Intresting news: ಈ ಕುಟುಂಬದ ಎಲ್ಲ 9 ಜನರ ಹುಟ್ಟಿದ ದಿನಾಂಕ ಒಂದೇ, ಗಿನ್ನಿಸ್ ಸೇರಿದ ಫ್ಯಾಮಿಲಿಗೆ ಇದೆ ಇನ್ನೂ ಹಲವು ಬರ್ತ್ ಸ್ಪೆಶಾಲಿಟಿ !

Latest news imtresting news All 9 members of this family have the same birth date

Intresting news: ಕುಟುಂಬವೊಂದು ಇದೀಗ ಒಂದು ವಿಶೇಷ ಕಾರಣಕ್ಕಾಗಿ ಇಡೀ ಜಗತ್ತಿನ ಗಮನ ಸೆಳೆದಿದ್ದು, ಅದಕ್ಕಾಗಿ ಇದೀಗ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಈ ಅಸಾಧಾರಣ ಸಂಗತಿ ವಿಶ್ವಾದ್ಯಂತ ಮೆಚ್ಚುಗೆಯನ್ನು ಪಡೆದಿದ್ದು, ಇದೀಗ ಅದು ಇತಿಹಾಸದಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಪಡೆದಿದೆ. ಅಂತಹಾ ಅತ್ಯಂತ ಅಪರೂಪವಾದ ಅಥವಾ ಇನ್ನೂ ಸರಿಯಾಗಿ ಹೇಳಬೇಕೆಂದರೆ, ಹೆಚ್ಚು ಕಮ್ಮಿ ಅಸಾಧ್ಯವೇ ಎನ್ನಿಸಬಲ್ಲ ಘಟನೆಯೊಂದು ನಡೆದು ಗಿನ್ನಿಸ್ ಸೇರಿದ್ದು ಪಾಕಿಸ್ತಾನದಲ್ಲಿ.

ಪಾಕಿಸ್ತಾನದ 9 ಜನರ ಕುಟುಂಬದ ಪ್ರತಿಯೊಬ್ಬ ಸದಸ್ಯರುಗಳು ಕೂಡಾ ಒಂದೇ ದಿನಾಂಕದಲ್ಲಿ ಜನಿಸಿದ್ದು, ಪ್ರಪಂಚದಾದ್ಯಂತದ ಅದು ಜನರ ಆಸಕ್ತಿಯನ್ನು ಕೆರಳಿಸಿದೆ. ಇತ್ತೀಚೆಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿದ ನಂತರ ಗಿನ್ನೆಸ್ ಸಂಸ್ಥೆಯು ಈ ಒಂಬತ್ತು ಜನರ ಕುಟುಂಬವು ಒಂದೇ ದಿನದಲ್ಲಿ ಹುಟ್ಟಿದೆ ಎಂಬ ವಿಷಯವನ್ನು ಅಧಿಕೃತವಾಗಿ ಘೋಷಿಸಿದೆ.

ಪಾಕಿಸ್ತಾನದ ಲರ್ಕಾನಾದ ಮಂಗಿ ಎಂಬ ಕುಟುಂಬವು ಗಿನ್ನೆಸ್ ವಿಶ್ವ ದಾಖಲೆ ಬರೆದಿದೆ. ತಂದೆ ಅಮೀರ್ ಅಲಿ ಮತ್ತು ತಾಯಿ ಖುದೇಜಾ ಅವರ 7 ಮಕ್ಕಳು ಕೂಡಾ ಒಂದೇ ಜನ್ಮ ದಿನಾಂಕದಲ್ಲಿ ಹುಟ್ಟಿದ್ದಾರೆ. ಈಗ 19 ರಿಂದ 30 ವರ್ಷ ವಯಸ್ಸಿನ ಏಳು ಮಕ್ಕಳಾದ ಸಿಂಧೂ, ನಂತರದ ಹೆಣ್ಣು ಅವಳಿಗಳಾದ ಸಾಸುಯಿ ಮತ್ತು ಸಪ್ನಾ, ಅಮೀರ್, ಅಂಬರ್ ಮತ್ತು ಕೊನೆಯ ಗಂಡು ಅವಳಿಗಳಾದ ಅಮ್ಮರ್ ಮತ್ತು ಅಹ್ಮರ್, ಒಂದೇ ಜನ್ಮದಿನವನ್ನು ಹೊಂದಿದ್ದಾರೆ: ಅವರೆಲ್ಲರೂ ಆಗಸ್ಟ್ 1 ನೇ ತಾರೀಖಿನಂದು ಜನಿಸಿದ್ದು, ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಒಂದೇ ದಿನದಲ್ಲಿ ಜನಿಸಿದ ಅತಿ ಹೆಚ್ಚು ಒಡಹುಟ್ಟಿದವರಿಗಾಗಿ ಇದು ವಿಶ್ವ ದಾಖಲೆಯಾಗಿದೆ.

