CM Siddaramaiah: ಮುಖ್ಯಮಂತ್ರಿ ಆಗಿರುವಾಗಲೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆಂದು ಶಾಕ್ ಕೊಟ್ಟ ಸಿದ್ದರಾಮಯ್ಯ..!! ಕಾರಣವೇನು?

Latest Karnataka political news Political retirement if adjustment is proved Siddaramaiah challenges to yatnal

Siddaramaiah Political retirement: ರಾಜಕೀಯ ರಂಗದಲ್ಲಿ ಸೀನಿಯರ್ ರಾಜಕಾರಣಿಗಳು(Senior politicians) ಅದೇ ರಾಗ ಅದೇ ಹಾಡು ಎಂಬಂತೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ, ನಿವೃತ್ತಿ ಪಡೆಯುತ್ತೇನೆ ಎಂದು ಹೇಳುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಚುನಾವಣೆ ಸಂದರ್ಭದಲ್ಲಿ ಇದು ತುಸು ಹೆಚ್ಚು ಅನ್ನಬಹುದು. ಆದರೀಗ ಅಚ್ಚರಿ ಎಂಬಂತೆ ಚುನಾವಣೆ ಮುಗಿದು, ರಾಜ್ಯದ ಮುಖ್ಯಮಂತ್ರಿ ಆಗಿರುವ ಸಿಎಂ ಸಿದ್ದರಾಮಯ್ಯನವರು(CM Siddaramaiah) ತಮ್ಮ ರಾಜಕೀಯ ನಿವೃತ್ತಿ ಕುರಿತು ಮತ್ತೆ ಮಾತನಾಡಿದ್ದಾರೆ.

ಹೌದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ(Assembly electio) ‘ಇದೇ ನನ್ನ ಕೊನೆಯ ಚುನಾವಣೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ರಾಜಕೀಯ ನಿವೃತ್ತಿ ಪಡೆಯುತ್ತೇನೆ’ (Siddaramaiah Political retirement) ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೀಗ ಸಿದ್ದರಾಮಯ್ಯ ಕರ್ನಾಟಕದ ಸಿಎಂ(Karnataka CM)ಆದರೂ ಕೂಡ ರಾಜಕೀಯ ನಿವೃತ್ತಿ ಸುಳಿವು ನೀಡಿದ್ದಾರೆ. ಈ ಬಗ್ಗೆ ನಿನ್ನೆಯ ಅಧಿವೇಶನದಲ್ಲಿ ಗುಡುಗಿದ್ದಾರೆ. ಅಂದಹಾಗೆ ಸಿದ್ದು, ರಾಜ್ಯದ ಮುಖ್ಯಮಂತ್ರಿ ಆಗಿ ಇನ್ನೂ ಎರಡು ತಿಂಗಳು ಕಳೆದಿಲ್ಲ. ಈ ನಡುವೆಯೇ ಯಾಕೆ ನಿವೃತ್ತಿ ಮಾತು ಎಂದು ಯೋಚಿಸ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.

ರಾಜ್ಯದಲ್ಲೀಗ ನೂತನ ಸರ್ಕಾರದ ಎರಡನೇ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಅಧಿವೇಶನದಲ್ಲಿ ನಿನ್ನೆ ದಿನ ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಯತ್ನಾಳ್(Basavangowda yatnal) ನಡುವೆ ಮಾತಿನ ಚಕಮಕಿ ನಡೆಯಿತು. ಪದೇ ಪದೇ ಮಾತನಾಡಿದ್ರೆ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲ್ಲ ಎಂದು ಸಿದ್ದರಾಮಯ್ಯ ಹೇಳಿದಾಗ, ‘ಈ ರೀತಿ ಪದೇ ಪದೇ ಹೇಳುತ್ತಿದ್ದೀರಂದ್ರೆ ನೀವು ಯಾರ ಜೊತೆಗೋ ಅಡ್ಜಸ್ಟ್‌ಮಂಟ್(Adjustment) ಮಾಡ್ಕೊಂಡಿದೀರ ಅಂತಾಯ್ತು’ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯನವರು ‘ನಾನು ರಾಜಕೀಯದಲ್ಲಿ ಅಡ್ಜೆಸ್ಟ್ ಮೆಂಟ್ ಮಾಡಿರುವುದು ಸಾಬೀತಾದರೆ ರಾಜಕೀಯವಾಗಿ ನಿವೃತ್ತಿ ಘೋಷಣೆ(Political retirement) ಮಾಡುತ್ತೇನೆ ಎಂದು’ ಮರು ಸವಾಲು ಹಾಕಿದರು.

