Good news for farmers: ಫ್ರೀ ಕರೆಂಟ್ ಬೆನ್ನಲ್ಲೇ ರಾಜ್ಯ ರೈತರಿಗೆ ಮತ್ತೊಂದು ಹೊಸ ಭಾಗ್ಯ- ಸರ್ಕಾರದಿಂದ ಮಹತ್ವದ ಘೋಷಣೆ !!

Latest Karnataka news good news for farmer to farming community three face power to be restored in the morning

Good news for farmers: ರಾಜ್ಯ ಸರ್ಕಾರ(State Government) ತನ್ನ 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದರೊಂದಿಗೆ ಇತರ ಹಲವಾರು ಯೋಜನೆಗೂ ಅನುಮೋದನೆ ನೀಡಿ ಹಲವಾರು ವರ್ಗಗಳ ಜನರಿಗೆ ಅನುಕೂಲ ಮಾಡಿಕೊಡುತ್ತಿದೆ. ಅಂತೆಯೇ ಇದೀಗ ರಾಜ್ಯದ್ಯಂತ ಫ್ರೀ ಕರೆಂಟ್(Free current) ಜಾರಿ ಮಾಡಿದ ಸರ್ಕಾರವು ರೈತ ವರ್ಗಕ್ಕೆ ಕರೆಂಟ್ ವಿಚಾರವಾಗಿ ಭರ್ಜರಿ ಗುಡ್ ನ್ಯೂಸ್(Good news for farmers) ನೀಡಿದೆ.

ಹೌದು, ಮುಂಗಾರು ಮಳೆ ಕೈಕೊಡುತ್ತಿದ್ದು, ಬೇಸಿಗೆಯ ಬಿಸಿಲಿನ ಝಳ ದಿನೇ ದಿನೆ ಹೆಚ್ಚುತ್ತಿರುವ ಮಧ್ಯೆಯೇ ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆಯೂ ಹೆಚ್ಚಿದೆ. ಪರಿಣಾಮ, ಒಂದೆಡೆ ಕುಡಿವ ನೀರಿಗೆ ಸಮಸ್ಯೆ ಎದುರಾಗಿದ್ದರೆ ಮತ್ತೊಂದೆಡೆ ಬೆಳೆಗಳನ್ನು ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಆದರೀಗ ಈ ಬೆನ್ನಲ್ಲೇ ರಾಜ್ಯದ ರೈತರಿಗೆ ಕೃಷಿ ಸಚಿವ(Agricultural Minister) ಚಲುವರಾಯಸ್ವಾಮಿ(Chaluvaraya swamy) ಗುಡ್ ನ್ಯೂಸ್ ನೀಡಿದ್ದು, ಬೆಳಗ್ಗೆಯೂ ತ್ರೀ ಫೇಸ್ ವಿದ್ಯುತ್ ನೀಡಲಾಗುವುದು ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವರು ರಾತ್ರಿ ಹೊತ್ತು ಹೊಲಗಳಿಗೆ ನೀರು ಹಾಯಿಸಲು ಹೋಗುವುದು ಬಹಳ ಅಪಾಯಕಾರಿ, ಕಾಡು ಪ್ರದೇಶಗಳಲ್ಲಿ ವನ್ಯ ಜೀವಿಗಳಿಂದ ಅಪಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಬೆಳಗ್ಗೆ ಸಮಯದಲ್ಲೇ ತ್ರಿ ಫೇಸ್(Three feas) ನಲ್ಲಿ ವಿದ್ಯುತ್ ಕೊಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಹೀಗಾಗಿ ಬೆಳಗ್ಗೆಯೂ ತ್ರಿ ಫೇಸ್ ನಲ್ಲಿ ವಿದ್ಯುತ್ ಕೊಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಅಧಿವೇಶನ(Session) ನಡೆದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: CM Siddaramaiah: ಮುಖ್ಯಮಂತ್ರಿ ಆಗಿರುವಾಗಲೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆಂದು ಶಾಕ್ ಕೊಟ್ಟ ಸಿದ್ದರಾಮಯ್ಯ..!! ಕಾರಣವೇನು?

Leave A Reply

Your email address will not be published.