Home News Free current Scheme: ಗೃಹಜ್ಯೋತಿ ಅರ್ಜಿದಾರರಿಗೆ ಬಿಗ್ ಶಾಕ್ ಕೊಟ್ಟ ಇಂಧನ ಇಲಾಖೆ !! ಇಂತವರ...

Free current Scheme: ಗೃಹಜ್ಯೋತಿ ಅರ್ಜಿದಾರರಿಗೆ ಬಿಗ್ ಶಾಕ್ ಕೊಟ್ಟ ಇಂಧನ ಇಲಾಖೆ !! ಇಂತವರ ಅರ್ಜಿ ಕ್ಯಾನ್ಸಲ್- ಪರಿಹಾರವೇನು?

Free current Scheme

Hindu neighbor gifts plot of land

Hindu neighbour gifts land to Muslim journalist

Free current Scheme: ರಾಜ್ಯ ಸರ್ಕಾರದ(State Government) 5 ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ(Gruha jyothi) ಯೋಜನೆಗೆ ಜುಲೈ ಒಂದರಿಂದ ಚಾಲನೇ ದೊರೆತಿದ್ದರೂ ಅರ್ಜಿ ಹಾಕಲು ಜೂನ್ 18 ರಿಂದಲೇ ಅವಕಾಶ ಮಾಡಿಕೊಡಲಾಗಿತ್ತು. ಕೋಟ್ಯಾಂತರ ಜನರು ಈಗಾಗಲೇ ಅರ್ಜಿ ಹಾಕಿದ್ದಾರೆ. ಆದರೆ ಈಗಾಗಲೇ ಅರ್ಜಿ ಸಲ್ಲಿಸಿದವರಿಗೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ.

ಹೌದು, ಗೃಹಜ್ಯೋತಿ(Gruhajyothi) ಅರ್ಜಿ ಸಲ್ಲಿಸಲು ಜೂನ್ 18 ರಂದು ಆರಂಭಿಸಲಾಯಿತು. ಹೆಚ್ಚಿನವರು ಅತೀ ಉತ್ಸಾಹದಿಂದ ತಾ ಮುಂದು ನಾ ಮುಂದು ಎನ್ನುತ್ತ ಅರ್ಜಿ ಹಾಕಿದ್ದರು. ಆದರೆ ಆರಂಭದಲ್ಲಿಯೇ ಈ ಸರ್ವರ್ ಕೈಕೊಟ್ಟಿದ್ದು ಸರ್ಕಾರಕ್ಕೆ ದೊಡ್ಡ ತಲೆನೋವು ತಂದಿತ್ತು. ನಂತರ ಅದು ಸರಿಯಾಗಿ ಇದೀಗ ಕೋಟ್ಯಾಂತರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈಗ ಅರ್ಜಿ ಸಲ್ಲಿಸಿದವರಿಗೆ ಬಿಗ್ ಶಾಕ್ ಎದುರಾಗಿದ್ದು, ಆರಂಭದಲ್ಲಿ ಅರ್ಜಿ ಸಲ್ಲಿಸಿದವರ ಕೆಲವು ಅರ್ಜಿಗಳು ತಿರಸ್ಕೃತವಾಗಿದೆ !!

ಕಾರಣ ಏನು?
ಗೃಹಜ್ಯೋತಿ ಯೋಜನೆಗೆ ಆರಂಭದಲ್ಲಿಯೇ ಅರ್ಜಿ ಸಲ್ಲಿಸಿದವರ ಅರ್ಜಿಗಳೇ ಈಗ ತಿರಸ್ಕೃತ ವಾಗಿದ್ದು ಕಾರಣ ಏನೆಂಬುದು ಸಹ ತಿಳಿದು ಬಂದಿದೆ. ಪ್ರಾರಂಭದಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ತಾಂತ್ರಿಕ ದೋಷ (Technological System Error) ಹೊಂದಿರುವುದು ಇಲ್ಲಿನ ಮುಖ್ಯ ಕಾರಣ ಎನ್ನಲಾಗುತ್ತಿದೆ. ಮೊದಲ ಎರಡು ದಿನದ ಅರ್ಜಿ ಸಲ್ಲಿಕೆಗಳು ಲೋಪ ಉಂಟಾಗಿದ್ದು ತಾಂತ್ರಿಕವಾಗಿ ದೋಷಗಳಾಗಿದೆ. ಹಾಗಾಗಿ ಆ ಎರಡು ದಿನದ ಬಹುತೇಕ ಅರ್ಜಿ ತಿರಸ್ಕೃತ ಆಗಿದೆ.

ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದವರು ಅರ್ಜಿ ಆರಂಭ ಆದ ಮೊದಲೆರಡು ದಿನ ಸರ್ವರ್ ಡೌನ್ ಇತ್ತು‌ ಹಾಗಾಗಿ ಈ ಅರ್ಜಿ ಲಿಂಕ್ ಆಗದಿರುವ ಸಾಧ್ಯತೆ ತುಂಬಾ ಹೆಚ್ಚಾಗಿ ಇದೆ. ಹಾಗಾಗಿ ಅರ್ಜಿ ಸಲ್ಲಿಸಿ ಸ್ವೀಕೃತ ಎಂದು ಬಂದರೂ ಅಪ್ಲೇ ಆಗದಿರಲು ಬಹುದು ಅದಕ್ಕೊಸ್ಕರ ಒಮ್ಮೆ ಪರಿಶೀಲನೆ ಮಾಡಿ ಪ್ರಸ್ತುತ ಸ್ಟೇಟಸ್ ಯಾವ ರೀತಿ ಇದೆ ಎಂದು ತಿಳಿಯುವಂತೆ ಇಂಧನ ಇಲಾಖೆ ಹೇಳಿದೆ. ಅಲ್ಲದೆ ಮರು ಅರ್ಜಿ ಕೂಡ ಸಲ್ಲಿಸಬಹುದಾಗಿದೆ.