ಅಂದಹಾಗೆ ಸದನದಲ್ಲಿ ವಾಕ್ಸಮರದ ನಡುವೆ ‘ನನಗಿರುವ ಮಾಹಿತಿ ಪ್ರಕಾರ ಯತ್ನಾಳ್ ವಿರೋಧ ಪಕ್ಷದ ನಾಯಕ ಆಗುವುದಿಲ್ಲ. ಆರಗ ಜ್ಞಾನೇಂದ್ರ(Araga jnanendra) ಆಕಾಂಕ್ಷಿ ಅಲ್ಲ.‌ ಆದರೆ ಅಶ್ವತ್ಥ ನಾರಾಯಣ, ಬಸವರಾಜ ಬೊಮ್ಮಾಯಿ ಆಕಾಂಕ್ಷಿಗಳಾಗಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ತಿರುಗೇಟು ‌ನೀಡಿದ‌ ಯತ್ನಾಳ್, ನೀವೆಷ್ಟೇ ಬೆಂಕಿ‌ ಹಚ್ಚಿದರೂ ಹಚ್ಕೊಳ್ಳಲ್ಲ ಅದು. ನೀವು ನನಗೆ ಪದೇ ಪದೇ ವಿಪಕ್ಷ ನಾಯಕ ಆಗಲ್ಲ ಅಂತಿದ್ರೆ ನೀವು ಯಾರ ಜತೆಗೋ ಅಡ್ಜಸ್ಟ್‌ಮೆಂಟ್ ಮಾಡ್ಕೊಂಡಿದೀರ ಅಂತಾಯ್ತು ಎಂದರು.

ಯತ್ನಾಳ್ ಆರೋಪಕ್ಕೆ ಸಿಎಂ ತಿರುಗೇಟು ನೀಡಿ, ನಾನು ಯಾರ ಜತೆಗೂ ನನ್ನ ಜೀವನದಲ್ಲಿ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಿಲ್ಲ.‌ ಯಾರ ಜತೆಗಾದರೂ ಅಡ್ಜಸ್ಟ್‌ಮೆಂಟ್ ಮಾಡ್ಕೊಂಡಿರೋದನ್ನು ಸಾಬೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದರು. ಅಲ್ಲದೆ 1983 ರಿಂದ ಸದನದಲ್ಲಿದ್ದೇನೆ, ನನ್ನ ಜತೆ ಸದನಕ್ಕೆ ಬಂದವರಲ್ಲಿಬಿ.ಆರ್.ಪಾಟೀಲ್, ದೇಶ ಪಾಂಡೆ ಬಿಟ್ಟು ಬೇರೆಯವರು ಇಲ್ಲ. ಅಂದಿನಿಂದ ಇಲ್ಲಿಯವರೆಗೆ ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದು ಸಿದ್ದರಾಮಯ್ಯ ನುಡಿದರು.

ಇದನ್ನೂ ಓದಿ: ಅಬ್ಬಬ್ಬಾ..! ಮಹಿಳೆಯ ಎದೆಯ ಮಿದುವಿನಲ್ಲಿ 5 ಜೀವಂತ ಹಾವು ಪತ್ತೆ !

Leave A Reply

Your email address will not be published.