ಇನ್ನೊಂದು ವಿಶೇಷವೆಂದರೆ, ಒಂದೇ ದಿನ ಹುಟ್ಟಿದ ಮಕ್ಕಳ ಅಪ್ಪ-ಅಮ್ಮಆದ ಅಮೀರ್ ಮತ್ತು ಖುದೇಜಾ ಕೂಡ ಆಗಸ್ಟ್ 1, 1991 ರಲ್ಲಿ ತಮ್ಮ ಜನ್ಮದಿನದಂದು ( ಆಗಸ್ಟ್ 1 ) ತಾರೀಖಿನಂದೆ ಮದುವೆಯಾಗಿದ್ದರು ! ಅಂದರೆ ಆ ಕುಟುಂಬದ ಅಪ್ಪ-ಅಮ್ಮ ಮತ್ತು ಏಳು ಮಕ್ಕಳ ಜನ್ಮದಿನ ಒಂದೇ ಆಗಿದ್ದು, ಅವರಿಬ್ಬರೂ ಮದುವೆಯಾದ ದಿನ ಕೂಡ ಒಂದೇ ದಿನಾಂಕವಾಗಿದೆ. ಒಂದೇ ಹುಟ್ಟುಹಬ್ಬದ ಅವಳಿಗಳನ್ನು ಮಾತ್ರವಲ್ಲ, ಈ ಕುಟುಂಬವು ಎರಡು ಸೆಟ್ ಅವಳಿಗಳನ್ನು ಹೊಂದಿದ್ದು, ಅವರುಗಳ ಎಲ್ಲರ ಹುಟ್ಟು ಹಬ್ಬ ಕೂಡಾ ಒಂದೇ ದಿನ ಅನ್ನೋದು ಅತ್ಯಂತ ಅಪರೂಪದಲ್ಲಿ ಅಪರೂಪ.

ಅಮೇರಿಕಾದ ಕಮ್ಮಿನ್ಸ್ ಕುಟುಂಬದಲ್ಲಿ 1952 ಮತ್ತು 1966 ರ ನಡುವೆ ಫೆಬ್ರವರಿ 20 ರಂದು ಜನಿಸಿದ ಐದು ಮಕ್ಕಳು ಹಿಂದಿನ ದಾಖಲೆಯನ್ನು ಹೊಂದಿದ್ದರು. ಇದೀಗ ಪಾಕಿಸ್ತಾನದ ಈ ಕುಟುಂಬವು ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ.

