Gruha jyothi: ‘ಗೃಹಜ್ಯೋತಿ’ ಅರ್ಜಿ ಸಲ್ಲಿಕೆಗೆ ಕೊನೆಗೂ ಡೆಡ್ ಲೈನ್ ಕೊಟ್ಟ ಗೌರ್ಮೆಂಟ್ !! ಈ ದಿನದೊಳಗೆ ಹಾಕ್ಲಿಲ್ಲ ಅಂದ್ರೆ ಯಾರಿಗೂ ಸಿಗೋಲ್ಲ ಫ್ರೀ ಕರೆಂಟ್!!
Latest news congress guarantee Last Date for Submission of Griha Jyoti' Application
Gruha jyothi: ರಾಜ್ಯ ಸರ್ಕಾರದ(State Government) 5 ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ(Gruha jyothi) ಯೋಜನೆಗೆ ಜುಲೈ ಒಂದರಿಂದ ಚಾಲನೇ ದೊರೆತಿದ್ದರೂ ಅರ್ಜಿ ಹಾಕಲು ಜೂನ್ 18 ರಿಂದಲೇ ಅವಕಾಶ ಮಾಡಿಕೊಡಲಾಗಿತ್ತು. ಲಕ್ಷಾಂತರ ಜನರು ಈಗಾಗಲೇ ಅರ್ಜಿ ಹಾಕಿದ್ದಾರೆ. ಆದರೀಗ ಸರ್ಕಾರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಘೋಷಣೆ ಮಾಡಿದೆ.
ಹೌದು, ನಿನ್ನೆ ದಿನ ವಿಧಾನಸಭಾ ಅಧಿವೇಶನದಲ್ಲಿ(Assembly session) ಮಾತನಾಡಿದ ಇಂಧನ ಸಚಿವ ಕೆ ಜೆ ಜಾರ್ಜ್(K J George) ಅವರು ಈ ತಿಂಗಳಲ್ಲೇ ಗೃಹಜ್ಯೋತಿ ಯೋಜನೆಯಡಿ ಅರ್ಜಿಗೆ ಗಡುವು ನೀಡಿದ್ದೇವೆ. ಈ ತಿಂಗಳ 26, 27 ರ ರವರೆಗೆ ಅರ್ಜಿ ಹಾಕಬಹುದು. ಈ ಡೆಡ್ ಲೈನ್ ಒಳಗೆ ಅರ್ಜಿ ಹಾಕಿದವರಿಗೆ ಮಾತ್ರ ಈ ತಿಂಗಳ ವಿದ್ಯುತ್ ಉಚಿತವಾಗಿ ಸಿಗಲಿದೆ. ನಂತರ ಅರ್ಜಿ ಹಾಕಿದವರಿಗೆ ಮುಂದಿನ ತಿಂಗಳಿನಿಂದ ಸಿಗುತ್ತದೆ ಎಂದು ಸ್ಪಷ್ಟನೆ ನೀಡಿದರು.
ಅಂದಹಾಗೆ ಜುಲೈನಲ್ಲಿ(July) ಬಳಸಲಾಗಿರುವ ವಿದ್ಯುತ್ ಬಿಲ್ ಆಗಸ್ಟ್ ನಲ್ಲಿ ಬರುತ್ತದೆ. 200 ಯೂನಿಟ್ ಗಿಂತ ಕೆಳಗೆ ವಿದ್ಯುತ್ ಬಳಸಿರುವವರು ವಿದ್ಯುತ್ ಕಟ್ಟುವ ಹಾಗಿಲ್ಲ. ಎಲ್ಲಾ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಅಲ್ಲದೆ ಇನ್ನೆರಡು ತಿಂಗಳಲ್ಲಿ ಕೆಇಬಿ(KEB) ಕಚೇರಿಗಳಲ್ಲಿ ಅದಾಲತ್ ನಡೆಸ್ತೇವೆ. ಯಾರೆಲ್ಲ ಗೃಹಜ್ಯೋತಿಯಡಿ ಅರ್ಜಿ ಹಾಕುವುದನ್ನು ಬಿಟ್ಟು ಹೋಗಿದ್ದಾರೆ ಅವರಿಗಾಗಿ ಈ ಅದಾಲತ್ ನಡೆಸುತ್ತೇವೆ. ಅದಕ್ಕಾಗಿಯೇ ನಾವು ಈ ಯೋಜನೆಗೆ ಕಟ್ ಆಫ್ ಡೇಟ್ ಇನ್ನೂ ಕೊಡಲಿಲ್ಲ. ಆದಷ್ಟು ಎಲ್ಲ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನ ಮಾಡ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.