ತಿಳಿಯುವ ಪ್ರಕ್ರಿಯೆ ಹೇಗೆ?
• ಸೇವಾ ಸಿಂಧು ಪೋರ್ಟಲ್ ಹೋಗಬೇಕು. https://sevasindhugs.karnataka.gov.in/ ಗೆ ನೀವು ಲಾಗಿನ್ ಆಗಿ ಬಳಿಕ ಅದರಲ್ಲಿ ಗೃಹಜ್ಯೋತಿ ಮೇಲೆ ಕ್ಲಿಕ್ ಮಾಡಿ.
• ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯುವ ಕುರಿತಾದ ಆಪ್ಶನ್ ಮೇಲೆ ಕ್ಲಿಕ್ ಮಾಡಿ‌.
• ಇಷ್ಟು ಪ್ರಕ್ರಿಯೆ ಮುಗಿದ ಮೇಲೆ ನಿಮ್ಮ ಇಂಧನ ಇಲಾಖೆಯ ವಿಭಾಗ ಆಯ್ಕೆ ಮಾಡಬೇಕು ಅಂದರೆ ಮೆಸ್ಕಾಂ, ಬೆಸ್ಕಾಂ ಇತರ ಆಯ್ಕೆಯಲ್ಲಿ ನಿಮ್ಮದು ಯಾವುದು ಎಂದು ಆಯ್ಕೆ ಮಾಡಿ.
• ಬಳಿಕ ಅದರಲ್ಲಿ ನಿಮ್ಮ ಅಕೌಂಟ್ ಐಡಿ ಎಂಟರ್ ಮಾಡುವಂತೆ ತಿಳಿಸುತ್ತಾರೆ.
• ನೀವು ಕರೆಂಟ್ ಬಿಲ್ ಸಂಖ್ಯೆ ನಮೋದಿಸಿರುವ ಗ್ರಾಹಕರ ಸಂಖ್ಯೆ ಯನ್ನು ಅಕೌಂಟ್ ಐಡಿಯಲ್ಲಿ ಹಾಕಿ.ಬಳಿಕ ಚೆಕ್ ಸ್ಟೇಟಸ್ ಎಂದು ಬರುತ್ತದೆ. ಅಲ್ಲಿ ಕ್ಲಿಕ್ ಮಾಡಬೇಕು.
• ಬಳಿಕ ಅಲ್ಲಿ ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿ ತಿಳಿಯಲಿದೆ. ಅದರಲ್ಲಿ Your Application for Gruha Jyothi Scheme Received and Sent to ESCOM for Processing ಎಂದು ತಿಳಿಸುತ್ತದೆ.
• ಈ ರೀತಿ ಬಂದಿದ್ದೇ ಆಗಿದ್ದರೆ ನಿಮ್ಮ ಅರ್ಜಿ ಸಲ್ಲಿಕೆಯಾಗಿದೆ ಆ ಅರ್ಜಿ ಪರಿಶೀಲನೆಯ ಹಂತದಲ್ಲಿದೆ.
• ಒಂದು ವೇಳೆ ಇದರ ಹೊರತಾಗಿ Data not Found, Please Register to Gruha Joythi Scheme ಎಂದು ಬಂದರೆ ರಿಜಿಸ್ಟರ್ ಸರಿಯಾಗಿಲ್ಲ ಎಂದು ಅರ್ಥ. ನಿಮ್ಮ ಅರ್ಜಿ ಪ್ರಕ್ರಿಯೆ ಸರಿಯಾಗಿಲ್ಲ ನೀವು ರಿಜಿಸ್ಟರ್ ಮಾಡಿ ಎಂದು ಬರುತ್ತದೆ.

ಸಹಾಯವಾಣಿ
ಯೋಜನೆಯಲ್ಲಿ ಯಾವುದಾದರೂ ಗೊಂದಲಗಳಿದ್ದರೆ, ಅದನ್ನು ತಕ್ಷಣ ಬಗೆಹರಿಸಲು ಸಹಾಯವಾಣಿಯನ್ನು ತೆರೆಯಲಾಗಿದೆ. ಯೋಜನೆ ಹಾಗೂ ಅರ್ಜಿ ಸಲ್ಲಿಕೆ ಸಂಬಂಧ ಯಾವುದೇ ಗೊಂದಲಗಳಿದ್ದರೂ ಹೆಚ್ಚಿನ ಮಾಹಿತಿಗೆ 24/7 ಸೇವೆಯ 1912 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ https://sevasindhugs.karnataka.gov.in/gruhajyothi ಗೆ ಭೇಟಿ ನೀಡಬಹುದು ಎಂದು ಇಂಧನ ಇಲಾಖೆ ತಿಳಿಸಿದೆ.

 

ಇದನ್ನು ಓದಿ: Copra: ಕೊಬ್ಬರಿ ಬೆಳೆಗಾರರಿಗೆ ಬಂಪರ್ ಗುಡ್ ನ್ಯೂಸ್ ; ಬೆಂಬಲ ಬೆಲೆ ಘೋಷಿಸಿದ ಸರ್ಕಾರ, ಇಂದಿನಿಂದಲೇ ಜಾರಿ !