1992 ರ ಆಗಸ್ಟ್ 1 ರಂದು ತನ್ನ ಮೊದಲ ಮಗು ಸಿಂಧೂ ಜನಿಸಿದಾಗ ಅಮೀರ ಮತ್ತು ಆತನ ಪತ್ನಿಗೆ ಆಶ್ಚರ್ಯ ಮತ್ತು ಸಂತೋಷ ಕೂಡಾ ಆಗಿತ್ತು. ಅವರು ಅದನ್ನು “ದೇವರ ಕೊಡುಗೆ ಎಂದು ಪರಿಗಣಿಸಿದರು. ಆನಂತರ ಕುಟುಂಬದಲ್ಲಿ ಆದ ಎಲ್ಲಾ ಜನನಗಳು ಆಗಸ್ಟ್ ಒಂದರಂದೇ ಜರುಗಿವೆ. ಆ ಕುಟುಂಬದಲ್ಲಿ ಹುಟ್ಟಿದ ಎಲ್ಲಾ ಮಕ್ಕಳು ನೈಸರ್ಗಿಕವಾಗಿ ಜನನ ಹೊಂದಿದ್ದು ಯಾವುದೇ ಸಿಜೇರಿಯನ್ ಆಗಿಲ್ಲ ಎಂಬುದನ್ನು ಗಿನ್ನೆಸ್ ಸಂಸ್ಥೆ ಖಚಿತಪಡಿಸಿದೆ. ಅಲ್ಲದೆ, ಎಲ್ಲಾ ಮಕ್ಕಳು ತಿಂಗಳು ತುಂಬಿ ಹುಟ್ಟಿದ್ದು, ಯಾವುದೇ ಪ್ರಿಮೆಚೂರ್ ಹೆರಿಗೆಯಗಲೀ ಅಥವಾ ಪ್ರಚೋದನೆಯ ಮೂಲಕ ಹೆರಿಗೆ ಮಾಡಿಸಿದ ವಿಷಯವಾಗಲಿ ಕಂಡುಬಂದಿಲ್ಲ.

ಒಂದೇ ದಿನದಲ್ಲಿ ಜನಿಸಿದ ಅತಿ ಹೆಚ್ಚು ಅವಳಿ ಒಡಹುಟ್ಟಿದವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎರಡು ಸೆಟ್ ಅವಳಿಗಳಿಗೆ ಜನ್ಮ ನೀಡಿದ ಆರನೇ ದೃಢಪಡಿಸಿದ ಪ್ರಕರಣ ಇದಾಗಿದೆ. ಅಮೀರ್ ಮತ್ತು ಖುದೇಜಾ ತಮ್ಮ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಪ್ರತಿ ವರ್ಷವೂ ದೊಡ್ಡದಾಗಿ ಆಚರಿಸಿಕೊಳ್ಳುತ್ತಿದ್ದು ಆಗಸ್ಟ್ 1ನೆಯ ತಾರೀಕು – ಒಂದೇ ದಿನದಂದು – ಎಲ್ಲರೂ ಹುಟ್ಟು ಹಬ್ಬವನ್ನು ಮತ್ತು ಅಪ್ಪ ಅಮ್ಮಂದಿರ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಾರೆ. ಗಿನ್ನೆಸ್ ಗ್ಲೋಬಲ್ ರೆಕಾರ್ಡ್ಸ್ ಪ್ರಶಸ್ತಿಯನ್ನು ಪಡೆದ ನಂತರ ಅಮೀರ್ “ಈ ವಿಶ್ವ ದಾಖಲೆಯನ್ನು ಪಡೆದ ಕಾರಣಕ್ಕಾಗಿ ನಾನು ದೇವರಿಗೆ ಹೆಚ್ಚು ಕೃತಜ್ಞತೆ ಹೊಂದಿದ್ದೆನೆ” ಎಂದು ಹೇಳಿದ್ದಾರೆ. ಆಗಸ್ಟ್ 1 ತನ್ನ ಕುಟುಂಬಕ್ಕೆ ಅತ್ಯಂತ ಅದೃಷ್ಟ ಎಂದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

 

ಇದನ್ನು ಓದಿ: Knowledge Story: ದೇಹದ ಈ ಪಾರ್ಟ್ ಎಂದಿಗೂ ಬೆವರೋದಿಲ್ಲ ! ಅದ್ಯಾವುದಪ್ಪಾ ಅಂತ ತಿಳ್ಕೊಲ್ಲೋ ಕುತೂಹಲ ಇದ್ಯಾ, ಇಲ್ಲಿದೆ ನೋಡಿ ಉತ್ತರ ! 

Leave A Reply

Your email address will not be published.