೀರಿಯಡ್‌ನಲ್ಲಿದೆ ಎನ್ನುವ ಮಾತುಗಳು ಕೇಳಿಬಂತು. ಕಾಂಗ್ರೆಸ್ ಸರ್ಕಾರ ಬಂದು 2 ತಿಂಗಳು ಆಗುತ್ತಿದೆ. ಹನಿಮೂನ್ ಸಮಯ ಮುಗಿದುಹೋಯಿತು ಎಂದು ಶರವಣ ಹೇಳಿದ್ದಾರೆ.

ಈ ಮಾತಿಗೆ ಗೃಹ ಸಚಿವ ಪರಮೇಶ್ವರ್ ಅವರು, ಅಯ್ಯೋ ಹನಿಮೂನ್ ಸಮಯ ಮುಗಿದಿಲ್ಲ, ಇನ್ನೂ ಇದೆ ಸ್ವಾಮಿ. ಕನಿಷ್ಠ 6 ತಿಂಗಳಾದರೂ ಹನಿಮೂನ್ ಸಮಯ ಬೇಕು ಎಂದರು. ಇದಕ್ಕೆ ಪ್ರತ್ಯುತ್ತರವಾಗಿ ಇನ್ನು 6 ತಿಂಗಳು ಬೇಕಾ? ಆಯ್ತಾ ತಗೊಳ್ಳಿ ಎಂದು ಶರವಣ ಹೇಳಿದ್ದಾರೆ. ಈ ವೇಳೆ ಇವರಿಬ್ಬರ ಹಾಸ್ಯಮಯ ಸಂವಾದ ಆಲಿಸಿದ ಪರಿಷತ್ ನಲ್ಲಿ ನೆರೆದಿದ್ದ ಸದಸ್ಯರು ಬಿದ್ದು ಬಿದ್ದು ನಕ್ಕು ಸುಸ್ತಾದರು.

ಹಾಸ್ಯಮಯ ಸಂವಾದದ ಮಧ್ಯ ಪ್ರವೇಶಿಸಿದ ಬಿಜೆಪಿಯ ಡಿ.ಎಸ್.ಅರುಣ್, ಹೊಸಬರಿಗೆ ಹನಿಮೂನ್ ಸಮಯ 6 ತಿಂಗಳು ಇರುತ್ತದೆ. ಆದರೆ ಇವರು 70 ವರ್ಷದಿಂದ ಅಧಿಕಾರ ನಡೆಸಿಕೊಂಡು ಬರುತ್ತಿದ್ದಾರೆ. ಅವರಿಗೆ ಹನಿಮೂನ್ ಸಮಯ ಇರೊಲ್ಲ ಎಂದು ಹೇಳಿದರು. ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ, ಸಂಸಾರ ಚೆನ್ನಾಗಿದೆ ಎಂದು ರಿನಿವಲ್ ಆಗುತ್ತಿದೆ ಎಂದರು. ಇದಕ್ಕೆ ಟಾಂಗ್ ನೀಡಿದ ಶರವಣ ರಿನಿವಲ್ ಆಗುತ್ತಿರಬಹುದು. ಆದರೆ, ಆದಷ್ಟು ಬೇಗ ಎಕ್ಸ್‌ಪೆರಿಡೇಟ್ ಬರಲಿದೆ ಎಂದು ಹೇಳಿದರು. ಈ ಹಾಸ್ಯಮಯ‌ ಸಂವಾದಕ್ಕೆ ಇಡೀ ಸದನ ತಲೆದೂಗಿ ನಗೆಗಡಲಲ್ಲಿ ತೇಲಿತು.

ಬಳಿಕ ಮಾತನಾಡಿದ ಜೆಡಿಸ್ ಶರವಣ, ಸಿದ್ದರಾಮಯ್ಯನವರು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಕೇಂದ್ರದವರು 5 ಕೆಜಿ ಮತ್ತು ಕಾಂಗ್ರೆಸ್‌ ಸರ್ಕಾರ 10 ಕೆಜಿ ಸೇರಿಸಿ ಒಟ್ಟು 15 ಕೆಜಿ ಕೊಡಬೇಕಿತ್ತು. ಈ ಮೊದಲು ಅನ್ನಭಾಗ್ಯ ಬಜೆಟ್ ಕೊಟ್ಟಿದ್ದು ದೇವೆಗೌಡರು ಎಂದು ಹೇಳಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಜಮೀರ್ ಅಹಮದ್, ಸದನಕ್ಕೆ ತಪ್ಪು ಸಂದೇಶ ನೀಡಬೇಡಿ. ಅನ್ನಭಾಗ್ಯ ಯೋಜನೆ ತಂದಿದ್ದು ಸಿದ್ದರಾಮಯ್ಯನವರು, ಈ ಬಗ್ಗೆ ಸುಳ್ಳು ಹೇಳಬೇಡಿ ಎಂದು ಅವರು ಹೇಳಿದ್ದಾರೆ.

ಹಾಸ್ಯ ಕರಗಿ ಚರ್ಚೆ ಕಾವು ಪಡೆಯುತ್ತಿದ್ದಂತಯೇ ಪ್ರಿಯಾಂಕ ಖರ್ಗೆ ಮಾತನಾಡಿ, ‘ಶರವಣ ಅವರು ಚಿನ್ನದ ಸ್ಪೆಷಲಿಸ್ಟ್, ಸಿದ್ದರಾಮಯ್ಯನವರು ಅನ್ನಭಾಗ್ಯ ಸ್ಪೆಷಲಿಸ್ಟ್, ಅಕ್ಕಿಯನ್ನು ಸಿದ್ದರಾಮಯ್ಯನವರು ಕೊಡ್ತಾರೆ ಅದರ ಬಗ್ಗೆ ನಿಮಗೆ ಚಿಂತೆ ಬೇಡ ‘ ಎಂದು ತಿಳಿಸಿದ್ದಾರೆ. ಆಗ ಶರಬಣ ಅವರು ಅಸಮಾಧಾನ ವ್ಯಕ್ತಪಡಿಸಿ ನಮ್ಮ ವೃತ್ತಿಯನ್ನು ಇಲ್ಲಿಗೆ ತರಬೇಡಿ ಎಂದಿದ್ದಾರೆ. ಇದನ್ನು ಮುಂದಕ್ಕೆ ಬೆಳೆಸಲು ಇಷ್ಟಪಡದ ಪ್ರಿಯಾಂಕಾ ಖರ್ಗೆ ಅವರು ನಿಮಗೆ ಬೇಸರ ಆಗಿದ್ದರೆ ಸಾರಿ ಎಂದು ಹೇಳಿ ಅಲ್ಲಿಗೆ ಅಂತ್ಯಗೊಳಿಸಿದ್ದಾರೆ. ಒಟ್ಟಾರೆ ಚರ್ಚೆಗಳ ಜೊತೆಗೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಹಾಸ್ಯವನ್ನು ಸೇರಿಸಿಕೊಂಡು ಕಲಾಪ ನಡೆಸಿಕೊಂಡು ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ.

 

ಇದನ್ನು ಓದಿ: ಆಸ್ತಿಗಾಗಿ ಸಹೋದರರ ಸವಾಲ್: ಪುತ್ತೂರಿನ ಅಣ್ಣನನ್ನು ಚಾಕು ಇರಿದು ಕೊಲೆ ಮಾಡಿದ ತಮ್ಮ !

Leave A Reply

Your email address will not be published.